ಅಪಹರಿಸಿದ ಯಾಸಿನ್ ಮಲೀಕ್ ನನ್ನು ನ್ಯಾಯಾಲಯದಲ್ಲಿ ಗುರುತಿಸಿದ ರುಬಿಯಾ !

೧೯೮೯ ರಲ್ಲಿ ಭಯೋತ್ಪಾದಕರು ರುಬಿಯಾ ಸಯೀದ್ ಇವರನ್ನು ಅಪಹರಿಸಿರುವ ಪ್ರಕರಣ

ಶ್ರೀನಗರ (ಜಮ್ಮು ಕಾಶ್ಮೀರ) – ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮುಫ್ತಿ ಮಹಮ್ಮದ್ ಸಯೀದ್ ಇವರ ಮಗಳು ಮತ್ತು ಮೆಹಬೂಬಾ ಮುಪ್ತಿ ಇವರ ಸಹೋದರಿ ರುಬಿಯಾ ಸಯೀದ್ ಇವರನ್ನು ಅಪಹರಿಸಿದ್ದು ಭಯೋತ್ಪಾದಕ ಯಾಸಿನ್ ಮಲ್ಲಿಕ್ ಎಂದು ರುಬಿಯಾ ಇವರು ಹೇಳಿದರು. ಅವರು ನ್ಯಾಯಾಲಯದಲ್ಲಿ ಯಾಸೀನ್ ಮಲಿಕ್ ಮತ್ತು ಇತರ ೩ ಭಯೋತ್ಪಾದಕರನ್ನು ಗುರುತಿಸಿದರು. ಈ ಪ್ರಕರಣದಲ್ಲಿ ನ್ಯಾಯಾಲಯವು ಅವರನ್ನು ನ್ಯಾಯಾಲಯದಲ್ಲಿ ಹಾಜರಾಗಲು ಆದೇಶಿಸಿತ್ತು. ಪ್ರಸ್ತುತ ಅವರು ತಮಿಳುನಾಡಿನಲ್ಲಿ ವಾಸವಾಗಿದ್ದಾರೆ. ಡಿಸೆಂಬರ್ ೮, ೧೯೮೯ ರಂದು ರುಬಿಯಾ ಇವರನ್ನು ಅಪಹರಿಸಲಾಗಿತ್ತು. ಅವರ ಬಿಡುಗಡೆಯ ಬದಲಿಗೆ ೫ ಭಯೋತ್ಪಾದಕರನ್ನು ಬಿಡಬೇಕೆಂದು ಒತ್ತಾಯಿಸಲಾಗಿತ್ತು. ಆ ಸಮಯದಲ್ಲಿ ಮುಫ್ತಿ ಮಹಮ್ಮದ್ ಸಯೀದ್ ದೇಶದ ಗೃಹ ಸಚಿವರಾಗಿದ್ದರು. ಆ ೫ ಭಯೋತ್ಪಾದಕರನ್ನು ಬಿಡುಗಡೆಗೊಳಿಸಿದ ನಂತರ ರುಬಿಯಾ ಅವರನ್ನು ಬಿಡುಗಡೆಗೊಳಿಸಲಾಗಿತ್ತು.