ಸಂಪೂರ್ಣ ಅಫಘಾನಿಸ್ತಾನದಲ್ಲಿ ಕೇವಲ ೨೦ ಸಿಖ ಕುಟುಂಬಗಳು ಮಾತ್ರ ಉಳಿದುಕೊಂಡಿದೆ !

ಕಾಬೂಲ (ಅಫಘಾನಿಸ್ತಾನ) – ತಾಲಿಬಾನದ ಆಡಳಿತದಲ್ಲಿ ಅಫಘಾನಿಸ್ತಾನದಲ್ಲಿ ಈಗ ಕೇವಲ ೨೦ ಸಿಖ್ಕ ಕುಟುಂಬಗಳು ಮಾತ್ರ ಉಳಿದಿವೆ ಎನ್ನುವ ಮಾಹಿತಿಯನ್ನು ಸಿಖ ಸಮಾಜದ ಮುಖಂಡರು ಹೇಳಿದ್ದಾರೆ. ಸಿಖ್ಕರು ಈಗ ಅಫಘಾನಿಸ್ತಾನದ ರಾಜಧಾನಿ ಕಾಬೂಲ ಮತ್ತು ಜಲಾಲಾಬಾದ ಈ ಎರಡು ಪಟ್ಟಣಗಳಲ್ಲಿ ಮಾತ್ರ ವಾಸಿಸುತ್ತಲಿದ್ದು ಅಲ್ಲಿ ಒಟ್ಟಾರೆ ೧೪೦ ರಿಂದ ೧೫೦ ಸಿಖ್ಕರು ಇರುತ್ತಾರೆ ಎಂದು ಹೇಳಿದರು. ಅಫಘಾನಿಸ್ತಾನದಲ್ಲಿ ಭಯೋತ್ಪಾದಕರು ಇತ್ತಿಚೆಗೆ ಗುರುದ್ವಾರವನ್ನು ಗುರಿಯಾಗಿಸಿಕೊಂಡಿದ್ದರು. ಆ ಹಿನ್ನೆಲೆಯಲ್ಲಿ ಸಿಖ ಮುಖಂಡರು ಈ ಮಾಹಿತಿ ನೀಡಿದ್ದಾರೆ. ಕಳೆದ ವರ್ಷ ತಾಲಿಬಾನ ಅಧಿಕಾರ ವಹಿಸಿಕೊಂಡ ನಂತರ ಅಫಘಾನಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲೆ ನಿರಂತರ ದಾಳಿ ನಡೆಯುತ್ತಲಿದೆ. ಇದಲ್ಲದೆ ೨೦೨೦, ೨೦೨೧ ಮತ್ತು ೨೦೨೨ ಗಳಲ್ಲಿ ಸತತ ೩ ವರ್ಷಗಳಿಂದ ವಿವಿಧ ಗುರುದ್ವಾರಗಳ ಮೇಲೆ ದಾಳಿ ಮಾಡಲಾಗಿದೆ.

ಸಂಪಾದಕೀಯ ಇಳುವು

ಭಾರತದಲ್ಲಿ ಮುಸ್ಲಿಮರ ಮೇಲೆ ಕಥಿತ ಅನ್ಯಾಯವಾದ ಮೇಲೆ ಈ ಕುರಿತು ವಿಷಯವನ್ನು ಪ್ರಕಟಿಸಿ ಭಾರತವನ್ನು ಖಳನಾಯಕ ಎಂದು ಬಿಂಬಿಸಿದ ಅಮೇರಿಕಾ ಈಗ ಅಫಗಾನಿಸ್ತಾನದಲ್ಲಿ ಸಿಖ್ಕರು ಅಳಿವಿನ ಅಂಚಿನಲ್ಲಿ ಇರುವ ಬಗ್ಗೆ ಏಕೆ ಒಂದು ಮಾತನಾಡುತ್ತಿಲ್ಲ ? ಎಂದು ಭಾರತವು ಅಮೇರಿಕಾಗೆ ಕೇಳಬೇಕು !