ತ್ರ್ಯಂಬಕೇಶ್ವರದಲ್ಲಿ ಸಿಂಹಸ್ಥಪರ್ವದ ಮೊದಲನೇ ರಾಜಯೋಗಿ ಸ್ನಾನ ಆಗಸ್ಟ್ ೨, ೨೦೨೭ ರಂದು ನಡೆಯುವುದು !

  • ಅಕ್ಟೋಬರ್ ೩೧, ೨೦೨೬ ರಂದು ಸಿಂಹಸ್ಥ ಧ್ವಜಾರೋಹಣ ನಡೆಯುವುದು!

  • ರಾಜಯೋಗೀ ಸ್ನಾನದ ದಿನಾಂಕಗಳ ಘೋಷಣೆ!

ತ್ರ್ಯಂಬಕೇಶ್ವರ (ನಾಸಿಕ, ಮಹಾರಾಷ್ಟ್ರ) – ತ್ರ್ಯಂಬಕೇಶ್ವರದಲ್ಲಿ ೨೦೨೭ ರಲ್ಲಿ ನಡೆಯಲಿರುವ ಸಿಂಹಸ್ಥ ಕುಂಭಪರ್ವದಲ್ಲಿ ಮೊದಲ ರಾಜಯೋಗಿ ಸ್ನಾನ (ಶಾಹಿ ಸ್ನಾನ) ಆಗಸ್ಟ್ ೨, ೨೦೨೭ ರಂದು ನಡೆಯುವುದು. ಪುರೋಹಿತ ಸಂಘದವರು ಮೂರು ರಾಜ ಯೋಗಿ ಸ್ನಾನದ ದಿನಾಂಕಗಳನ್ನು ನಿಶ್ಚಯಿಸಿ ಅದನ್ನು ಜೂನ್ ೩೦ ರಂದು ಮಹಾಂತ ಸಾಗರಾನಂದ ಸರಸ್ವತಿ ಮಹಾರಾಜ ಮತ್ತು ಅಖಿಲ ಭಾರತೀಯ ಷಡ್ದರ್ಶನ ಅಖಾಡ ಪರಿಷತ್ತಿನ ಮಹಾ ಮಂತ್ರಿ ಹಾಗೂ ಶ್ರೀ ಪಂಚದಶನಾಮ ಜುನಾ ಅಖಾಡದ ಮುಖ್ಯ ಸಂರಕ್ಷಕ ಹರಿ ಗಿರಿ ಮಹಾರಾಜ ಇವರಿಗೆ ಮುಂದಿನ ನಿಯೋಜನೆಗಾಗಿ ಪ್ರಸ್ತುತಪಡಿಸಿದರು.

ಶ್ರೀ ಪಂಚಶಂಭೂ ದಶನಾಮ ಜುನಾ ಆಖಾಡ್ ದ ಹರಿಗಿರಿ ಮಹಾರಾಜ ಇವರ ಉಪಸ್ಥಿತಿಯಲ್ಲಿ ಜುನಾ ಅಖಾಡಾದ ಸಾಧು ಮಹಂತರ ಬೈಠಕ್ ನಡೆಯಿತು. ಈ ಬೈಠಕಿನಲ್ಲಿ ವಿವಿಧ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು. ಆಷಾಢ ಶುಕ್ಲ ಪ್ರತಿಪದೆ ಮತ್ತು ಗುರುಪುಷ್ಯಾಮೃತಯೋಗದ ಲಾಭ ಪಡೆದು ಮಹಾಮಂತ್ರಿ ಹರಿ ಗಿರಿ, ಮಹಾಮಂಡಲೇಶ್ವರ ಶಿವಗಿರಿ, ಶ್ರೀ ಪಂಚಾಯತಿ ಆನಂದ ಅಖಾಡದ ಗಣೇಶಾನಂದ ಸರಸ್ವತಿ, ಜುನಾ ಅಖಾಡದ ವಿಷ್ಣುಗಿರಿ, ನೀಲಕಂಠ ಗಿರಿ, ಇಚ್ಚಾಗಿರಿ, ಮತ್ತು ಸಾಧ್ವಿ ಶೈಲಜಾ ಮಾತಾ ಇವರು ಬೆಳಗ್ಗೆ ತ್ರ್ಯಂಬಕೇಶ್ವರದ ಕುಶಾವರ್ತ ತೀರ್ಥದಲ್ಲಿ ಸ್ನಾನ ಮಾಡಿ ಶ್ರೀ ಮಹಾದೇವನ ದರ್ಶನ ಪಡೆದರು. ಹಾಗೂ ಅಭಿಷೇಕ ಮತ್ತು ಪೂಜೆ ಸಲ್ಲಿಸಿದರು. ಕುಶಾವರ್ತತೀರ್ಥದಲ್ಲಿ ನಡೆದಿರುವ ಕಾರ್ಯಕ್ರಮದಲ್ಲಿ ಪುರೋಹಿತ ಸಂಘದ ತ್ರಿವಿಕ್ರಮ ಜೋಶಿ ಮತ್ತು ಪ್ರಮೋದ ಜೋಶಿ ಇವರು ನಗರಾಧ್ಯಕ್ಷ ಪುರುಷೋತ್ತಮ ಲೋಹಗಾವಕರ್ ಮತ್ತು ಉಪನಗರಾಧ್ಯಕ್ಷ ತ್ರಿವೇಣಿ ತುಂಗಾರ ಇವರ ಉಪಸ್ಥಿತಿಯಲ್ಲಿ ಬರುವ ಸಿಂಹಸ್ಥಪರ್ವದ ಮುಂದಿನಂತೆ ನಿಯೋಜನೆ ಮಾಡಿದರು.

ಸಿಂಹಸ್ಥಪರ್ವದ ಮಹತ್ವದ ದಿನಾಂಕಗಳು !

ಸಿಂಹಸ್ಥ ಧ್ವಜಾರೋಹಣ : ೩೧ ಅಕ್ಟೋಬರ್ ೨೦೨೬

ಮೊದಲ ರಾಜ ಯೋಗಿ ಸ್ನಾನ : ೨ ಆಗಸ್ಟ್ ೨೦೨೬

ದ್ವಿತೀಯ ರಾಜ ಯೋಗೀ ಸ್ನಾನ : ೩೧ ಆಗಸ್ಟ್ ೨೦೨೭

ತೃತೀಯ ರಾಜಯೋಗೇ ಸ್ನಾನ : ೧೨ ಸಪ್ಟೆಂಬರ್ ೨೦೨೭

ಸಿಂಹಸ್ಥ ಪರ್ವಕಾಲ ಸಮಾಪ್ತಿ ಧ್ವಜಾವತರಣ : ೨೪ ಜುಲೈ ೨೦೨೮