ಸಂಭಾವ್ಯ ಆರ್ಥಿಕ ಇಳಿಕೆ ಎದುರಿಸಲು ವಿದೇಶಿ ಕಂಪನಿಗಳಿಂದ ಸಿಬ್ಬಂದಿ ಕಡಿತ

ಹೊಸ ದೆಹಲಿ – ಕಳೆದ ಎರಡೂವರೆ ವರ್ಷದ ಕಾಲಾವಧಿಯಲ್ಲಿ ಬಂದಿರುವ ಕೊರೊನಾ ಮಹಾಮಾರಿಯಿಂದ ಪ್ರಪಂಚದ ಆರ್ಥಿಕ ಪರಿಸ್ಥಿತಿಯ ದೃಷ್ಟಿಯಿಂದ ಇನ್ನೂ ಸುಧಾರಿಸಿಲ್ಲ. ಬರುವ ಸಮಯದಲ್ಲಿ ಅನೇಕ ದಶಕಗಳಲ್ಲೇ ಎಲ್ಲಕ್ಕಿಂತ ದೊಡ್ಡ ಆರ್ಥಿಕ ಇಳಿಕೆ ಪ್ರಪಂಚ ಮಟ್ಟದಲ್ಲಿ ಎದುರಿಸಬೇಕಾಗಬಹುದು ಎಂದು ಹೇಳಲಾಗುತ್ತದೆ. ಕೆಲವರ ಅಭಿಪ್ರಾಯದ ಪ್ರಕಾರ ಆರ್ಥಿಕ ಇಳಿಕೆ ಪ್ರಾರಂಭವಾಗಿದೆ. ಕಳೆದ ೫ – ೬ ತಿಂಗಳಿನಲ್ಲಿ ಜಾಗತಿಕ ಮಟ್ಟದಲ್ಲಿ ಕಂಪನಿಗಳ ಶೆಯಾರ್ಸ್ ದೊಡ್ಡ ಪ್ರಮಾಣದಲ್ಲಿ ಇಳಿಕೆ ಕಂಡಿವೆ. ಇದರಲ್ಲಿ ಗೂಗಲ್, ಅಮಜಾನ್, ಆಪಲ್, ಫೇಸ್ಬುಕ್, ಮೈಕ್ರೋಸಾಫ್ಟ್, ಟೆಸ್ಲಾ, ಇಂತಹ ಜಗತ್ತಿನ ದಿಗ್ಗಜ ಕಂಪನಿಗಳು ಸೇರಿದ್ದು, ಅವರು ಬರುವ ಆರ್ಥಿಕ ಇಳಿಕೆಯನ್ನು ಎದುರಿಸಲು ಸಿಬ್ಬಂದಿ ವರ್ಗದ ಕಡಿತ ಶುರು ಮಾಡಿದ್ದಾರೆ.

೧. ಅಲ್ಫಾಬೆಟ್/ಗೂಗಲ್: ಗೂಗಲಿನ ಮುಖ್ಯ ಕಂಪನಿ ಆಗಿರುವ ಅಲ್ಫಾಬೆಟ್ ಹೊಸ ಸಿಬ್ಬಂದಿ ನೇಮಕದಲ್ಲಿ ಕಡಿತಗೊಳಿಸಲಾಗಿದೆ. ಮುಖ್ಯ ಕಾರ್ಯಕಾರಿ ಅಧಿಕಾರಿ ಸುಂದರ್ ಪಿಚ್ಚಯಿ ಇವರು ಬೇರೆ ಕಂಪನಿಗಳ ರೀತಿ ಆರ್ಥಿಕ ಇಳಿಕೆಯ ಪರಿಣಾಮ ನಮ್ಮ ಮೇಲೆಯು ಆಗುವುದೂ ಎಂದು ಹೇಳಿದ್ದಾರೆ. ಗೂಗಲ್ ನಲ್ಲಿ ಇಂದು ೧ ಲಕ್ಷ ೬೪ ಸಾವಿರ ಸಿಬ್ಬಂದಿಗಳಿದ್ದಾರೆ.

೨. ಅಮಜಾನ್: ಜಗತ್ತಿನ ಎಲ್ಲಕ್ಕಿಂತ ದೊಡ್ಡ ಸಿಬ್ಬಂದಿ ವರ್ಗ ಇರುವ ಕಂಪನಿಗಳಲ್ಲಿ ಅಮಜಾನ್ ಕೂಡ ಒಂದು. ಮಾರ್ಚ್ ೨೦೨೨ ವರೆಗೆ ಅಮೆಜಾನ್ ನಲ್ಲಿ ೧೬ ಲಕ್ಷ ಸಿಬ್ಬಂದಿಗಳಿದ್ದರು. ಏಪ್ರಿಲ್ ತಿಂಗಳಿನಲ್ಲಿ ಕಂಪನಿ ‘ಅವರ ಹತ್ತಿರ ಆವಶ್ಯಕತೆಕ್ಕಿಂತಲೂ ಹೆಚ್ಚಿನ ಸಿಬ್ಬಂದಿಗಳಿದ್ದಾರೆ. ಅದರಿಂದ ಕೆಲಸದ ಮೇಲೆ ಪರಿಣಾಮವಾಗುತ್ತಿದೆ’ ಎಂದು ಒಂದು ಪ್ರಕಟಣೆಯಲ್ಲಿ ತಿಳಿಸಿತ್ತು.

