ನಿಜಾಮಾಬಾದನಲ್ಲಿ ಕರಾಟೆ ತರಬೇತಿಯ ಹೆಸರಿನಲ್ಲಿ ಮುಸ್ಲಿಮರಿಗೆ ಶಸ್ತ್ರಾಸ್ತ್ರಗಳ ತರಬೇತಿ ನೀಡುತ್ತಿದೆ ಜಿಹಾದಿ ಭಯೋತ್ಪಾದಕ ಸಂಘಟನೆ ‘ಪಿಎಫಐ’ !

  • ಹಿಂದೂಗಳನ್ನು ಗುರಿಯಾಗಿಸಲು ತರಬೇತಿ

  • ‘ಪಾಪ್ಯುಲರ ಫ್ರಂಟ ಆಫ ಇಂಡಿಯಾ’ದ ೩ ನಾಯಕರ ಬಂಧನ

ನಿಜಾಮಾಬಾದ (ತೆಲಂಗಾಣಾ) – ಇಲ್ಲಿಯ ಪೊಲೀಸರು ಜಿಹಾದಿ ಭಯೋತ್ಪಾದಕ ಸಂಘಟನೆ ‘ಪಾಪ್ಯುಲರ ಫ್ರಂಟ ಆಫ ಇಂಡಿಯಾ’ (ಪಿಎಫಐ) ಗೆ ಸೇರಿರುವ ಮೂವರು ಮುಖಂಡರನ್ನು ಬಂಧಿಸಿದ್ದಾರೆ. ಈ ಮೂವರು ಜಿಲ್ಲೆಯಲ್ಲಿ ಮುಸ್ಲಿಂ ಯುವಕರಿಗೆ ಕರಾಟೆ ತರಬೇತಿ ನೀಡುವ ನೆಪದಲ್ಲಿ ಜನರ ಮೇಲೆ ಸಶಸ್ತ್ರ ದಾಳಿ ನಡೆಸುವ ಬಗ್ಗೆ ಅಲ್ಲಲ್ಲ್ಲಿ ಶಿಬಿರಗಳನ್ನು ಆಯೋಜಿಸಿದ್ದರು. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಈ ಯುವಕರಿಗೆ ಹಿಂದೂಗಳನ್ನು ಗುರಿಯಾಗಿಸುವ ತರಬೇತಿ ನೀಡಲಾಗುತ್ತಿತ್ತು.

೧. ಈ ಮೂರು ಜಿಗಹಾದಿಗಳಿಂದ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಸಪಡಿಸಿಕೊಳ್ಳಲಾಗಿದೆ. ಈ ಶಸ್ತ್ರಾಸ್ತ್ರಗಳನ್ನು ತರಬೇತಿ ಶಿಬಿರಗಳಲ್ಲಿ ಬಳಸಲಾಗುತ್ತಿತ್ತು. ಈ ಮೂವರ ವಿಚಾರಣೆಯಲ್ಲಿ ಇನ್ನೂ ೩೦ ಜನರನ್ನು ಗುರುತಿಸಲಾಗಿದ್ದು ಅವರನ್ನೂ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

೨. ಪೊಲೀಸ ಆಯುಕ್ತ ಕೆ. ಆರ. ನಾಗರಾಜು ಮಾತನಾಡಿ ಕೆಲ ವರ್ಷಗಳ ಹಿಂದೆ ನಿಷೇಧಕ್ಕೊಳಗಾದ ಸಿಮಿ ಸಂಘಟನೆಯ ಮುಖಂಡರು ಪಾಪ್ಯುಲರ ಫ್ರಂಟ ಆಫ ಇಂಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ಅವರು ಅಲ್ಲಲ್ಲಿ ಕರಾಟೆ ಶಿಬಿರಗಳನ್ನು ಆಯೋಜಿಸುತ್ತಾರೆ; ಆದರೆ ಕರಾಟೆಗೂ ಇದಕ್ಕು ಸಂಬಂಧವಿಲ್ಲ. ಇದು ಸ್ಥಳೀಯ ಮುಸ್ಲಿಂ ಯುವಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಒಗ್ಗೂಡಿಸಿ ಅವರಿಗೆ ಶಸ್ತ್ರಾಸ್ತ್ರಗಳನ್ನು ಚಲಾಯಿಸಲು ತರಬೇತಿ ನೀಡಲಾಗುತ್ತದೆ. ಇತರ ಧರ್ಮದವರ ಮೇಲೆ ದಾಳಿ ಮಾಡುವ ಮೂಲಕ ತಮ್ಮದೇ ಆದ ಪ್ರಾಬಲ್ಯವನ್ನು ಹೇಗೆ ನಿರ್ಮಿಸಬೇಕು ಎಂದು ಅವರಿಗೆ ಕಲಿಸಲಾಗುತ್ತದೆ.

