ಜಮ್ಮು ಕಾಶ್ಮೀರದಲ್ಲಿ ಜಿ೨೦ ಶೃಂಗಸಭೆ ನಡೆಯುವುದಕ್ಕೆ ಚೀನಾ ವಿರೋಧ !

ಬೇಜಿಂಗ್ (ಚೀನಾ) – ಜಿ ೨೦ ದೇಶಗಳ ಶೃಂಗಸಭೆಯ ಅಧ್ಯಕ್ಷತೆ ಈ ವರ್ಷ ಭಾರತದ ಹತ್ತಿರ ಇದೆ. ಭಾರತದಿಂದ ಈ ಶೃಂಗಸಭೆಯ ಆಯೋಜನೆ ಜಮ್ಮು ಕಾಶ್ಮೀರದಲ್ಲಿ ಮಾಡಲಾಗುವುದು. ಈ ಮೊದಲು ಪಾಕಿಸ್ತಾನ ಮತ್ತು ಈಗ ಚೀನಾ ಇದನ್ನು ವಿರೋಧಿಸುತ್ತಿದ್ದಾರೆ.

೧. ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರರು ಜಾವೊ ಲಿಜಿಯನ್ ಇವರು, ಕಾಶ್ಮೀರದ ಬಗ್ಗೆ ಚೀನಾದ ಧೋರಣೆ ಸ್ಪಷ್ಟವಾಗಿದೆ. ಈ ಸೂತ್ರ (ಕಾಶ್ಮೀರದ ಸಮಸ್ಯೆ) ಭಾರತ ಮತ್ತು ಪಾಕಿಸ್ತಾನ ಇವುಗಳ ನಡುವೆ ಮೊದಲಿಂದಲೂ ಇದೆ. ಈ ವಿಷಯದ ಬಗ್ಗೆ ಸಂಯುಕ್ತ ರಾಷ್ಟ್ರಕ್ಕೆ ಸಂಬಂಧಿತ ಪ್ರಸ್ತಾವ ಮತ್ತು ದ್ವಿಪಕ್ಷೀಯ ಸಹಮತದಿಂದ ಇದಕ್ಕೆ ಯೋಗ್ಯವಾದ ಪರಿಹಾರ ಪಡೆಯುವುದು ಆವಶ್ಯಕವಾಗಿದೆ.

೨. ಜಿ ೨೦ರ ಸದಸ್ಯವೆಂದು ಚೀನಾ ಶೃಂಗಸಭೆಯಲ್ಲಿ ಭಾಗವಹಿಸುವುದೇ ಎಂಬ ಪ್ರಶ್ನೆಯ ಉತ್ತರ ನೀಡುವಾಗ ಲಿಜಿಯನ್ ಸಭೆಯಲ್ಲಿ ಅದರ ಬಗ್ಗೆ ಯೋಚನೆ ಮಾಡಲಾಗುವುದು ಎಂದು ಉತ್ತರ ನೀಡಿದರು.

ಸಂಪಾದಕೀಯ ನಿಲುವು 

ಚೀನಾ ಭಾರತದ ಆಂತರಿಕ ವಿಷಯಗಳಲ್ಲಿ ಮೂಗ ತೂರಿಸಬಾರದು. ಇಲ್ಲವಾದರೆ ಚೀನಾದಿಂದ ಶಿಂಜಿಯಂಗ್ ದಲ್ಲಿ ಮುಸಲ್ಮಾನರ ಮೇಲೆ ನಡೆಯುತ್ತಿರುವ ಅತ್ಯಾಚಾರದ ಬಗ್ಗೆ ಭಾರತ ಮಾತನಾಡಬೇಕಾಗುತ್ತದೆ ಎಂದು ಭಾರತವು ಚೀನಾಗೆ ಎಚ್ಚರಿಕೆ ನೀಡುವುದು ಆವಶ್ಯಕವಾಗಿದೆ.