ಮುಂಬರುವ ಭೀಕರ ವಿಪತ್ತಿನಲ್ಲಿ ಹಿಂದುತ್ವನಿಷ್ಠರನ್ನು ಮತ್ತು ಸಾಧಕರನ್ನು ಸಾತ್ತ್ವಿಕ ಹಿಂದೂಗಳನ್ನು ಎಲ್ಲ ರೀತಿಯಿಂದ ರಕ್ಷಿಸುವುದು ಮುಖ್ಯ ಕಾರ್ಯವಾಗಿರಲಿದೆ. ಆಪತ್ಕಾಲದಲ್ಲಿ ಸಿಲುಕಿದ ಸಜ್ಜನ ಹಿಂದೂಗಳಿಗೆ ಎಲ್ಲ ರೀತಿಯ ಸಹಾಯ ಮಾಡಬೇಕು. ಈ ಎಲ್ಲಾ ಕಾರ್ಯಗಳು ಯಾವುದೇ ಒಂದು ಸಂಸ್ಥೆ ಅಥವಾ ವ್ಯಕ್ತಿಗೆ ಸೇರಿದ್ದಲ್ಲ. ಆಪತ್ಕಾಲದಲ್ಲಿ ಹಿಂದೂ ಸಮಾಜದ ಎಲ್ಲಾ ವರ್ಗದವರು ಒಂದಾಗಿ ಹಿಂದೂಗಳ ರಕ್ಷಣೆಗೆ ಶ್ರಮಿಸಬೇಕು. ಹಾಗೆ ಮಾಡುವುದರಿಂದ ಸಾಮಾಜಿಕ ಋಣವನ್ನು ತೀರಿಸಿದಂತಾಗುತ್ತದೆ ಮತ್ತು ನಮ್ಮ ಸಾಧನೆಯೂ ಆಗುತ್ತದೆ. ಈ ವಿಪತ್ತಿನಲ್ಲಿಯ ದುರಂತದ ನಷ್ಟದಿಂದ ಕೆಲವರು ದುಃಖಿತರಾಗಬಹುದು, ಇನ್ನು ಕೆಲವರಿಗೆ `ಈ ನಷ್ಟವನ್ನು ತಡೆಯಲು ದೇವರು ಏನಾದರೂ ಮಾಡಲಿಕ್ಕಿಲ್ಲವೇ?’ ಎಂದು ಪ್ರಶ್ನೆ ಬೀಳಬಹುದು. ಈ ದುರಂತವು ಜಗತ್ತಿನಲ್ಲಿ ಈಶ್ವರೀ ರಾಜ್ಯದ ಸ್ಥಾಪನೆಗೆ ದೈವಿಕವಾಗಿ ಯೋಜಿಸಿದ ಯೋಜನೆಯಾಗಿದೆ ಎಂಬುದನ್ನು ನಾವು ಗಮನದಲ್ಲಿಡಬೇಕು. ಪೃಥ್ವಿಯ ಮೇಲಿನ ರಜ-ತಮ ಭಾರವನ್ನು ಕಡಿಮೆ ಮಾಡಿ ಸಾತ್ತ್ವಿಕ ಗುಣದ ಪ್ರಾಬಲ್ಯವನ್ನು ಸೃಷ್ಟಿಸಲು ಈಶ್ವರನು ಯೋಜಿಸಿದ ಕ್ರಮವಾಗಿದೆ; ಅಂದರೆ ಸಜ್ಜನರ ದೃಷ್ಠಿಯಿಂದ ಈ ಆಪತ್ಕಾಲವು ಇಷ್ಟಾಪತ್ತಿಯಂತಾಗಿದೆ. ಹಾಗಾಗಿ ಆಪತ್ತು ಯೋಗ್ಯವೋ ಅಯೋಗ್ಯವೋ ಎನ್ನುವುದನ್ನು ಲೆಕ್ಕಿಸದೆ ಈ ವಿಪತ್ತಿನಿಂದ ಪಾರಾಗಿ ಹಿಂದೂಗಳ ರಕ್ಷಣೆಗೆ ಶ್ರಮಿಸಿ ಈಶ್ವರನ ಕೃಪೆಗೆ ಪಾತ್ರರಾಗಲು ಅವಕಾಶವಿದೆ’, ಎಂದು ಹಿಂದೂ ಸಮಾಜ ಯೋಚಿಸಬೇಕು’ ಎಂದು ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಶ್ರೀ. ಅಭಯ ವರ್ತಕ ಅವರು ಹೇಳಿದರು. `ಸನಾತನ ಸಂಸ್ಥೆಯ ಕರೆ ! : `ಹಿಂದೂ ಸಮಾಜವು ಆಪತ್ಕಾಲದ ಸಿದ್ಧತೆ ಮಾಡುವುದು’ ಎಂಬ ವಿಷಯದ ಕುರಿತು ಅವರು ಮಾತನಾಡುತ್ತಿದ್ದರು.
(ಸೌಜನ್ಯ : Hindu Janajagruti Samiti)