ಹಿಂದೂದ್ವೇಷಿ ಪತ್ರಕರ್ತ ಮಹಮ್ಮದ್ ಜುಬೇರ್ ಇವನನ್ನು ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಆರೋಪದಲ್ಲಿ ಬಂಧನ !

ನವ ದೆಹಲಿ – ‘ಆಲ್ಟ್ ನ್ಯೂಸ್’ ಈ ರಾಷ್ಟ್ರವಿರೋಧಿ ವಾರ್ತೆಯ ಜಾಲತಾಣದ ಸಹಸಂಸ್ಥಾಪಕ ಮಹಮ್ಮದ ಜುಬೇರನನ್ನು ದೆಹಲಿ ಪೊಲೀಸರು ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಪ್ರಕರಣದಲ್ಲಿ ಬಂಧಿಸಿದ್ದಾರೆ. ಭಾ.ದ.ವಿ. ನ ‘೧೫೩ ಆ’ (ಎರಡು ಸಮುದಾಯದ ನಡುವೆ ವೈಶಮ್ಯ ನಿರ್ಮಾಣಮಾಡುವ ಪ್ರಯತ್ನ ಮಾಡುವುದು) ಮತ್ತು ‘೨೯೫ ಆ’ (ಧಾರ್ಮಿಕ ಭಾವನೆಗೆ ಧಕ್ಕೆ ತರುವುದು) ಈ ಕಲಂನ ಅಡಿಯಲ್ಲಿ ಅವನ ವಿರುದ್ಧ ದೂರು ದಾಖಲಿಸಲಾಗಿತ್ತು. ೨೦೨೦ ರಲ್ಲಿ ಒಂದು ಪ್ರಕರಣ ಕುರಿತು ಜೂನ್ ೨೭ ರಂದು ಪೊಲೀಸ್ ವಿಚಾರಣೆಗಾಗಿ ಅವನನ್ನು ಕರೆಯಿಸಲಾಗಿತ್ತು. ಸಾಕಷ್ಟು ಸಾಕ್ಷಿಗಳು ಸಿಕ್ಕಿರುವುದರಿಂದ ಪೊಲೀಸರು ಅವನನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ಹೇಳಿದರು.

ಮಹಮ್ಮದ ಜುಬೇರ ಇವನು ಹಿಂದೂ ಹಾಗೂ ಭಾರತದ ವಿರೋಧದಲ್ಲಿ ದೇಶದ ಮುಸಲ್ಮಾನರನ್ನು ಪ್ರಚೋದಿಸುವ ಪ್ರಯತ್ನವನ್ನು ಸತತವಾಗಿ ಮಾಡುತ್ತಿದ್ದನು. ಆತ ನುಪೂರ ಶರ್ಮಾ ಇವರು ತಥಾಕಥಿತವಾಗಿ ಮಹಮದ್ ಪೈಗಂಬರ್ ಇವರ ವಿರುದ್ಧ ನೀಡಿರುವ ಹೇಳಿಕೆ ಸಂದರ್ಭದಲ್ಲಿ ದಾರಿತಪ್ಪಿಸುವ ವಿಡಿಯೋ ತಯಾರಿಸಿದ್ದನು. ಆ ವಿಡಿಯೋ ನೋಡಿ ಭಾರತದ ಮುಸಲ್ಮಾನ್ ಹಾಗೂ ಸುಮಾರು ೧೫ ಮುಸಲ್ಮಾನ್ ದೇಶಗಳಿಂದ ಶರ್ಮಾ ಇವರ ಶಿರಚ್ಛೇದನ ಮಾಡುವ ಹಾಗೂ ಭಾರತವು ಮುಸಲ್ಮಾನ ದೇಶದ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಲಾಗಿತ್ತು.

ಸಂಪಾದಕೀಯ ನಿಲುವು

ಹಿಂದೂಗಳ ವಿರೋಧದಲ್ಲಿ ನಿರಂತರವಾಗಿ ವಾತಾವರಣವನ್ನು ಹಾಳು ಮಾಡುತ್ತಿರುವ ಜುಬೇರ್‌ನನ್ನು ಕಠಿಣ ಶಿಕ್ಷೆಗೊಳಪಡಿಸಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !