ಉದಯಪುರದಲ್ಲಿ ಕನ್ಹೈಯ್ಯಾಲಾಲ ಇವರ ಅಂಗಡಿ ಇರುವ ಮಾರುಕಟ್ಟೆಯಲ್ಲಿ ಈಗಲೂ ಭಯದ ವಾತಾವರಣ !

೧೫ ರಲ್ಲಿ ೧೩ ಅಂಗಡಿಗಳು ಈಗಲೂ ಮುಚ್ಚಿವೆ.

ಉದಯಪುರ (ರಾಜಸ್ಥಾನ) – ಇಲ್ಲಿಯ ಮಲಾದಾಸ ಮಾರ್ಗದಲ್ಲಿರುವ ಮಾರುಕಟ್ಟೆಯಲ್ಲಿ ಈಗಲೂ ಭಯದ ವಾತಾವರಣವಿದೆ. ಇದೇ ಮಾರುಕಟ್ಟೆಯಲ್ಲಿ ಕನ್ಹೈಯ್ಯಾಲಾಲ ಇವರ ಅಂಗಡಿ ಇದೆ. ಇದೇ ಅಂಗಡಿಯಲ್ಲಿ ರಿಯಾಝ್ ಅತ್ತಾರಿ ಮತ್ತು ಮಹಮ್ಮದ್ ಗೌಸ್ ಜೂನ್ ೨೮ ರಂದು ಕನ್ಹೈಯ್ಯಾಲಾಲ ಇವರ ಶಿರಚ್ಛೇದ ಮಾಡಿ ಹತ್ಯೆ ಮಾಡಿದ್ದರು. ಈ ಘಟನೆಯ ನಂತರ ಹಿಂದೂಗಳಲ್ಲಿ ಈಗಲೂ ಇಲ್ಲಿಯ ಅಂಗಡಿಗಳನ್ನು ತೆರೆಯುವ ಧೈರ್ಯ ಆಗುತ್ತಿಲ್ಲ. ಯಾವ ಭೂತ ಮಹಲ್ ಓಣಿಯಲ್ಲಿ ಕನ್ಹೈಯ್ಯಾಲಾಲ ಇವರ ಅಂಗಡಿ ಇತ್ತೋ ಅದೇ ಓಣಿಯಲ್ಲಿ ಒಟ್ಟು ೧೫ ಅಂಗಡಿಗಳಿವೆ ಆದರೆ ಆ ಘಟನೆಯ ನಂತರ ಇದರಲ್ಲಿ ೧೩ ಅಂಗಡಿಗಳು ಈಗಲೂ ತೆರೆದಿಲ್ಲ. ಇದರಿಂದ ಹಿಂದೂಗಳಲ್ಲಿ ಎಷ್ಟು ಭಯ ನಿರ್ಮಾಣವಾಗಿದೆ ಎಂದು ಗಮನಕ್ಕೆ ಬರುತ್ತದೆ. ವಿಶೇಷವೆಂದರೆ ಅಂಗಡಿ ಮಾಲೀಕರಲ್ಲಿ ಅಷ್ಟೇ ಅಲ್ಲದೆ ಈಗ ಹಿಂದೂಗಳಲ್ಲಿಯೂ ಭಯ ಇರುವುದು ತಿಳಿಯುತ್ತದೆ ಏಕೆಂದರೆ ಆ ಓಣಿಯಲ್ಲಿ ಖರೀದಿಗಾಗಿ ಬರುವ ಧೈರ್ಯ ಕಾಣುತ್ತಿಲ್ಲ. ಕನ್ಹೈಯ್ಯಾಲಾಲ ಇವರ ಹತ್ಯೆಯ ನಂತರ ಅನೇಕ ಅಂಗಡಿ ಮಾಲೀಕರಿಗೆ ಸಂಚಾರವಾಣಿಯಿಂದ ಬೆದರಿಕೆ ಕರೆ ಬಂದಿರುವುದರಿಂದ ಈ ಸ್ಥಿತಿ ನಿರ್ಮಾಣವಾಗಿದೆ .

