ಪರವಾನಿಗೆ ಇಲ್ಲದೇ ಸೌದಿ ಅರೆಬಿಯಾದಲ್ಲಿ ೩೦೦ ಯಾತ್ರಿಕರನ್ನು ಬಂಧನ

೨ ಲಕ್ಷ ೧೦ ಸಾವಿರ ದಂಡ

ಹೊಸ ದೆಹಲಿ – ಸೌದಿ ಅರೆಬಿಯಾದಲ್ಲಿ ಅನಮತಿಯಿಲ್ಲದ ಹಜ ಯಾತ್ರೆ ಕೈಗೊಂಡಿದ್ದ ೩೦೦ ಮಂದಿಯನ್ನು ಬಂಧಿಸಲಾಗಿದೆ. ಇದೀಗ ಅವರಿಂದ ೨ ಲಕ್ಷದ ೧೦ ಸಾವಿರದ ೬೩೩ ರೂಪಾಯಿಗಳ ದಂಡ ವಸೂಲಿ ಮಾಡುವವರಿದ್ದಾರೆ. ಸೌದಿ ಅರೆಬಿಯಾ ಕೇವಲ ಹತ್ತು ಲಕ್ಷ ಜನರಿಗೆ ಮಾತ್ರ ಹಜ್ ಯಾತ್ರೆಗೆ ಅವಕಾಶ ನೀಡಿತ್ತು. ಅದರಲ್ಲಿ ವಿದೇಶದಿಂದ ೮ ಲಕ್ಷ ೫೦ ಸಾವಿರ ಜನರಿಗೆ ಅವಕಾಶ ನೀಡಲಾಗಿದೆ. ಈ ವರ್ಷ ಭಾರತದ ೭೯,೨೩೭ ಜನರಿಗೆ ಅವಕಾಶ ನೀಡಲಾಗಿದೆ.

ಸಂಪಾದಕೀಯ ನಿಲುವು

ಸೌದಿ ಅರೆಬಿಯಾ ಪರವಾನಿಗೆ ಪಡೆಯದ ಹಜ ಯಾತ್ರಿಕರನ್ನು ಬಂಧಿಸುತ್ತದೆ ಆದರೆ ಭಾರತಕ್ಕೆ ನುಸುಳಿರುವ ಲಕ್ಷಾಂತರ ಬಾಂಗ್ಲಾದೇಶಿ ಮತ್ತು ರೋಹಿಂಗ್ಯಾ ಮುಸ್ಲಿಮರ ವಿರುದ್ಧ ಭಾರತ ಯಾವುದೇ ಕ್ರಮ ಕೈಗೊಳ್ಳದಿರುವುದು ನಾಚಿಕೆಗೇಡಿನ ಸಂಗತಿ!