‘ಇಸ್ರೋ’ದ ಮಾಜಿ ವಿಜ್ಞಾನಿ ನಂಬಿ ನಾರಾಯಣನ್‌ರವರ ನೇರ ಪ್ರಶ್ನೆ !
ನವದೆಹಲಿ – ನಾನು ಹಿಂದೂವಾಗಿದ್ದೇನೆ ಹಾಗೂ ಅದನ್ನು ಹೇಳಲು ನನಗೆ ಯಾವುದೇ ರೀತಿಯಲ್ಲಿ ನಾಚಿಕೆಯಿಲ್ಲ. ಹಿಂದೂ ಆಗಿರುವುದು ನಾಚಿಕೆಯ ಸಂಗತಿಯೇ ? ಎಂಬ ಪ್ರಶ್ನೆಯನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (’ಇಸ್ರೋ’ದ) ಮಾಜಿ ವಿಜ್ಞಾನಿ ನಂಬಿ ನಾರಾಯಣನ್‌ರವರು ಒಂದು ಸಂದರ್ಶನದಲ್ಲಿ ಕೇಳಿದ್ದಾರೆ. ಈ ವಿಷಯದಲ್ಲಿನ ವಿಡಿಯೋ ಸಾಮಾಜಿಕ ಮಾಧ್ಯಮಗಳಿಂದ ಪ್ರಸಾರಿತವಾಗುತ್ತಿದೆ. ನಂಬಿ ನಾರಾಯಣನ್‌ರವರ ಜೀವನದ ಮೇಲೆ ಆಧಾರಿತವಾದ ‘ರಾಕೆಟ್ರೀ: ದ ನಂಬಿ ಎಫೆಕ್ಟ್’ ಎಂಬ ಚಲನಚಿತ್ರ ಪ್ರದರ್ಶಿತವಾಗಿದೆ. ಅದರಲ್ಲಿ ಪೂಜಾರ್ಚನೆ ಮಾಡುತ್ತಿರುವುದನ್ನು ತೋರಿಸಲಾಗಿದೆ. ಇದರ ಬಗ್ಗೆ ಚಲನಚಿತ್ರ ಸಮೀಕ್ಷಕರು ಟೀಕಿಸಿದ್ದಾರೆ. ಈ ಬಗ್ಗೆ ನಂಬಿ ನಾರಾಯಣನ್‌ರವರಿಗೆ ಕೇಳಿದಾಗ ಅವರು ಮೇಲಿನ ಉತ್ತರ ನೀಡಿದ್ದಾರೆ. ‘ನಾನು ಹಿಂದೂ ಆಗಿರುವುದರಿಂದ ಚಲನಚಿತ್ರದಲ್ಲಿ ನನ್ನನ್ನು ಹಿಂದೂವಾಗಿ ತೋರಿಸಲಾಗಿದೆ. ನನಗೆ ಮುಸಲ್ಮಾನ ಅಥವಾ ಕ್ರೈಸ್ತನೆಂದು ತೋರಿಸಲು ಸಾಧ್ಯವಿಲದಲ, ಎಂದೂ ಅವರು ಈ ಸಮಯದಲ್ಲಿ ಹೇಳಿದರು.
‘Is it a sin to be a Hindu’: Nambi Narayanan reacts to complaints of his portrayal as a Hindu in his biopic ‘Rocketry: The Nambi Effect’https://t.co/lxpRjAONFa
— OpIndia.com (@OpIndia_com) July 17, 2022
* ಬ್ರಾಹ್ಮಣನಾಗಿರುವುದು ಪಾಪವೇ ?
‘ರಾಕೆಟ್ರಿ : ದ ನಂಬಿ ಇಫೆಕ್ಟ್’ ಎಂಬ ಚಲನಚಿತ್ರದ ಸಮೀಕ್ಷೆ ಮಾಡುವ ಕೆಲವು ಚಲನಚಿತ್ರ ಸಮೀಕ್ಷಕರು ‘ನಾರಾಯಣನ್‌ರವರು ಬ್ರಾಹ್ಮಣರಾಗಿದ್ದಾರೆ’ ಎಂದು ಹೇಳುತ್ತಿದ್ದಾರೆ. ಅದಕ್ಕೆ ನಂಬಿ ನಾರಾಯಣನ್‌ರವರು ‘ನಾನು ಬ್ರಾಹ್ಮಣನಲ್ಲ ಮತ್ತು ಬ್ರಾಹ್ಮಣನಾಗಿದ್ದರೆ ಅದರಲ್ಲಿ ಆಕ್ಷೇಪಿಸುವಂತಹದ್ದೇನಿದೆ ? ನೀವು ಅವರನ್ನು ಕೊಲ್ಲುವವರಿದ್ದೀರೇ ? ಬ್ರಾಹ್ಮಣನಾಗಿರುವುದು ಪಾಪವೇ ? ನಿಮ್ಮ ಸಹೋದ್ಯೋಗಿಗಳು ಬ್ರಾಹ್ಮಣರಾಗಿದ್ದರೆ ನೀವು ಅವರನ್ನು ಹೀನರೆಂದು ತಿಳಿಯುವರೇ ? ಎಷ್ಟೋ ಬ್ರಾಹ್ಮಣರು ದೇಶಕ್ಕಾಗಿ ತಮ್ಮ ಜೀವನವನ್ನು ಸಮರ್ಪಿಸಿದ್ದಾರೆ, ಅವರ ಸೂಚಿಯನ್ನೇ ನಾನು ನೀಡಬಲ್ಲೆನು. ವಿನಾಕಾರಣ ಇಂತಹ ಸಂಗತಿಗಳಿಗೆ ಮಹತ್ವ ನೀಡಲಾಗುತ್ತಿದೆ.
* ನೀವು ನನ್ನನ್ನು ಸಾಮ್ಯವಾದಿ ಎಂದು ಹೇಳುವವರಿದ್ದೀರೇ ?
ನಂಬಿ ನಾರಾಯಣನ್‌ರವರು ಮಾತನಾಡುತ್ತ, ‘ ನನಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇರಳದ ಮುಖ್ಯಮಂತ್ರಿ ಪಿನರಾಯಿ ವಿಜಯನ್‌ರಿಂದ ಸಮರ್ಥನೆ ದೊರೆತಿದೆ. ಹಾಗಿದ್ದರೆ ನೀವು ನನ್ನನ್ನು ಸಾಮ್ಯವಾದಿ ಎಂದು ತಿಳಿಯುವಿರೇ ? ಮೋದಿಯವರನ್ನು ಪ್ರಧಾನಮಂತ್ರಿ ಎಂದು ಅಲ್ಲದೇ ‘ಭಾಜಪದ ವ್ಯಕ್ತಿ’ ಎಂದು ನೋಡಲಾಗುತ್ತಿದೆ. ಜನರ ಮನಸ್ಸಿನ ಮೇಲೆ ಇದನ್ನು ಬಿಂಬಿಸಲಾಗುತ್ತದೆ’, ಎಂದು ಹೇಳಿದರು.
ಸಂಪಾದಕೀಯ ನಿಲುವು
* ಭಾರತದಲ್ಲಿ ಓರ್ವ ಹಿಂದೂ ವ್ಯಕ್ತಿಗೆ ಇಂತಹ ಪ್ರಶ್ನೆಯನ್ನು ಕೇಳಬೇಕಾಗುತ್ತಿರುವುದು, ಹಿಂದೂಗಳಿಗೆ ಲಜ್ಜಾಸ್ಪದವಾಗಿದೆ ! |