ಅಸ್ಸಾಮಿನ ಶಾಸಕ ಬದ್ರುದಿನ ಅಜ್ಮಲ್ ಇವರಿಂದ ಮುಸಲ್ಮಾನರಿಗೆ ಕರೆ !
ಗೋಹಾಟಿ (ಅಸ್ಸಾಂ) : ದೇಶದ ಬಹು ಸಂಖ್ಯಾತ ಜನರು ಇವರು ಸನಾತನ ಧರ್ಮದವರಾಗಿದ್ದಾರೆ. ಆದ್ದರಿಂದ ಇಸ್ಲಾಂ ಧರ್ಮದ ಪಾಲನೆ ಮಾಡುವುದಕ್ಕಾಗಿ ಈದ್ ದಿನದಂದು ಹಸುವಿನ ಬಲಿ ನೀಡಿ ಸನಾತನ ಧರ್ಮೀಯರ ಭಾವನೆಗಳು ನೋಯಿಸಬಾರದು. ಈದ್ ದಿನ ಬಲಿ ನೀಡುವುದಕ್ಕಾಗಿ ಹಸುವಿನ ಬಲಿ ನೀಡುವುದು ಅನಿವಾರ್ಯವಲ್ಲ. ದೇಶದ ಬಹುತಂಶ ಬಂಧುಗಳು ಇವರು ಸನಾತನ ಅಥವಾ ಹಿಂದೂ ಧರ್ಮದವರಾಗಿದ್ದಾರೆ. ಅವರು ಹಸುವನ್ನು ತಾಯಿಯ ಸಮಾನ ಎಂದು ನಂಬುತ್ತಾರೆ. ಆದ್ದರಿಂದ ಮುಸಲ್ಮಾನರು ಹಸುವಿನ ಬಲಿ ಏತಕ್ಕಾಗಿ ನೀಡಬೇಕು ? ಈದ್ ಗೆ ಮುಸಲ್ಮಾನರು ಹಸುವಿನ ಬಲಿ ನೀಡಬಾರದೆಂಬ ಕರೆ ಅಖಿಲ ಭಾರತೀಯ ಯುನೈಟೆಡ್ ಡೆಮೋಕ್ರೊಟಿಕ್ ಫ್ರಂಟಿನ ಅಧ್ಯಕ್ಷ ಅಸ್ಸಾಂ ರಾಜ್ಯದ ಜಮಿಯದ್ ಉಲಮಾ ದ ಅಧ್ಯಕ್ಷ ಹಾಗೂ ಶಾಸಕ ಬದ್ರುದಿನ ಅಜ್ಮಲ್ ಇವರು ನೀಡಿದರು.
ಅಜ್ಮಲ್ ಮಾತು ಮುಂದುವರಿಸಿ, ಇಸ್ಲಾಂನಲ್ಲಿ ಕೀಟಗಳು, ನಾಯಿ ಅಥವಾ ಬೆಕ್ಕು ಇವುಗಳನ್ನೂ ಕೂಡ ನೋಯಿಸಲು ಅನುಮತಿ ಇಲ್ಲ. ಯಾರಾದರೂ ಬೆಕ್ಕು ಅಥವಾ ನಾಯಿಗೆ ತೊಂದರೆ ನೀಡಿದರೆ ಅಂತಹವರಿಗೆ ಸ್ವರ್ಗದಲ್ಲಿ ಸ್ಥಾನ ಸಿಗುವುದಿಲ್ಲ.
ಸಂಪಾದಕೀಯ ನಿಲುವುಇದು ಈದ ಸಮಯದಲ್ಲಿಯೇ ಏಕೆ ಹೇಳಬೇಕಾಗುತ್ತದೆ ? ದೇಶದಲ್ಲಿ ಪ್ರತಿದಿನ ಎಲ್ಲೆಡೆ ಮುಸಲ್ಮಾನ ಕಟುಕರಿಂದ ಗೋ ಹತ್ಯೆ ಮಾಡಲಾಗುತ್ತದೆ, ಅದನ್ನು ತಡೆಯುವುದಕ್ಕಾಗಿ ಈ ರೀತಿಯ ಕರೆ ದೇಶದ ಎಲ್ಲಾ ಮುಸಲ್ಮಾನ ನಾಯಕರು, ಧಾರ್ಮಿಕ ನಾಯಕರು ಏಕೆ ಮಾಡುವುದಿಲ್ಲ ? |