ಝಾಲವಾಡ (ರಾಜಸ್ಥಾನ)ದ ಕಾಂಗ್ರೆಸ್‌ನ ಮುಖಂಡರಿಂದ ನೂಪುರ ಶರ್ಮಾರ ಬೆಂಬಲಿಸಿ ಮೆರವಣಿಗೆ !

ಪ್ರಮೋದ ಶರ್ಮಾ

ಝಾಲವಾಡ (ರಾಜಸ್ಥಾನ) – ಭಾಜಪದಿಂದ ಅಮಾನತ್ತುಗೊಂಡಿರುವ ವಕ್ತೆ ನೂಪುರ ಶರ್ಮಾ ಇವರು ಮಹಮ್ಮದ ಪೈಗಂಬರ ಬಗ್ಗೆ ಮಾಡಿರುವ ಕಥಿತ ಅಪಮಾನದ ಬಗ್ಗೆ ದೇಶದಲ್ಲಿ ಮತ್ತು ಮುಸ್ಲಿಂ ದೇಶಗಳಲ್ಲಿ ಶರ್ಮಾರನ್ನು ವಿರೋಧಿಸಲಾಗುತ್ತಿದೆ. ಇದರೊಂದಿಗೆ ಭಾರತದಲ್ಲಿರುವ ಕಾಂಗ್ರೆಸ ಮತ್ತು ಇತರೆ ಅನೇಕ ರಾಜಕೀಯ ಪಕ್ಷದವರೂ ಶರ್ಮಾರನ್ನು ವಿರೋಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಲ್ಲಿಯ ಕಾಂಗ್ರೆಸ್‌ನ ನಾಯಕ ಪ್ರಮೋದ ಶರ್ಮಾರವರು ನೂಪುರ ಶರ್ಮಾರನ್ನು ಬೆಂಬಲಿಸಿದ್ದಾರೆ. ಪ್ರಮೋದ ಶರ್ಮಾರವರು ಇಲ್ಲಿ ಮೆರವಣಿಗೆ ನಡೆಸಿದರು. ಈ ಸಂದರ್ಭದಲ್ಲಿ ಅವರು ‘ಸಂಪೂರ್ಣ ಹಿಂದೂ ಸಮಾಜವು ಭಾರತದ ಈ ಕನ್ಯೆಯ ಬೆಂಬಲಕ್ಕೆ ಇದೆ, ಎಂದು ಹೇಳಿದರು.

(ಸೌಜನ್ಯ : आज तक)

ಪ್ರಮೋದ ಶರ್ಮಾ ಮುಂದುವರಿಸುತ್ತಾ, ಒಂದು ವಾರ್ತಾವಾಹಿನಿಯ ಸಂವಾದ ಕಾರ್ಯಕ್ರಮದಲ್ಲಿ ಕೆಲವು ವಿಷಯಗಳನ್ನು ಚರ್ಚಿಸಲಾಯಿತು, ನೈಜವಾಗಿ ನೋಡಿದರೆ, ಆ ವಿಷಯದಲ್ಲಿ ಬಹಳ ಏನೂ ಇರಲಿಲ್ಲ; ಆದರೆ ಉಪ್ಪು ಖಾರ ಹಚ್ಚಿದ ಸುದ್ದಿಯನ್ನು ಬಿತ್ತರಿಸುವ ಜುಬೇರಖಾನರು ‘ಅಲ್ಟ ನ್ಯೂಜ’ ಮಾಧ್ಯಮದಿಂದ ಈ ಪ್ರಕರಣಕ್ಕೆ ಬೇರೆ ತಿರುವು ನೀಡಿದರು. ಆ ಮಾಧ್ಯಮವು ಒಂದು ವಿಶಿಷ್ಟ ಸಮಾಜದ ಎದುರಿಗೆ ನೂಪುರ ಶರ್ಮಾರನ್ನು ಖಳನಾಯಕರಂತೆ ಬಿಂಬಿಸಿತು. ಇದರಿಂದ ನೂಪುರ ಶರ್ಮಾರನ್ನು ಮತ್ತು ಅವರ ಕುಟುಂಬದವರಿಗೆ ಜೀವ ಬೆದರಿಕೆ ನೀಡಲಾಗುತ್ತಿದೆ. ಝಾಲವಾಡ ಪ್ರದೇಶದ ಬ್ರಾಹ್ಮಣ ಸಮಾಜದೊಂದಿಗೆ ಸಂಪೂರ್ಣ ಹಿಂದೂ ಸಮಾಜ ಇಂತಹ ಬೆದರಿಕೆಗಳನ್ನು ಬಲವಾದ ಶಬ್ದಗಳಲ್ಲಿ ನಿಷೇಧ ವ್ಯಕ್ತಪಡಿಸುತ್ತಿದೆ. ನೂಪುರರಿಗೆ ಸಿಗುತ್ತಿರುವ ಬೆದರಿಕೆಗಳಿಂದ ಅವರು ಸ್ವಲ್ಪವೂ ಹೆದರಬಾರದು. ಎಲ್ಲಾ ಹಿಂದೂ ಸಮಾಜ ಭಾರತದ ಈ ಕನ್ಯೆಯೊಂದಿಗೆ ದೃಢವಾಗಿ ನಿಂತಿದ್ದಾರೆ ಎಂದು ಹೇಳಿದರು.

ನೂಪುರ ಶರ್ಮಾರ ವಿರೋಧಿಸಲು ಶ್ರೀನಗರ ಬಂದ್ !

ನೂಪುರ ಶರ್ಮಾ ಮತ್ತು ನವೀನ ಜಿಂದಾಲ ಇವರು ಪೈಗಂಬರರ ಬಗ್ಗೆ ಮಾಡಿರುವ ಕಥಿತ ಅಪಮಾನದ ಬಗ್ಗೆ ಜೂನ ೧೭ ರಂದು ಜಮ್ಮೂ-ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ ಬಂದ್‌ಗೆ ಕರೆ ನೀಡಲಾಗಿತ್ತು.

ಸಂಪಾದಕೀಯ ನಿಲುವು

ಕಾಂಗ್ರೆಸ್ಸಿನಲ್ಲಿರುವ ಹಿಂದೂಗಳಿಗೆ ಧರ್ಮದ ವಿಷಯದಲ್ಲಿ ಮತ್ತು ಹಿಂದುತ್ವನಿಷ್ಠರ ವಿಷಯದಲ್ಲಿ ಆತ್ಮೀಯತೆಯೆನಿಸುತ್ತಿರುವುದು, ಎಂದರೆ ಕಾಲ ಬದಲಾಗುತ್ತಿರುವುದರ ದ್ಯೋತಕವಾಗಿದೆ !