ಬಾಂಗ್ಲಾದೇಶ ಮತ್ತು ಭಾರತದ ಹಿಂದೂಗಳ ಮೇಲಾಗುತ್ತಿರುವ ಅತ್ಯಾಚಾರದ ಬಗ್ಗೆ ಜಾಗತಿಕ ಮಟ್ಟದಲ್ಲಿ ಮಂಡಿಸಿದ ಸಂಸದ ಗೀರ್ತ ವಿಲ್ಡರ್ಸ್ !

ವಿವಿಧ ದೇಶದ ವಿದೇಶಾಂಗ ಸಚಿವರಿಗೆ ಪ್ರಶ್ನಾವಳಿ ಕಳಿಸಿದ ನೆದರ್‌ಲ್ಯಾಂಡಿನ ಸಂಸದ ಗೀರ್ತ ವಿಲ್ಡರ್ಸ್ !

ನೆದರ್‌ಲ್ಯಾಂಡಿನ ಸಂಸದ ಗೀರ್ತ ವಿಲ್ಡರ್ಸ್

ಆಮ್‌ಸ್ಟರ್‌ಡ್ಯಾಮ್ (ನೆದರ್‌ಲ್ಯಾಂಡ್ಸ್).- ನೆದರ್‌ಲ್ಯಾಂಡಿನ ಪಾರ್ಟಿ ಫಾರ್ ಫ್ರೀಡಂ ರಾಜಕೀಯ ಪಕ್ಷದ ಸಂಸ್ಥಾಪಕ ಮತ್ತು ಸಂಸದ ಗೀರ್ತ ವಿಲ್ಡರ್ಸ್ ಇವರು ವಿವಿಧ ದೇಶದ ವಿದೇಶಾಂಗ, ಕಾನೂನು ಮತ್ತು ಸುರಕ್ಷೆಗೆ ಸಂಬಂಧಪಟ್ಟ ಸಚಿವರಿಗೆ ಪತ್ರ ಬರೆದು ಬಾಂಗ್ಲಾದೇಶ ಮತ್ತು ಭಾರತದಲ್ಲಿ ಹಿಂದೂಗಳ ಮೇಲೆ ನಡೆಯುವ ಇಸ್ಲಾಮಿ ಅತ್ಯಾಚಾರದ ಬಗ್ಗೆ ೧೩ ಪ್ರಶ್ನೆಗಳನ್ನು ಕೇಳಿದ್ದಾರೆ. ವಿಲ್ಡರ್ಸ್ ಇವರು ಈ ಪ್ರಶ್ನಾವಳಿಯನ್ನು ಯಾವ ಯಾವ ದೇಶಗಳ ಸಚಿವರಿಗೆ ಕಳುಹಿಸಿದ್ದಾರೆ ಎಂಬುವುದನ್ನು ಸನಾತನ ಪ್ರಭಾತದ ಪ್ರತಿನಿಧಿ ಅವರಿಗೆ ಕೇಳಿದ್ದಾರೆ ಆದರೆ ಅದರ ಉತ್ತರ ಇಲ್ಲಿಯವರೆಗೆ ತಿಳಿದುಬಂದಿಲ್ಲ.

ಈ ಪತ್ರದ ಪ್ರಮುಖ ಪ್ರಶ್ನೆಗಳು ಮುಂದಿನಂತಿವೆ

೧. ಬಾಂಗ್ಲಾದೇಶದ ಹಿಂದೂಗಳ ಮೇಲೆ ಭಯಂಕರ ಹಿಂಸಾಚಾರ ನಡೆಯುತ್ತಿರುವುದು ನಿಮಗೆ ತಿಳಿದಿದೆಯೇ ? ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು?

೨. ಈ ಅತ್ಯಾಚಾರ ಮುಸಲ್ಮಾನರಿಂದ ನಡೆಯುತ್ತಿದೆ. ಇದು ನಿಮಗೆ ತಿಳಿದಿದೆಯೇ? ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು?

೩. ಹಿಂದೂಗಳ ಮನೆ, ಧಾರ್ಮಿಕ ಸ್ಥಳಗಳು, ಅಂಗಡಿ ಇವುಗಳನ್ನು ಸುಟ್ಟು ಹಾಕಲಾಗುತ್ತಿದೆ ಎಂಬುವುದರ ಕಲ್ಪನೆ ನಿಮಗಿದೆಯೇ? ಇದರ ಮೇಲೆ ನೀವು ನಿಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತೀರಾ?

೪. ಕಳೆದ ಕೆಲವು ವರ್ಷಗಳಲ್ಲಿ ಮುಸಲ್ಮಾನ ಪ್ರಾಬಲ್ಯವಿರುವ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ಅತ್ಯಾಚಾರದ ಪ್ರಮಾಣ ಹೆಚ್ಚಾಗಿದೆ, ಇದರ ಬಗ್ಗೆ ನಿಮಗೆ ಏನು ಹೇಳುವುದಿದೆ?

