ಹಿಂದೂ ಅಪ್ರಾಪ್ತೆಯನ್ನು ಮೋಸಗೊಳಿಸಿದ್ದಕ್ಕಾಗಿ ಮೊಹಮ್ಮದ್ ಜಮಾಲ್ ಬಂಧನ

ಇಂತಹ ಕಾಮಾಂಧರನ್ನು ಕಠಿಣವಾಗಿ ಶಿಕ್ಷಿಸಬೇಕು !

ಕೈರಾನಾ (ಉತ್ತರ ಪ್ರದೇಶ) – ಬಂಗಾಳದಲ್ಲಿ ಮಹಮ್ಮದ ಜಮಾಲ್ ಎಂಬಾತನಿಂದ ಅಪಹರಣಕ್ಕೊಳಗಾದ ಅಪ್ರಾಪ್ತ ಹಿಂದೂ ಹುಡುಗಿಯನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಜಮಾಲ್ ನನ್ನು ಬಂಗಾಳ ಪೊಲೀಸರು ಬಂಧಿಸಿದ್ದಾರೆ. ಜಮಾಲ್ ಫೇಸ್‌ಬುಕ್‌ನಲ್ಲಿ ಹುಡುಗಿಯೊಂದಿಗೆ ಸ್ನೇಹ ಬೆಳೆಸಿದ್ದ. ನಂತರ ಆಕೆಯನ್ನು ಪ್ರೇಮದ ಬಲೆಯಲ್ಲಿ ಸಿಲುಕಿಸಿ ಅಪಹರಿಸಿದ್ದನು. ‘ರಾಷ್ಟ್ರೀಯ ಮಕ್ಕಳ ರಕ್ಷಣಾ ಆಯೋಗ’ ಮತ್ತು ‘ಮಿಶನ್ ಮುಕ್ತಿ ಫೌಂಡೇಶನ್’ ಇವರು ಬಾಲಕಿಯನ್ನು ರಕ್ಷಿಸುವಲ್ಲಿ ಪೊಲೀಸರಿಗೆ ನೆರವಾದರು.
ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಮುಸಲ್ಮಾನ ಯುವಕರು ಹಿಂದೂ ಯುವತಿಯರನ್ನು ಸುಳ್ಳು ಪ್ರೀತಿಯ ಜಾಲದಲ್ಲಿ ಸಿಲುಕಿಸುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅದಕ್ಕಾಗಿ ಅವರು ಶ್ರೀಮಂತರಂತೆ ನಟಿಸುತ್ತಾರೆ. ಜಮಾಲ್ ಇವನು ಹರಿಯಾಣಾದ ಪಾಣಿಪತ್‌ನ ಕಾರ್ಖಾನೆಯೊಂದರಲ್ಲಿ ಏಣಿ ತಯಾರಿಸುವ ಕೆಲಸ ಮಾಡುತ್ತಿದ್ದನು.