ಬಂಗಾಲ ವಿಧಾನಸಭೆಯಲ್ಲಿ ನೂಪುರ ಶರ್ಮಾರ ವಿರುದ್ಧ ನಿಷೇಧ ವ್ಯಕ್ತಪಡಿಸುವ ಠರಾವಿಗೆ ಅನುಮೋದನೆ !

ಬಂಗಾಲದ ತೃಣಮೂಲ ಕಾಂಗ್ರೆಸ್ ಎಂದಾದರೂ ಇಂತಹ ಠರಾವನ್ನು ಹಿಂದೂಗಳ ದೇವತೆಗಳ ನಗ್ನ ಮತ್ತು ಅಶ್ಲೀಲ ಚಿತ್ರಗಳನ್ನು ಬಿಡಿಸಿದ ಮ.ಫಿ.ಹುಸೇನ ಇವರ ವಿರುದ್ಧ ಅನುಮೋಧಿಸಿದೆಯೇ ?

ಕೊಲಕಾತಾ – ಮಹಮ್ಮದ ಪೈಗಂಬರರನ್ನು ಕಥಿತ ಅಪಮಾನಿಸಿರುವ ಪ್ರಕರಣದಲ್ಲಿ ಬಂಗಾಲ ವಿಧಾನಸಭೆಯಲ್ಲಿ ನೂಪುರ ಶರ್ಮಾರ ವಿರುದ್ಧ ನಿಷೇಧ ವ್ಯಕ್ತಪಡಿಸುವ ಠರಾವು ಸಮ್ಮತಿಸಲಾಗಿದೆ.

ಸಂಪಾದಕೀಯ ನಿಲುವು

ಜಾತ್ಯತೀತ ಭಾರತೀಯ ರಾಜ್ಯಸಂವಿಧಾನದ ಅನುಗುಣವಾಗಿ ನಡೆಯುವ ಬಂಗಾಲದ ವಿಧಾನಸಭೆಯಲ್ಲಿ ಧಾರ್ಮಿಕ ಅಂಶಗಳ ಠರಾವು ಸಮ್ಮತಿಸುವ ಅಧಿಕಾರವಿದೆಯೇ ?

ನೂಪುರ ಶರ್ಮಾರನ್ನು ಇಲ್ಲಿಯವರೆಗೆ ಏಕೆ ಬಂಧಿಸಿಲ್ಲ ? – ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ

ನೂಪುರ ಶರ್ಮಾರ ವಿರುದ್ಧದ ನಿಷೇದದ ಠರಾವಿನ ಮೇಲಿನ ಚರ್ಚೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು, ‘ರಾಜ್ಯದಲ್ಲಿ ಹಿಂಸಾಚಾರವಾದಾಗ ನಾವು ಕ್ರಮ ಜರುಗಿಸಿದೆವು; ಆದರೆ ಈ ಮಹಿಳೆಯನ್ನು (ನೂಪುರ ಶರ್ಮಾ) ಇಲ್ಲಿಯವರೆಗೆ ಏಕೆ ಬಂಧಿಸಿಲ್ಲ? ಅವಳನ್ನು ಬಂಧಿಸುವುದಿಲ್ಲವೆಂದು ನನಗೆ ತಿಳಿದಿದೆ.’ ಎಂದು ಹೇಳಿದರು.

ಭಾಜಪದ ಶಾಸಕರಿಂದ ಸಭಾತ್ಯಾಗ

ನೂಪುರ ಶರ್ಮಾರ ವಿರುದ್ಧ ವಿಧಾನಸಭೆಯಲ್ಲಿ ನಿಷೇಧ ಠರಾವು ಮಂಡಿಸಿದ ಬಳಿಕ ಭಾಜಪ ಶಾಸಕರು ಸಭಾತ್ಯಾಗ ಮಾಡಿದರು.