ನೂಪುರ ಶರ್ಮಾ ಇವರು ಒಂದು ಸಮಾಚಾರ ವಾಹಿನಿಯ ಚರ್ಚಾ ಸತ್ರದಲ್ಲಿ ಮಾತನಾಡುವಾಗ ಮಹಮ್ಮದ್ ಪೈಗಂಬರ್ ಇವರ ತಾಥಾಕಥಿತ ಅವಮಾನ ಮಾಡುವ ಹೇಳಿಕೆ ನೀಡಿರುವುದರಿಂದ ಶರ್ಮಾ ಇವರ ಹತ್ಯೆ ಮಾಡುವ ಕರೆ ಮತಾಂಧರಿಂದ ಸತತವಾಗಿ ನೀಡಲಾಗುತ್ತಿದೆ. ಇಂತಹದರಲ್ಲಿ ಕನ್ಹೈಯ್ಯಾಲಾಲ ಇವರು ನೂಪುರ ಶರ್ಮಾ ಇವರ ಸಮರ್ಥನೆ ಮಾಡುವ ಪೋಸ್ಟ್ ಪ್ರಸಾರ ಮಾಡಿರುವ ಕಾರಣದಿಂದ ಅವರ ಹತ್ಯೆ ಮಾಡಲಾಯಿತು. ಅವರು ಈ ಪ್ರಕರಣದಲ್ಲಿ ಕ್ಷಮೆ ಯಾಚಿಸಿದ್ದರು ಹಾಗೂ ಅವರನ್ನು ಬಂಧಿಸಲಾಗಿತ್ತು. ಆದರೂ ಅವರ ಹತ್ಯೆ ಮಾಡಲಾಯಿತು.

೧. ಕನ್ಹೈಯ್ಯಾಲಾಲ ಇವರ ಅಂಗಡಿಯ ಪಕ್ಕದಲ್ಲಿ ಮಹಾವೀರ ಸೇಠ ಇವರ ಲೇಟೆಸ್ಟ್ ಟೈಲರ್ ಹೆಸರಿನ ಅಂಗಡಿ ಇದೆ. ಅವರ ಅಭಿಪ್ರಾಯವೆಂದರೆ ಕನ್ಹೈಯ್ಯಾಲಾಲ ಇವರ ಹತ್ಯೆಗೆ ೨೦ ಕಿಂತ ಹೆಚ್ಚು ದಿನ ಕಳೆದರೂ ಈಗಲೂ ಜನ ಹೆದರಿದ್ದಾರೆ. ನನ್ನ ಅಂಗಡಿಯಲ್ಲಿ ಇಬ್ಬರು ಕೆಲಸ ಮಾಡುತ್ತಾರೆ. ಅದರಲ್ಲಿ ಒಬ್ಬ ಕಾಯಿಲೆಬಿದ್ದು ಮಲಗಿದ್ದಾನೆ ಹಾಗೂ ಇನ್ನೊಬ್ಬ ಈ ಘಟನೆಯಿಂದ ಹೆದರಿದ್ದಾನೆ. ಅವರು ಕೆಲಸಕ್ಕೆ ಬರಲು ಹಿಂಜರಿಯುತ್ತಾರೆ. ನಮ್ಮ ಅಂಗಡಿಯ ಹೊರಗೆ ಪೊಲೀಸ್ ಬಂದೋಬಸ್ ಇರುವುದರಿಂದ ಬರುವ ಜನರಲ್ಲಿ ಭಯ ಇದೆ.

೨. ಇಲ್ಲಿಯ ಚಿನ್ನದ ವ್ಯಾಪಾರಿ ಮಯಂಕ ಲೋಧಾ ಇವರು ‘ನಮ್ಮಲ್ಲಿಗೆ ಬರುವ ಮೊದಲು ಗ್ರಾಹಕರು ಸಂಚಾರವಾಣಿಯಲ್ಲಿ ಮಾರುಕಟ್ಟೆಯ ಸ್ಥಿತಿಯ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಾರೆ. ಏನಾದರೂ ಸ್ಥಿತಿ ಸಾಮಾನ್ಯ ಇದ್ದರೆ, ಆಗ ಅವರು ಅಂಗಡಿಗೆ ಬರುವ ನಿರ್ಣಯ ತೆಗೆದುಕೊಳ್ಳುತ್ತಾರೆ’ ಎಂದರು.

