ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ನ ಮುಖಂಡ ಮತ್ತು ಆತನ ಇಬ್ಬರು ಸಹಚರರ ಹತ್ಯೆ !

ಕೋಲಕತಾ : ಬಂಗಾಳದ ೨೪ ಪರಗಣ ಜಿಲ್ಲೆಯಲ್ಲಿ ತೃಣಮೂಲ ಕಾಂಗ್ರೆಸ್ ಮುಖಂಡ ಹಾಗೂ ಆತನ ಇಬ್ಬರು ಸಹಚರರನ್ನು ಅಪರಿಚಿತ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ತೃಣಮೂಲ ಕಾಂಗ್ರೆಸ್ ಮುಖಂಡ ಮತ್ತು ಪಂಚಾಯತ್ ಸಮಿತಿ ಸದಸ್ಯ ಸ್ವಪನ್ ಮಾಝಿ ಅವರು ತಮ್ಮ ಇಬ್ಬರು ಸಹಚರರೊಂದಿಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಅಷ್ಟರಲ್ಲಿ ಅಲ್ಲಿಗೆ ಕೆಲವರು ಬಂದರು. ಅವರು ಸ್ವಪನ್ ಅವರ ವಾಹನ ನಿಲ್ಲಿಸಿ ಮೂವರ ಮೇಲೆ ಏಕಾಏಕಿ ಗುಂಡು ಹಾರಿಸಿದ್ದಾರೆ. ನಂತರ ದಾಳಿಕೋರರು ಸ್ಥಳದಿಂದ ಪರಾರಿಯಾದರು. ಈ ಘಟನೆಯಿಂದ ಸ್ಥಳದಲ್ಲಿ ಉದ್ವಿಗ್ನತೆ ಮೂಡಿದ್ದು, ಭಯದ ವಾತಾವರಣ ನಿರ್ಮಾಣವಾಗಿದೆ. ಬೆಳಗ್ಗೆ ೯ ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.

ಸಂಪಾದಕೀಯ ನಿಲುವು

ತೃಣಮೂಲ ಕಾಂಗ್ರೆಸ್‌ನ ರಾಜ್ಯದಲ್ಲಿ ಹದಗೆಟ್ಟಿರುವ ಕಾನೂನು ವ್ಯವಸ್ಥೆಯಿಂದಾಗಿ ಆ ಪಕ್ಷದ ನಾಯಕರೂ ಅಸುರಕ್ಷಿತರಾಗಿದ್ದಾರೆ ! ‘ಎಲ್ಲಿ ಆಡಳಿತ ಪಕ್ಷದ ನಾಯಕರೇ ಅಸುರಕ್ಷಿತವಾಗಿದ್ದರೆ ಅಲ್ಲಿ ಜನಸಾಮಾನ್ಯರು ಹೇಗೆ ಬದುಕುತ್ತಿರಬಹುದು ?’, ಇದರ ಬಗ್ಗೆ ವಿಚಾರ ಮಾಡದೇ ಇರುವುದೇ ಉತ್ತಮ !