ಹಿಂದೂಗಳ ಶೇ.೧೦೦ ರಕ್ಷಣೆ ಮಾಡುವ ನಾಯಕರ ಆವಶ್ಯಕತೆ ಹಿಂದೂಗಳಿಗಿದೆ !

ಕನ್ಹೈಯ್ಯಲಾಲ ಕೊಲೆ ವಿಷಯದಲ್ಲಿ ನೆದರ್‌ಲ್ಯಾಂಡಿನ ಶಾಸಕ ಗೀರ್ತ ವಿಲ್ಡರ್ಸ್ ಇವರ ಟ್ವೀಟ್

ಆಂಸ್ಟರ್ಡ್ಯಾಮ್ (ನೆದರ್‌ಲ್ಯಾಂಡ್) – ಭಾರತ, ನಾನು ನಿಮಗೆ ಒಬ್ಬ ಸ್ನೇಹಿತನೆಂದು ತಿಳಿದು ಹೇಳುತ್ತಿರುವುದೇನೆಂದರೆ, ಇನ್ನು ಅಸಹಿಷ್ಣುತೆಯ ಕುರಿತು ಸಹಿಷ್ಣುತೆ ವಹಿಸುವುದು ನಿಲ್ಲಬೇಕು. ಜಿಹಾದಿ, ಭಯೋತ್ಪಾದಕ ಮತ್ತು ಮೂಲಭೂತವಾದಿಗಳಿಂದ ಹಿಂದುತ್ವವನ್ನು ರಕ್ಷಿಸಿ. ಇಸ್ಲಾಮಿನ ಓಲೈಕೆ ಬೇಡ. ಇಲ್ಲವಾದರೆ ಅದರ ಬೆಲೆ ತೆರಬೇಕಾದೀತು. ಹಿಂದೂಗಳಿಗೆ ಎಂಥಾ ನಾಯಕರ ಆವಶ್ಯಕತೆ ಇದೆ ಎಂದರೆ ಅವರು ಶೇಕಡ ನೂರರಷ್ಟು ಹಿಂದೂಗಳ ರಕ್ಷಣೆ ಮಾಡುವರು, ಎಂದು ಟ್ವೀಟ್ ಮೂಲಕ ನೆದರ್‌ಲ್ಯಾಂಡಿನ ಪಾರ್ಟಿ ಫಾರ್ ಫ್ರೀಡಂ ಪಕ್ಷದ ಸಂಸ್ಥಾಪಕ ಶಾಸಕ ಗೀರ್ತ ವಿಲ್ಡರ್ಸ್ ಭಾರತಕ್ಕೆ ಸಲಹೆ ನೀಡಿದ್ದಾರೆ. ಈ ಮೊದಲು ಅವರು ನೂಪುರ ಶರ್ಮಾ ಅವರನ್ನು ಸಮರ್ಥಿಸಿಯೂ ಟ್ವೀಟ್ ಮಾಡಿದ್ದರು.

ಸಂಪಾದಕೀಯ ನಿಲುವು

ವಿದೇಶದ ಒಬ್ಬ ಶಾಸಕನ ಗಮನಕ್ಕೆ ಬರುವ ವಿಷಯ, ಈ ದೇಶದಲ್ಲಿರುವ ೧೦೦ ಕೋಟಿ ಹಿಂದೂಗಳಿಗೆ ಮತ್ತು ಅದರ ನಾಯಕರ ಗಮನಕ್ಕೆ ಬರುವುದಿಲ್ಲವೆಂಬುವುದು ಹಿಂದೂಗಳಿಗೆ ನಾಚಿಕೆಗೇಡು !