೩. ಇಲ್ಲಿಯ ಪೊಲೀಸ ಅಧಿಕಾರಿ ವಿಕಾಸ ಶರ್ಮಾ ಇವರ ಅಭಿಪ್ರಾಯವೆಂದರೆ, ಈಗ ಮಾರುಕಟ್ಟೆಯಲ್ಲಿ ಸಾಮಾನ್ಯ ವಾತಾವರಣ ಇದೆ .(ಮಾರುಕಟ್ಟೆ ವಾತಾವರಣ ಸಾಮಾನ್ಯವಾಗಿದ್ದರೆ ಆಗ ಜನರ ಓಡಾಟ ನಡೆಯುತ್ತಿತ್ತು ಆದರೆ ಪ್ರತ್ಯಕ್ಷದಲ್ಲಿ ಆ ಪರಿಸ್ಥಿತಿ ಇಲ್ಲ ಹಾಗಾದರೆ ಪೊಲೀಸರು ಈ ರೀತಿ ಏಕೆ ಹೇಳುತ್ತಾರೆ ? – ಸಂಪಾದಕರು) ನಾವು ವ್ಯಾಪಾರಿ ಮತ್ತು ವ್ಯಾಪಾರಿ ಸಂಘಟನೆಯ ಪದಾಧಿಕಾರಿಗಳ ಜೊತೆ ಪ್ರತಿದಿನ ಸಂಪರ್ಕದಲ್ಲಿದ್ದೇವೆ. ಕಳೆದ ಕೆಲವು ದಿನದಿಂದ ೩ ಬೇರೆ ಬೇರೆ ಬೆದರಿಕೆ ಸಿಕ್ಕಿರುವ ನಂತರ ವಿಚಾರಣೆ ಮಾಡಲಾಗುತ್ತಿದೆ. ಮಾರುಕಟ್ಟೆಯಲ್ಲಿ ಯಾವುದೇ ವ್ಯಾಪಾರಿಗೆ ಹೆದರುವ ಆವಶ್ಯಕತೆ ಇಲ್ಲ. (ಜನರಲ್ಲಿ ಪೊಲೀಸರ ಬಗ್ಗೆ ವಿಶ್ವಾಸ ಇಲ್ಲದೇ ಇರುವುದರಿಂದ ಪೊಲೀಸರು ಈ ರೀತಿ ಎಷ್ಟೇ ಕರೆ ನೀಡಿದರೂ ಜನರಿಗೆ ತಮ್ಮ ರಕ್ಷಣೆಯಾಗುವ ವಿಶ್ವಾಸ ಎಲ್ಲಿಯ ವರೆಗೆ ಆಗುವುದಿಲ್ಲವೋ, ಅಲ್ಲಿಯವರೆಗೆ ಜನರು ಭಯಮುಕ್ತರಾಗಲು ಸಾಧ್ಯವಿಲ್ಲ ! – ಸಂಪಾದಕರು)

ಸಂಪಾದಕೀಯ ವಿಭಾಗ

ರಾಜಸ್ಥಾನದಲ್ಲಿ ಕಾಂಗ್ರೆಸ್ ಸರಕಾರ ಇರುವುದರಿಂದ ಕನ್ಹೈಯ್ಯಾಲಾಲ ಇವರ ಶಿರಚ್ಛೇದದ ಘಟನೆ ನಂತರ ಕೂಡ ಹಿಂದೂಗಳಲ್ಲಿ ಪೊಲೀಸ್ ಮತ್ತು ಸರಕಾರ ನಮ್ಮ ರಕ್ಷಣೆ ಮಾಡುವರು ಎಂಬ ವಿಶ್ವಾಸ ನಿರ್ಮಾಣ ಆಗಿಲ್ಲ. ಇದೇ ಇತರಿಂದ ಗಮನಕ್ಕೆ ಬರುತ್ತದೆ. ಈ ಸ್ಥಿತಿ ಬದಲಾಯಿಸಲು ಹಿಂದೂ ರಾಷ್ಟ್ರವೇ ಉಪಾಯವಾಗಿದೆ.

ಹಿಂದೂಗಳು ಬೆರಳೆಣಿಕೆಯಷ್ಟು ಜಿಹಾದಿಗಳಿಗೆ ಹೆದರುತ್ತಿರುವುದರ ಪರಿಣಾಮ ಇದು. ಇದರ ವಿರುದ್ಧ ಹಿಂದೂಗಳು ಸಂಘಟಿತರಾಗಿ ತಮ್ಮ ಸಂರಕ್ಷಣೆ ಮಾಡಿಕೊಳ್ಳಬೇಕು.