ಗುಜರಾತ ಗಲಭೆಯ ನಂತರ ಕಾಂಗ್ರೆಸ್ಸಿನ ದಿವಂಗತ ನಾಯಕ ಅಹ್ಮದ ಪಟೇಲ ಬಿಜೆಪಿ ಸರಕಾರವನ್ನು ಉರುಳಿಸಲು ಸಂಚು ರೂಪಿಸಿದ್ದರು!

* ಸತ್ರ ನ್ಯಾಯಾಲಯದಲ್ಲಿ ವಿಶೇಷ ತನಿಖಾ ದಳದಿಂದ ಪ್ರಮಾಣಪತ್ರ

* ತೀಸ್ತಾ ಸೆಟಲವಾಡ ಕೂಡಾ ಭಾಗಿಯಾಗಿದ್ದರು!

ಕಾಂಗ್ರೆಸ ನಾಯಕ ದಿವಂಗತ ಅಹ್ಮದ ಪಟೇಲ

ಕರ್ಣಾವತಿ (ಗುಜರಾತ) – ೨೦೦೨ ರ ಗುಜರಾತ ಗಲಭೆಯ ನಂತರ ರಾಜ್ಯದಲ್ಲಿ ಬಿಜೆಪಿ ಸರಕಾರವನ್ನು ಉರುಳಿಸಲು ಕಾಂಗ್ರೆಸ ನಾಯಕ ದಿವಂಗತ ಅಹ್ಮದ ಪಟೇಲ ಅವರ ನಿರ್ದೇಶನದ ಮೇರೆಗೆ ದೊಡ್ಡ ಸಂಚು ರೂಪಿಸಲಾಯಿತು. ಈ ಸಂಚಿನಲ್ಲಿ ತೀಸ್ತಾ ಸೆಟಲವಾಡ ಕೂಡಾ ಭಾಗಿಯಾಗಿದ್ದರೆಂದು ಗುಜರಾತ ಪೊಲೀಸರ ವಿಶೇಷ ತನಿಖಾ ದಳ ಸ್ಥಳೀಯ ಸತ್ರ ನ್ಯಾಯಾಲಯದಲ್ಲಿ ಪ್ರಮಾಣಪತ್ರ ಸಲ್ಲಿಸಿದೆ.

ಚುನಾಯಿತ ಸರಕಾರವನ್ನು ವಿಸರ್ಜಿಸುವುದು ಅಥವಾ ಅಸ್ಥಿರಗೊಳಿಸುವುದು ಸೆಟಲವಾಡ ಅವರ ಉದ್ದೇಶವಾಗಿತ್ತು ಎಂದು ಪ್ರಮಾಣಪತ್ರದಲ್ಲಿ ಹೇಳಲಾಗಿದೆ. ಅದಕ್ಕಾಗಿ ಹಲವರನ್ನು ಸಿಲುಕಿಸಲು ಅಡ್ಡದಾರಿ ಹಿಡಿದು ಪ್ರಯತ್ನಿಸಿದರು. ಅಹ್ಮದ ಪಟೆಲ ನಿರ್ದೇಶನದಲ್ಲಿ ಗಲಭೆಯ ನಂತರ ಸೆಟಲವಾಡಗೆ ೩೦ ಲಕ್ಷ ರೂಪಾಯಿಗಳನ್ನು ಒದಗಿಸಲಾಗಿತ್ತು, ಹಾಗೆಯೇ ಬಿಜೆಪಿಯ ಹಿರಿಯ ನಾಯಕರನ್ನು ಗಲಭೆಯಲ್ಲಿ ಸಿಲುಕಿಸಲು ದೆಹಲಿಯಲ್ಲಿ ಇಬ್ಬರ ನಡುವೆ ಚರ್ಚೆಯೂ ನಡೆಯುತ್ತಿತ್ತು.

ಕರ್ಣಾವತಿ ಪೊಲೀಸರ ಅಪರಾಧ ವಿಭಾಗ ಗುಜರಾತ ಗಲಭೆ ಪ್ರಕರಣದಲ್ಲಿ ಹಲವರ ಮೇಲೆ ಸುಳ್ಳು ಆರೋಪ ಹೊರಿಸಿ ಸಿಲುಕಿಸುವ ಆರೋಪದಲ್ಲಿ ಇಬ್ಬರನ್ನು ಬಂಧಿಸಿದೆ. ಇದರಲ್ಲಿ ಸೆಟಲವಾಡ ಕೂಡಾ ಸೇರಿದ್ದಾರೆ.