ಮಹಮ್ಮದ್ ಜುಬೈರಗೆ ದೆಹಲಿ ಉಚ್ಚ ನ್ಯಾಯಾಲಯದಿಂದ ಜಾಮೀನು

೨೦೧೮ ರಲ್ಲಿ ಮಾಡಿದ ಹಿಂದೂ ವಿರೋಧಿ ಟ್ವೀಟ್ ಪ್ರಕರಣ

ಹೊಸ ದೆಹಲಿ – ಅಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮಹಮ್ಮದ್ ಜುಬೈರಗೆ ದೆಹಲಿ ಪೊಲೀಸರು ೫೦ ಸಾವಿರ ರೂಪಾಯಿಯ ಮುಚ್ಚಳಿಕೆ ಮೇಲೆ ಜಾಮೀನು ಸಮ್ಮತಿಸಿದರು. ಇದರ ಜೊತೆಗೆ ಅನುಮತಿ ಇಲ್ಲದೆ ಅವನಿಗೆ ದೇಶ ಬಿಟ್ಟು ಹೋಗುವುದರ ಮೇಲೆ ನಿಷೇಧ ಹೇರಲಾಗಿದೆ. ಜುಬೈರನನ್ನು ೨೦೧೮ ರಲ್ಲಿ ನಡೆದ ಪ್ರಕರಣದಲ್ಲಿ ಜೂನ್೨೭ ರಂದು ಬಂಧಿಸಲಾಗಿತ್ತು. ೨೦೧೮ರಲ್ಲಿ ಜುಬೈರ ಒಂದು ಹಿಂದೂ ವಿರೋಧಿ ಟ್ವೀಟ್ ಮಾಡಿದ್ದನು. ಅವನು ಹಳೆಯ ಚಲನಚಿತ್ರ ಒಂದರ ದೃಶ್ಯದಲ್ಲಿ ಕಾಣುತ್ತಿರುವ ಹನಿಮೂನ್ ಹೋಟೆಲ್ ಬದಲು ಹನುಮಾನ್ ಹೋಟೆಲ್ ಎಂದು ಬದಲಿಸಿದ್ದ ಚಿತ್ರವನ್ನು ಟ್ವೀಟ್ ಗೆ ಜೋಡಿಸಿದ್ದ. ಅದರ ಜೊತೆಗೆ ಅವನು ೨೦೧೪ರ ಮೊದಲು (ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬರುವ ಮೊದಲು) ಇದು ಹನಿಮೂನ್ ಹೋಟೆಲ್ ಆಗಿತ್ತು. ಈಗ ಅದರ ಹೆಸರು ಹನುಮಾನ ಹೋಟೆಲ್ ಆಗಿದೆ. ಈ ಪ್ರಕರಣದಲ್ಲಿ ಜುಬೈರನನ್ನು ಬಂಧಿಸಲಾಗಿತ್ತು.

ಮಹಮ್ಮದ್ ಜುಬೈರ ಇವನು ನೂಪುರ ಶರ್ಮಾ ಇವರು ಮುಹಮ್ಮದ್ ಪೈಗಂಬರರ ಬಗ್ಗೆ ನೀಡಿರುವ ತಥಾ ಕಥಿತ ಹೇಳಿಕೆ ಇರುವ ವೀಡಿಯೋದಲ್ಲಿ ಬದಲಾವಣೆ ಮಾಡಿ ಆ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿದ್ದನು. ಆದ್ದರಿಂದ ಜಗತ್ತಿನಾದ್ಯಂತ ಮುಸಲ್ಮಾನ ದೇಶದವರು ಭಾರತವು ಮುಸಲ್ಮಾನರ ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿದವು. ಇದರ ಜೊತೆಗೆ ಭಾರತದಲ್ಲಿ ಮತಾಂಧ ಮುಸಲ್ಮಾನರಿಂದ ಅನೇಕ ಸ್ಥಳಗಳಲ್ಲಿ ದಂಗೆ ನಡೆಸಲಾಯಿತು. ಈ ಪ್ರಕರಣದಲ್ಲಿ ಜುಬೈರ ವಿರುದ್ಧ ದೂರು ದಾಖಲಿಸಲಾಗಿದ್ದರೂ ಇಲ್ಲಿಯವರೆಗೆ ಅವನು ಮೇಲೆ ಯಾವುದೇ ಕ್ರಮ ಜರುಗಿಸಲಾಗಲಿಲ್ಲ.