ಬಂಗಾಲದಲ್ಲಿ ಅಧಿಕಾರದಲ್ಲಿರುವ ಪಕ್ಷ ಹಿಂದೂ ಧರ್ಮದ ಅವಮಾನ ನಿಲ್ಲಿಸಬೇಕು ! – ಬಂಗಾಲ ಸಾಧು ಸಮಾಜದಿಂದ ಎಚ್ಚರಿಕೆ

ಕೊಲಕಾತಾ – ಬಂಗಾಲದ ಆಡಳಿತ ಪಕ್ಷವು ಮರ್ಯಾದೆಯ ಎಲ್ಲೆ ಮೀರುವ ಪ್ರಯತ್ನ ಮಾಡಬಾರದು ಹಾಗೂ ಹಿಂದೂ ಧರ್ಮದ ಅವಮಾನ ನಿಲ್ಲಿಸಬೇಕೆಂಬ ಎಚ್ಚರಿಕೆ ಬಂಗಾಲದ ಸಾಧು ಸಮಾಜ ನೀಡಿದೆ. ಭಾರತ ಸೇವಾಶ್ರಮ ಸಂಘದ ಸ್ವಾಮಿ ಪ್ರದೀಪ್ತಾನಂದ ಜೀ (ಕಾರ್ತಿಕ ಮಹಾರಾಜ) ಇವರ ನೇತೃತ್ವದಲ್ಲಿ ರಾಜ್ಯದ ೩೭ ಕ್ಕಿಂತಲೂ ಹೆಚ್ಚಿನ ಧಾರ್ಮಿಕ ಸಂಘಟನೆಗಳ ಪ್ರತಿನಿಧಿಗಳು ರಾಜ್ಯಪಾಲ ಜಗದೀಪ ಧನಕಡ ಇವರನ್ನು ಭೇಟಿ ಮಾಡಿ ಆಡಳಿತ ಪಕ್ಷದಿಂದ ನಡೆಯುತ್ತಿರುವ ಸನಾತನ ಧರ್ಮದ ಅವಮಾನದ ಬಗ್ಗೆ ದೂರು ನೀಡಿದರು. ಈ ಆಗೋಗದಲ್ಲಿ ಅನೇಕ ಸಾಧುಗಳು ಭಾಗವಹಿಸಿದ್ದರು. ಈ ಸಮಯದಲ್ಲಿ ರಾಜ್ಯದ ವಿರೋಧ ಪಕ್ಷದ ನಾಯಕ ಸುವೆಂದು ಅಧಿಕಾರಿ ಉಪಸ್ಥಿತರಿದ್ದರು. ತೃಣಮೂಲ ಕಾಂಗ್ರೆಸ್ಸಿನ ಶಾಸಕ ಮಹುವಾ ಮೋಯಿತ್ರ ಇವರು ಶ್ರೀ ಕಾಳಿ ಮಾತೆಯ ಬಗ್ಗೆ ವಿಡಂಬನಾತ್ಮಕ ಹೇಳಿಕೆಯನ್ನು ರಾಜ್ಯಪಾಲರಿಗೆ ನೀಡಿದ ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಹಿಂದೂಗಳ ದೇವತೆಯ ಬಗ್ಗೆ ಅಸಭ್ಯ ಹೇಳಿಕೆ ಮತ್ತು ಉಗ್ರರಿಂದ ಹಿಂದೂ ದೇವಸ್ಥಾನ ಮತ್ತು ಪೂಜಾ ವಿಧಿಯಲ್ಲಿ ತೊಂದರೆ ನೀಡುವ ಘಟನೆಗಳು ರಾಜ್ಯದಲ್ಲಿ ಸತತವಾಗಿ ಹೆಚ್ಚುತ್ತಿದೆ ಎಂದು ಈ ಮನವಿಯಲ್ಲಿ ಹೇಳಲಾಗಿದೆ. ಹಿಂದೂ ದೇವತೆಗಳ ಅವಮಾನ ಮಾಡುವವರನ್ನು ತಕ್ಷಣ ಬಂಧಿಸಬೇಕು ಎಂದು ಸಾಧು ಸಮಾಜ ಒತ್ತಾಯಿಸಿದೆ. ರಾಜ್ಯಪಾಲ ಧನಖಡ ಇವರು ಕಾನೂನ ರೀತಿಯಲ್ಲಿ ಕ್ರಮ ಕೈಗೊಳ್ಳುವ ಆಶ್ವಾಸನೆ ನೀಡಿದ್ದಾರೆ.

ಶ್ರೀ ಕಾಳಿ ಮಾತೆ ಮತ್ತು ಭಗವಾನ ಶಿವನ ಅವಮಾನ ಮಾಡಿರುವ ಪ್ರಕರಣದಲ್ಲಿ ಮಹುವಾ ಮೊಯಿತ್ರ ಮತ್ತು ಲೀನಾ ಮಣಿಮೇಕಲೈ ಇವರ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ.

ಸಂಪಾದಕೀಯ ನಿಲುವು

ಸಾಧುಗಳಿಗೆ ಈ ರೀತಿ ಒತ್ತಾಯಿಸಬೇಕಾಗುತ್ತದೆ ಎಂದರೆ ಮಮತಾ ಬ್ಯಾನರ್ಜಿ ಸರಕಾರಕ್ಕೆ ನಾಚಿಕೆಗೇಡಿನ ವಿಷಯ ! ಹಿಂದೂ ಧರ್ಮ ಮತ್ತು ರಾಷ್ಟ್ರ ಇದರ ಮೇಲಿನ ಆಘಾತ ತಡೆಯದೇ ಇರುವ ಮಮತಾ ಬ್ಯಾನರ್ಜಿ ಸರಕಾರವನ್ನು ಕೇಂದ್ರ ಸರಕಾರ ಅಮಾನತ್ತುಗೊಳಿಸಬೇಕು ಎಂದು ಹಿಂದೂಗಳು ಒತ್ತಾಯಿಸಿದ್ದಾರೆ.