೩. ಈ ಶಿಬಿರಗಳಲ್ಲಿ ಇಸ್ಲಾಂ ಮತ್ತು ಪೈಗಂಬರರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡುವವರಿಗೂ ಪಾಠ ಕಲಿಸಲು ತರಬೇತಿ ನೀಡಲಾಗುತ್ತದೆ. ಪಾಪ್ಯುಲರ ಫ್ರಂಟ ಆಫ ಇಂಡಿಯಾ ಇಂತಹ ಶಿಬಿರಗಳ ಜಾಲವನ್ನು ಸ್ಥಾಪಿಸಿದೆ. ಇಲ್ಲಿಯವರೆಗೆ ಇಂತಹ ಶಿಬಿರಗಳಲ್ಲಿ ಭಾಗವಹಿಸಿ ೨೦೦ ಜನರ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿದ್ದೇವೆ. ಈ ಸಂಚಿನ ರೂವಾರಿ ೫೨ ವರ್ಷದ ಅಬ್ದುಲ ಖಾದಿರ ಎಂಬವನು. ಆತ ಮುಸಲ್ಮಾನರು ಹೆಚ್ಚಿರುವ ಪ್ರದೇಶಗಳಿಗೆ ಹೋಗಿ ಯುವಕರ ಪುಸಲಾಯಿಸಿ ಅವರನ್ನು ಶಿಬಿರಗಳಿಗೆ ಕರೆತರುತ್ತಾನೆ.

ಸಂಪಾದಕೀಯ ನಿಲುವು

ಇಂತಹ ತರಬೇತಿ ತರಗತಿಯ ಸುಳಿವು ಪೊಲೀಸರಿಗೆ ಇಲ್ಲದಿರುವುದು ನಾಚಿಕೆಗೇಡಿನ ಸಂಗತಿ! ಪೊಲೀಸರಿಗೆ ಇದರ ಸುಳಿವು ಹತ್ತಲಿಲ್ಲವೋ ಅಥವಾ ಪೊಲೀಸರು ಆ ಕಡೆ ದುರ್ಲಕ್ಷ್ಯ ಮಾಡಿದ್ದಾರೆಯೋ ಎಂಬ ಬಗ್ಗೆಯೂ ತನಿಖೆ ನಡೆಸಿ ಸತ್ಯ ಹೊರಬರಬೇಕು!

ಇನ್ನು ಎಷ್ಟು ಬಾಂಬ ಸ್ಫೋಟಗಳು, ಗಲಭೆಗಳು ಮತ್ತು ಹಿಂದೂಗಳ ಹತ್ಯೆಗಳು ನಂತರ ಇಂತಹ ರಾಷ್ಟ್ರವಿರೋಧಿ ಸಂಘಟನೆಯನ್ನು ಸರಕಾರ ನಿಷೇಧಿಸಲಿದೆ?

ಪ್ರಗತಿಪರರು, ಕಮ್ಯುನಿಸ್ಟರು, ಕಾಂಗ್ರೆಸಿಗರು ಮುಂತಾದವರು ಈ ಘಟನೆಯ ಬಗ್ಗೆ ಏಕೆ ಮೌನವಾಗಿದ್ದಾರೆ?