ಪಾಕಿಸ್ತಾನದಲ್ಲಿ ಬಕ್ರೀದ್ ದಿನದಂದು ಹಸುವನ್ನು ಕ್ರೇನ ಸಹಾಯದಿಂದ ಕೆಳಗೆ ಎಸೆಯುವುದು ಕ್ರೂರ ಅನಿಷ್ಟ ಪದ್ದತಿ !

ಇಸ್ಲಾಮಾಬಾದ – ಪಾಕಿಸ್ತಾನದಲ್ಲಿ ಬಕ್ರೀದ್ ಸಮಯದಲ್ಲಿ ಕ್ರೇನ ಸಹಾಯದಿಂದ ಹಸುಗಳನ್ನು ಮೆಲಕ್ಕೆತ್ತಿ ಕೆಳಕ್ಕೆ ಎಸೆಯಲಾಗುತ್ತದೆ. ಹಾಗೆ ಮಾಡುವದರಿಂದ ಅದರ ಮೂಳೆಗಳು ಮುರಿದು ಸಾಯುತ್ತವೆ. ಪಾಕಿಸ್ತಾನದಲ್ಲಿ ಕಳೆದ ಹಲವು ವರ್ಷಗಳಿಂದ ಈ ಅನಿಷ್ಟ ಪದ್ದತಿಯು ಜಾರಿಯಲ್ಲಿದೆ. ಈ ಕಾರ್ಯಕ್ರಮವನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರು ಸೇರುತ್ತಾರೆ. ಈ ನಿಟ್ಟಿನಲ್ಲಿ ‘ರಾಯಟರ್ಸ್’ ಸುದ್ದಿಸಂಸ್ಥೆ ವಿಶೇಷ ಸುದ್ದಿ ಪ್ರಸಾರ ಮಾಡಿದೆ. ಹಾಗೆಯೇ ಈ ಘಟನೆಯ ವೀಡಿಯೋ ಕೂಡಾ ಎಲ್ಲೆಡೆ ಹಬ್ಬಿದೆ. ಈ ವರದಿಯಲ್ಲಿ ಎಲ್ಲಿಯೂ ಈ ಅನಿಷ್ಟ ಪದ್ದತಿಯ ಬಗ್ಗೆ ಟೀಕೆ ಮಾಡಿಲ್ಲ ಅಥವಾ ತಪ್ಪಾಗಿ ಅರ್ಥೈಸಲಾಗಿಲ್ಲ. (ವಿದೇಶಿ ಮಾದ್ಯಮಗಳ ವಿಕೃತಿಯ ಪ್ರೇಮ! ಇಂತಹ ಸುದ್ದಿ ವಾಹಿನಿಗಳನ್ನು ಭಾರತದಲ್ಲಿ ನಿಷೇಧಿಸಬೇಕು! – ಸಂಪಾದಕರು) ಸಾಮಾಜಿಕ ಜಾಲತಾಣಗಳಲ್ಲಿ ಜನರೆಲ್ಲರೂ ‘ಪ್ರಾಣಿಪ್ರೇಮಿ ಸಂಘಟನೆ ಪೇಟಾ ಏನು ಮಾಡುತ್ತಿದೆ’ ಎಂದು ಪ್ರಶ್ನಿಸಿದ್ದಾರೆ.

(ಈ ಮೇಲಿನ ಚಿತ್ರ ಪ್ರಕಟಿಸುವುದರ ಉದ್ದೇಶ ಯಾರ ಭಾವನೆಗಳಿಗೆ ನೋವನ್ನು ತರುವುದಾಗಿರದೆ ನಿಜ ಸ್ಥಿತಿ ತಿಳಿಸುವುದಾಗಿದೆ)

ಸಂಪಾದಕೀಯ ನಿಲುವು

ಅಂತಾರಾಷ್ಟ್ರೀಯ ಸಂಸ್ಥೆಗಳು ಮತ್ತು ಪ್ರಾಣಿ ಪ್ರೇಮಿಗಳು ಈ ಬಗ್ಗೆ ಏಕೆ ಮೌನವಾಗಿದ್ದಾರೆ? ಇಸ್ಲಾಂನಲ್ಲಿ ಗೋವನ್ನು ಕೊಲ್ಲುವ ಪದ್ದತಿ ಇಲ್ಲದಿರುವಾಗ ಬಕ್ರೀದ್ ಗೆ ಗೋವನ್ನು ಕೊಲ್ಲುವುದು ಇಸ್ಲಾಂ ಧರ್ಮಕ್ಕೆ ಮಾಡಿದ ಅವಮಾನವಲ್ಲವೇ?