೫. ಅತ್ಯಾಚಾರದ ಈ ಘಟನೆಗಳಿಗೆ ಪಾಶ್ಚತ್ಯ ದೇಶಗಳಲ್ಲಿ ವಿಶೇಷ ಪ್ರಸಿದ್ಧಿ ದೊರೆಯುತ್ತಿಲ್ಲ, ಇದು ನಿಮಗೆ ಒಪ್ಪಿಗೆಯಿದೆಯೇ? ಇದರ ಹಿಂದಿನ ಕಾರಣ ಏನೆಂದು ನಿಮಗೆ ಅನಿಸುತ್ತದೆ? ಈ ಸ್ಥಿತಿ ಬದಲಿಸಲು ನೀವು ತಯಾರಾಗಿದ್ದೀರಾ? ಇಲ್ಲವಾದರೆ, ಏಕಿಲ್ಲ?

೬. ಮುಸಲ್ಮಾನರ ಮೇಲೆ ನಡೆಯುವ ಅತ್ಯಾಚಾರದ ಘಟನೆಗಳಿಗೆ ದೊಡ್ಡ ಪ್ರಮಾಣದಲ್ಲಿ ಪ್ರಸಿದ್ಧಿ ಸಿಗುತ್ತದೆ, ಆದರೆ ಮುಸಲ್ಮಾನರಿಂದ ನಡೆಸಲಾಗುವ ದೌರ್ಜನ್ಯದ ಕಡೆಗೆ ದುರ್ಲಕ್ಷ ಮಾಡಲಾಗುತ್ತದೆ, ಇದಕ್ಕೆ ನಿಮ್ಮ ಒಪ್ಪಿಗೆಯಿದೆಯೇ ? ಅದರ ಬಗ್ಗೆ ಏನಾದರೂ ಸ್ಪಷ್ಟೀಕರಣ ನೀಡಲು ಬಯಸವಿರಾ? ಇಲ್ಲ ಎಂದಾದರೆ ಏಕೆ ಇಲ್ಲ?

೭. ನೀವು ಬಾಂಗ್ಲಾದೇಶ, ಭಾರತ, ಹಾಗೂ ಅನ್ಯ ದೇಶಗಳಲ್ಲಿ ಹಿಂದೂಗಳಿಗೆ ಪ್ರತ್ಯಕ್ಷ ಸಮರ್ಥನೆ ನೀಡಿ ಆ ಸಂದರ್ಭದಲ್ಲಿ ಸಂಬಂಧಿತ ದೇಶದ ಸರಕಾರವನ್ನು ಸಂಪರ್ಕಿಸಲು ಸಿದ್ಧರಿದ್ದೀರಾ ? ಇಲ್ಲ ಎಂದಾದರೆ ಏಕೆ ಇಲ್ಲ?

೮. ಮುಸಲ್ಮಾನರಿಂದ ಹಿಂದೂಗಳ ಮೇಲೆ ನಡೆಯುವ ದೌರ್ಜನ್ಯವನ್ನು ನೀವು ಮುಂದೆ ಬಂದು ನಿಷೇಧಿಸುತ್ತೀರಾ?

ಈ ಪ್ರಶ್ನೆಗಳಲ್ಲದೆ ವಿಲ್ಡರ್ಸ್ ಇವರು ನೂಪುರ ಶರ್ಮಾ ಪ್ರಕರಣ ಮತ್ತು ಅದರಿಂದ ನಡೆಯುತ್ತಿರುವ ಹಿಂಸಾಚಾರದ ಬಗ್ಗೆಯೂ ಪ್ರಶ್ನೆಗಳನ್ನು ಕೇಳಿದ್ದಾರೆ.

ಸಂಪಾದಕೀಯ ನಿಲುವು

ಯಾವುದನ್ನು ಭಾರತದ ಹಿಂದೂ ರಾಜಕೀಯ ನಾಯಕರು ಮಾಡುವುದು ಅಪೇಕ್ಷಿತವಾಗಿತ್ತು ಅದು ಸಮುದ್ರದಾಚೆಗಿನ ಓರ್ವ ಕ್ರೈಸ್ತ ಸಂಸದ ಮಾಡುತ್ತಿದ್ದಾನೆ ಎಂಬುವುದು ಹಿಂದೂಗಳಿಗೆ ಲಜ್ಜಾಸ್ಪದ ! ಹಿಂದೂ ನಾಯಕರ ಇಂತಹ ನಿಷ್ಕ್ರಿಯತೆಯಿಂದ ಹಿಂದೂಗಳ ಮೇಲೆ ಅತ್ಯಾಚಾರಗಳು ಎಂದಾದರೂ ನಿಲ್ಲಬಹುದೇ ?