ಶ್ರೀಮದ್ಭಗವದ್ಗೀತೆ ಮತ್ತು ಶ್ರೀ ರಾಮಚರಿತ ಮಾನಸ ಸುಟ್ಟು ಹಾಕಿದ ಕಿಡಿಗೇಡಿಗಳು !
ಈ ಮೇಲಿನ ಚಿತ್ರ ಪ್ರಕಟಿಸುವುದರ ಉದ್ದೇಶ ಯಾರ ಭಾವನೆಗಳಿಗೆ ನೋವನ್ನುಂಟುಮಾಡುವುದಾಗಿರದೆ ನಿಜ ಸ್ಥಿತಿ ತಿಳಿಸುವುದಾಗಿದೆ. – ಸಂಪಾದಕರು
ಕೊರಾಬಾ (ಛತ್ತಿಸಗಡ) : ಸ್ಥಳೀಯ ಶಿವ ಮಂದಿರವನ್ನು ಅಪರಿಚಿತ ವ್ಯಕ್ತಿಗಳು ಧ್ವಂಸಗೊಳಿಸಿದ್ದಾರೆ. ಶಿವಲಿಂಗದ ಮೇಲಿದ್ದ ನಾಗವನ್ನು ಎಸೆದಿದ್ದು, ಹನುಮಂತನ ಮುರ್ತಿಯ ಮೇಲಿನ ಬೆಳ್ಳಿಯ ಕಣ್ಣುಗಳನ್ನು ತೆಗೆಯಲಾಗಿದೆ. ಅಲ್ಲದೆ ಇಲ್ಲಿ ಇರಿಸಲಾಗಿದ್ದ ಭಗವದ್ಗೀತೆ ಮತ್ತು ಶ್ರೀ ರಾಮಚರಿತ ಮಾನಸ ಗ್ರಂಥಗಳನ್ನು ಸುಟ್ಟು ಹಾಕಲಾಗಿದೆ. ಇಲ್ಲಿ ಮದ್ಯದ ಬಾಟಲಿಗಳು ಪತ್ತೆಯಾಗಿದ್ದು ಕೆಲವರು ವಾಂತಿ ಮಾಡಿರುವುದು ಕಂಡು ಬಂದಿದೆ. ಈ ಪ್ರಕರಣದಲ್ಲಿ ೩ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಘಟನೆಯಿಂದ ಸ್ಥಳೀಯ ಹಿಂದೂಗಳಲ್ಲಿ ಅಕ್ರೋಶ ವ್ಯಕ್ತವಾಗಿದೆ. ಒಂದು ವರ್ಷದ ಹಿಂದೆಯೂ ಇಲ್ಲಿ ದಾಳಿ ಮಾಡಲಾಗಿತ್ತು.
मंदिर में मचा उत्पात#KORBA: शिवमंदिर में शराबियों ने की तोड़फोड़, हनुमानजी की मूर्ति से निकाली चांदी की आंख, रामायण में लगाई आग @anandpandey72 @harishdivekar1 https://t.co/D185HYZ9eR #chhattisgarh #chhattisgarhnewsinhindi #korbanews #shivmandir #korbanewsinhindi #Thesootr
— TheSootr (@TheSootr) July 12, 2022
ಸಂಪಾದಕೀಯ ನಿಲುವು
* ಛತ್ತಿಸಗಡದಲ್ಲಿ ಕಾಂಗ್ರೆಸ ಸರಕಾರವಿದೆ. ಸರಕಾರ ಹಿಂದೂ ದೇವಾಲಯಗಳನ್ನು ರಕ್ಷಿಸುತ್ತದೆ ಎಂದು ಈ ಘಟನೆ ನೋಡಿ ನಿರೀಕ್ಷಿಸಲು ಸಾಧ್ಯವಿಲ್ಲ! * ಈ ದೇಶದಲ್ಲಿ ಪ್ರತಿದಿನ ಹಿಂದೂ ಧಾರ್ಮಿಕ ಸ್ಥಳಗಳ ಮೇಲೆ ದಾಳಿಯ ಘಟನೆಗಳು ನಡೆಯುತ್ತಿವೆ. ಈ ಪ್ರಕರಣದಲ್ಲಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಕೇಂದ್ರ ಸರಕಾರ ಕಾನೂನು ರೂಪಿಸಬೇಕು ಎಂದು ಈಗ ಹಿಂದೂಗಳು ಬಯಸುತ್ತಾರೆ! |