ಭರ್ತಿ ಮೊದಲು ಪ್ರತಿಯೊಂದು ಯುವಕರ ಪೊಲೀಸರಿಂದ ಪರಿಶೀಲನೆ ಆಗುವುದು !
ನವ ದೆಹಲಿ – ಭಾರತದ ಸಂರಕ್ಷಣಾ ಸಚಿವಾಲಯದಿಂದ ಮೂರು ಸೈನ್ಯ ದಳದಲ್ಲಿ ಯುವಕರ ಭರ್ತಿ ಮಾಡುವುದಕ್ಕಾಗಿ ತಂದಿರುವ ‘ಅಗ್ನಿಪಥ’ ಯೋಜನೆಗೆ ದೇಶದ ಅನೇಕ ರಾಜ್ಯಗಳಲ್ಲಿ ಹಿಂಸಾತ್ಮಕವಾಗಿ ವಿರೋಧ ವ್ಯಕ್ತ ಮಾಡಲಾಗುತ್ತಿದೆ. ಈ ಹಿನ್ನಲೆಯಲ್ಲಿ ಜೂನ್ ೧೯ ರಂದು ಮೂರು ಸೈನ್ಯ ದಳದಿಂದ ಪತ್ರಕರ್ತರ ಸಭೆ ತೆಗೆದುಕೊಳ್ಳಲಾಯಿತು. ಇದರಲ್ಲಿ ‘ಯೋಜನೆ ಹಿಂಪಡೆಯುವುದಿಲ್ಲ’, ಎಂದು ಸ್ಪಷ್ಟಪಡಿಸಲಾಗಿದೆ. ಹಾಗೂ ಭರ್ತಿಯಾಗುವ ಯುವಕರನ್ನು ಪೋಲೀಸರು ಪರಿಶೀಲನೆ ನಡೆಸಲಾಗುವುದು, ಇದರಿಂದ ಅಪರಾಧಿ ಕೃತ್ಯಗಳು ನಡೆಸುವವರು ಸೈನ್ಯದಲ್ಲಿ ಬರಬಾರದು, ಎಂದು ಹೇಳಲಾಗಿದೆ.
(ಸೌಜನ್ಯ:India Today)
೧. ಈ ಸಮಯದಲ್ಲಿ ಲೆಫ್ಟಿನೆಂಟ್ ಜನರಲ್ ಅನಿಲ್ ಪುರಿಯವರು, ಕೋಚಿಂಗ್ ಇನ್ಸ್ಟಿಟ್ಯೂಟ್ ನಡೆಸುವವರು ವಿದ್ಯಾರ್ಥಿಗಳನ್ನು ಅಗ್ನಿಪಥ ಯೋಜನೆಯ ವಿರುದ್ಧ ಆಂದೋಲನ ನಡೆಸುವುದಕ್ಕಾಗಿ ಪ್ರಚೋಧಿಸುಸಿದ್ದಾರೆ.
‘ಅಗ್ನಿವೀರ’ (ಅಗ್ನಿಪಥ ಯೋಜನೆಯಿಂದ ಸೈನ್ಯದಲ್ಲಿ ಭರ್ತಿ ಆಗುವವರಿಗೆ ‘ಅಗ್ನಿವೀರ’ ಎನ್ನಲಾಗುವುದು) ಆಗುವವರು ಯಾವುದೇ ಪ್ರತಿಭಟನೆ ಅಥವಾ ವಿಧ್ವಂಸಕ ಕೃತ್ಯಗಳಲ್ಲಿ ಸಹ ಭಾಗಿಯಾಗದಿರುವ ಪ್ರತಿಜ್ಞಾ ಪತ್ರ ತೆಗೆದುಕೊಳ್ಳಲಾಗುವುದು. ಈ ಯೋಜನೆಯ ಮೇಲೆ ನಡೆದಿರುವ ಹಿಂಸಾಚಾರದ ಬಗ್ಗೆ ನಮಗೆ ಅಂದಾಜು ಇರಲಿಲ್ಲ. ಸಶಸ್ತ್ರ ದಳದಲ್ಲಿ ಶಿಸ್ತುಭಂಗಕ್ಕೆ ಸ್ಥಾನವಿಲ್ಲ ಎಂದು ಹೇಳಿದರು.
೨. ಭಾರತೀಯ ನೌಕಾದಳದಿಂದ, ನವಂಬರ್ ೨೧ ರಿಂದ ಮೊದಲ ನೌಕಾದಳ ಅಗ್ನಿವೀರರ ದಳ ಒರಿಸ್ಸಾದ ‘ಐ.ಎನ್.ಎಸ್. ಚಿಲ್ಕಾ’ ಈ ಪ್ರಶಿಕ್ಷಣ ಸಂಸ್ಥೆಯಲ್ಲಿ ತಲುಪುವರು. ಇದಕ್ಕಾಗಿ ಪುರುಷ ಮತ್ತು ಮಹಿಳೆ ಅಗ್ನಿ ವೀರರಿಗೆ ಅನುಮತಿ ಇರುವುದು. ಪ್ರಸ್ತುತ ಭಾರತೀಯ ನೌಕಾದಳದಲ್ಲಿ ನೌಕಾದಳದ ವಿವಿಧ ಹಡಗುಗಳ ಮೇಲೆ ೩೦ ಮಹಿಳಾ ಅಧಿಕಾರಿಗಳು ಇದ್ದಾರೆ. ಅಗ್ನಿಪುತ್ರ ಯೋಜನೆಯ ಅಡಿಯಲ್ಲಿ ಮಹಿಳೆಯರನ್ನು ಭರ್ತಿ ಮಾಡುವುದಾಗಿ ನಾವು ನಿಶ್ಚಯಿಸಿದ್ದೇವೆ. ಅವರನ್ನು ಯುದ್ಧನೌಕೆಗಳ ಮೇಲೆಯೂ ನೇಮಕ ಗೊಳಿಸಲಾಗುವುದು ಎಂದು ಹೇಳಿದರು.
೩. ಲೆಫ್ಟಿನೆಂಟ್ ಜನರಲ್ ಪುರಿಯವರು, ಮುಂದಿನ ೪-೫ ವರ್ಷಗಳಲ್ಲಿ ಅಗ್ನಿವೀರ ಸೈನಿಕರ ಸಂಖ್ಯೆ ೫೦ ರಿಂದ ೬೦ ಸಾವಿರ ಆಗುವುದು ಮತ್ತು ನಂತರ ಅದು ೯೦ ಸಾವಿರದಿಂದ ೧ ಲಕ್ಷದವರೆಗೆ ಹೆಚ್ಚಾಗುವುದು. ನಾವು ಯೋಜನೆಯ ವಿಶ್ಲೇಷಣೆ ಮಾಡುವುದಕ್ಕಾಗಿ ಮತ್ತು ಮೂಲಭೂತ ಸೌಲಭ್ಯಗಳ ಕ್ಷಮತೆ ಹೆಚ್ಚಿಸುವುದಕ್ಕಾಗಿ ೪೬ ಸಾವಿರದಿಂದ ಪ್ರಾರಂಭಿಸಿದ್ದೇವೆ ಎಂದು ಹೇಳಿದರು.