ಜಯಪೂರದ ಮಸೀದಿಯಲ್ಲಿ ಅಪ್ರಾಪ್ತ ಬಾಲಕನ ಲೈಂಗಿಕ ಶೋಷಣೆ

ಜಯಪೂರ(ರಾಜಸ್ಥಾನ) – ಇಲ್ಲಿಯ ಒಂದು ಮಸೀದಿಯಲ್ಲಿ ಕಲಿಯುತ್ತಿರುವ ೧೭ ವರ್ಷದ ಬಾಲಕನಿಗೆ ಮತ್ತಿನ ಔಷಧಿಯನ್ನು ಕುಡಿಸಿ ಮಸೀದಿಯಲ್ಲಿ ಸ್ವಚ್ಛತೆಯ ಕೆಲಸ ಮಾಡುವ ಹಾಫೀಜ ಸರಫರಾಜನು ಲೈಂಗಿಕ ಶೋಷಣೆ ಮಾಡಿರುವುದು ಬೆಳಕಿಗೆ ಬಂದಿದೆ. ರಮಜಾನ ಕಾಲದಲ್ಲಿ ಈ ಬಾಲಕ ಮಸೀದಿಯಲ್ಲಿ ಇಸ್ಲಾಂನ ಶಿಕ್ಷಣ ಪಡೆದುಕೊಳ್ಳಲು ಹೋಗುತ್ತಿದ್ದನು. ಆ ಸಮಯದಲ್ಲಿ ಈ ಘಟನೆ ನಡೆದಿದೆ. ಹಾಫೀಜ ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಹತ್ಯೆ ಮಾಡುವುದಾಗಿ ಬೆದರಿಕೆ ಒಡ್ಡಿದ್ದ. ತದನಂತರ ಅವನು ಅನೇಕ ಬಾರಿ ಈ ಬಾಲಕನನ್ನು ಮನೆಗೆ ಕರೆಸಿ ಅವನ ಲೈಂಗಿಕ ಶೋಷಣೆ ಮಾಡಿದ್ದನು. ಈ ಪ್ರಕರಣವನ್ನು ಪೊಲಿಸರಲ್ಲಿ ದೂರು ದಾಖಲಿಸಲಾಗಿದೆ. ಪೊಲಿಸರು ಹಾಫೀಜನನ್ನು ಹುಡುಕುತ್ತಿದ್ದಾರೆ.

ಸಂಪಾದಕೀಯ ನಿಲುವು

ಇಂತಹ ವಾಸನಾಂಧನಿಗೆ ಶರಿಯತ ಕಾನೂನಿನನ್ವಯ ಸೊಂಟದವರೆಗೆ ಭೂಮಿಯಲ್ಲಿ ಹುಗಿದು ಅವರ ಮೇಲೆ ಕಲ್ಲು ಎಸೆದು ಅವರನ್ನು ಕೊಲ್ಲುವ ಶಿಕ್ಷೆ ನೀಡುವಂತೆ ಯಾರಾದರೂ ಒತ್ತಾಯಿಸಿದರೆ, ಅದಕ್ಕೆ ಆಶ್ಚರ್ಯಪಡಬಾರದು !

ಇಂತಹ ಘಟನೆಯ ವಿಷಯದಲ್ಲಿ ಮುಸಲ್ಮಾನರ ಸಂಘಟನೆ ಮತ್ತು ನಾಯಕರು ಏಕೆ ಮಾತನಾಡುವುದಿಲ್ಲ ?