ಪಿಲಿಭೀತಿನ ಅಂಗಡಿಗಳಿಂದ ಪಾಕಿಸ್ತಾನಿ ಜಿಹಾದಿ ಸಂಘಟನೆ `ದಾವತ-ಎ-ಇಸ್ಲಾಮಿ’ಗಾಗಿ ಹಣ ಸಂಗ್ರಹಿಸಲಾಗುತ್ತದೆ!

ಸಂಗ್ರಹಿಸಿರುವ ಹಣವನ್ನು ಜಿಹಾದಿ ಭಯೋತ್ಪಾದಕ ಕೃತ್ಯಗಳಿಗೆ ಉಪಯೋಗಿಸಲಾಗುವುದೆಂದು ತನಿಖಾ ದಳದ ವರದಿ !

 

ಪಿಲಿಭೀತ (ಉತ್ತರಪ್ರದೇಶ) – ದೇಶದ ವಾತಾವರಣ ಕೆಡಿಸಲು 5 ಜಿಹಾದಿ ಸಂಘಟನೆಗಳು ಕಾರ್ಯನಿರತವಾಗಿದೆ ಎಂದು ಕೇಂದ್ರ ಗೃಹಸಚಿವಾಲಯಕ್ಕೆ ಕಳುಹಿಸಿರುವ ವರದಿಯಲ್ಲಿ ತನಿಖಾ ದಳ ಹೇಳಿದೆ. ಉತ್ತರಪ್ರದೇಶದ ಪಿಲಿಭೀತನ ಮುಸಲ್ಮಾನರ ಅಂಗಡಿಗಳಲ್ಲಿ ಹಣ ಸಂಗ್ರಹಿಸುವ ಡಬ್ಬಿಯಿಂದ ಜಿಹಾದಿ ಭಯೋತ್ಪಾದಕ ಕೃತ್ಯಗಳಿಗೆ ಹಣವನ್ನು ಸಂಗ್ರಹಿಸಲಾಗುತ್ತಿದೆ.

ಈ ಹಣ `ದಾವತ-ಎ-ಇಸ್ಲಾಮಿ’ ಸಂಘಟನೆಗೆ ನೀಡಲಾಗುತ್ತಿರುವ ಮಾಹಿತಿಯನ್ನು ವರದಿಯಲ್ಲಿ ತಿಳಿಸಲಾಗಿದೆ. ಈ ಮೂಲಕ ಸಂಪೂರ್ಣ ದೇಶದಲ್ಲಿ ಭಯೋತ್ಪಾದಕ ಕೃತ್ಯ ಮಾಡುವ ಷಡ್ಯಂತ್ರ ರಚಿಸುವ ಸಿದ್ಧತೆ ಮಾಡಲಾಗಿದೆ.

1. ದಾವತ-ಎ-ಇಸ್ಲಾಮಿ ಸಂಘಟನೆ ಪಿಲಿಭೀತನಲ್ಲಿ ಕಳೆದ ಕೆಲವು ವರ್ಷಗಳಿಂದ ಸಕ್ರಿಯವಾಗಿದೆ. ಇಲ್ಲಿ ಮದರಸಾಗಳನ್ನು ನಡೆಸಲು 250ಕ್ಕಿಂತ ಅಧಿಕ ಅಂಗಡಿಗಳಲ್ಲಿ ಹಣ ಸಂಗ್ರಹಿಸುವ ಡಬ್ಬಿಯನ್ನು ಇಡಲಾಗಿದೆ. ಅದರ ಮೇಲೆ ದಾವತ-ಎ-ಇಸ್ಲಾಮಿಗಾಗಿ ದಾನ ನೀಡುವಂತೆ ಕರೆ ನೀಡಲಾಗಿದೆ.

2. ಭಾರತದಲ್ಲಿರುವ ಜಿಹಾದಿ ಸಂಘಟನೆಗಳು ದೇಶದ ಉತ್ತರ ಮತ್ತು ಮಧ್ಯ ಭಾಗಗಳಲ್ಲಿ ಹೆಚ್ಚು ಕಾರ್ಯನಿರತವಾಗಿವೆ. ಇದರಲ್ಲಿ 500 ಕ್ಕಿಂತ ಹೆಚ್ಚು ಪ್ರಾಧ್ಯಾಪಕರು ಕಾರ್ಯನಿರತರಾಗಿದ್ದು, 1 ಸಾವಿರ 500 ವ್ಯಾಟ್ಸಅಪ್ ಗುಂಪು, ಫೇಸಬುಕ, ಟ್ವಿಟರ ಮತ್ತು ಯೂ ಟ್ಯೂಬ ಮೂಲಕ ಭಯೋತ್ಪಾದಕತೆಯನ್ನು ಪ್ರಸಾರ ಮಾಡಲಾಗುತ್ತಿದೆ. `ಸ್ಲೀಪರ ಸೆಲ್’ (ಭಯೋತ್ಪಾದಕರಿಗೆ ಸಹಾಯ ಮಾಡುವ ಸ್ಥಳೀಯ ಜನರು) ತಯಾರಿಸಲಾಗುತ್ತಿದೆ. ಇದರಲ್ಲಿ ನಿರುದ್ಯೋಗಿ ಮುಸಲ್ಮಾನ ಯುವಕ-ಯುವತಿಯರೊಂದಿಗೆ ಅಭಿಯಂತರ ಶಾಖೆಯ ವಿದ್ಯಾರ್ಥಿಗಳೂ ಇದ್ದಾರೆ.

3. ಈ ವರದಿಯಲ್ಲಿ, ಈ ಬಾರಿ ಹಿಂದೂಗಳ ಧಾರ್ಮಿಕ ಮೆರವಣಿಗೆಯ ಮೇಲೆ ದೇಶದ ಕೆಲವು ಸ್ಥಳಗಳಲ್ಲಿ ಯೋಜಿತ ಪದ್ಧತಿಯಿಂದ ಆಕ್ರಮಣ ನಡೆಸಲಾಗಿದೆ. ಉದಯಪುರನಲ್ಲಿ ಕನ್ಹೈಯ್ಯಾಲಾಲ ಇವರ ಹತ್ಯೆಯ ಹಿಂದೆ ದೇಶದಲ್ಲಿ ಗಲಭೆಯನ್ನು ಹರಡುವ ಉದ್ದೇಶ ಈ ಭಯೋತ್ಪಾದಕ ಸಂಘಟನೆಯದ್ದಾಗಿತ್ತು ಎಂದು ಹೇಳಲಾಗಿದೆ.

ಸಂಪಾದಕೀಯ ನಿಲುವು

ಜಿಹಾದಿ ಸಂಘಟನೆಗಾಗಿ ಭಾರತದಲ್ಲಿ ಈ ರೀತಿ ಹಣ ಸಂಗ್ರಹಿಸುತ್ತಿರುವಾಗ ರಕ್ಷಣಾ ಇಲಾಖೆಗೆ ಈ ವಿಷಯದಲ್ಲಿ ಯಾವುದೇ ಮಾಹಿತಿ ಇಲ್ಲದಿರುವುದು ನಾಚಿಕೆಗೇಡು ! ಭಯೋತ್ಪಾದಕ ಸಂಘಟನೆಗಾಗಿ ಹಣ ಬೇಡುವವರು ಮತ್ತು ಅದಕ್ಕಾಗಿ ಹಣ ನೀಡುವವರ ಮೇಲೆ ಕಠಿಣ ಕ್ರಮ ಜರುಗಿಸುವುದು ಆವಶ್ಯಕವಾಗಿದೆ!