೩. ಆಪಲ್ : ಆರ್ಥಿಕ ಇಳಿಕೆ ಬಗ್ಗೆ ಆಪಲ್ ಇಲ್ಲಿಯವರೆಗೂ ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ ಆದರೆ ಬ್ಲೂಮ್ ಬರ್ಗ್ ನ ಒಂದು ವರದಿಯ ಪ್ರಕಾರ ಆರ್ಥಿಕ ಇಳಿಕೆ ಎದುರಿಸಲು ಹೊಸ ಸಿಬ್ಬಂದಿ ನೇಮಕ ಮಾಡಲಾಗುತ್ತಿಲ್ಲ. ಕೆಲವು ವಿಭಾಗಗಳಲ್ಲಿ ಖರ್ಚು ಕಡಿಮೆ ಮಾಡುವುದರ ಬಗ್ಗೆ ಯೋಚನೆ ನಡೆಯುತ್ತಿದೆ. ಸಪ್ಟೆಂಬರ್ ೨೦೨೧ ವರೆಗೆ ಕಂಪನಿಯ ಹತ್ತಿರ ೧ ಲಕ್ಷ ೫೪ ಸಾವಿರ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದರು.

೪. ಮೈಕ್ರೋಸಾಫ್ಟ್: ಕಂಪನಿಯು ಮಹತ್ವದ ವಿಭಾಗಗಳಲ್ಲಿ ಹೊಸ ನೇಮಕಾತಿ ಕಡಿಮೆ ಮಾಡಿರುವುದಾಗಿ ಘೋಷಿಸಿದೆ. ಕಂಪನಿಯು ಕೆಲವು ದಿನಗಳ ಹಿಂದರೆ ಸಿಬ್ಬಂದಿ ಕಡಿತ ಮಾಡಿದ್ದು, ೨೦೨೧ ರ ಕೊನೆಗೆ ಅವರ ಹತ್ತಿರ ೧ ಲಕ್ಷ ೮೧ ಸಾವಿರ ಸಿಬ್ಬಂದಿಗಳು ಇದ್ದರು.

೫. ಟೆಸ್ಲಾ : ಪ್ರಪಂಚದ ಎಲ್ಲಕ್ಕಿಂತ ಶ್ರೀಮಂತ ವ್ಯಕ್ತಿ ಆಗಿರುವ ಇಲಾನ್ ಮಸ್ಕ್ ಇವರ ಒಡೆತನದ ಟೆಸ್ಲಾ ಜೂನ್ ತಿಂಗಳಲ್ಲಿ೨೦೦ ಸಿಬ್ಬಂದಿಗಳನ್ನು ಮನೆಗೆ ಕಳುಹಿಸಿದರು. ಮಸ್ಕ್ ಅವರು ಸ್ವತಃ ಆರ್ಥಿಕ ಇಳಿಕೆಯ ಸಾಧ್ಯತೆ ಬಗ್ಗೆ ಹೇಳಿದ್ದಾರೆ. ಮುಂದಿನ ೩ ತಿಂಗಳಗಳಲ್ಲಿ ಶೇಕಡ ೧೦ ರಷ್ಟು ಸಿಬ್ಬಂದಿಗಳ ಕೆಲಸ ಹೋಗಬಹುದು. ೨೦೨೧ ರ ಕೊನೆಯವರೆಗೆ ಟೆಸ್ಲಾ ಹತ್ತಿರ ೧ ಲಕ್ಷ ಸಿಬ್ಬಂದಿಗಳಿದ್ದರು.

ಇತಿಹಾಸದಲ್ಲಿ ಎಲ್ಲಕ್ಕಿಂತ ಕೆಟ್ಟ ಆರ್ಥಿಕ ಸ್ಥಿತಿ ಎದುರಿಸಲು ಸಿದ್ಧರಾಗಬೇಕು ! – ಮಾರ್ಕ್ ಝುಕರ್ ಬರ್ಗ್

ಫೇಸ್ಬುಕ್ ನ ಮುಖ್ಯ ಕಂಪನಿ ಆಗಿರುವ ಮೆಟಾ ಇಂಜಿನಿಯರ್ ಗಳ ನೇಮಕಾತಿಯಲ್ಲಿ ಶೇಕಡ ೩೦ ರಷ್ಟು ಕಡಿತ ಮಾಡಿದೆ. ಮುಖ್ಯ ಕಾರ್ಯಕಾರಿ ಅಧಿಕಾರಿ ಮಾರ್ಕ್ ಝುಕರ್ ಬರ್ಗ್ ಹೇಳಿದರು, ಇತಿಹಾಸದಲ್ಲೇ ಎಲ್ಲಕ್ಕಿಂತ ಕೆಟ್ಟ ಆರ್ಥಿಕ ಪರಿಸ್ಥಿತಿ ಎದುರಿಸಲು ಸಿದ್ಧರಾಗಬೇಕು. ಈ ವರ್ಷದ ಮಾರ್ಚ್ ವರೆಗೆ ಕಂಪನಿಯ ಹತ್ತಿರ ೭೮ ಸಾವಿರ ಸಿಬ್ಬಂದಿಗಳು ಇದ್ದರು.