ಬ್ರಿಟಿಷ್ ಸರಕಾರದಿಂದ ನಿರಾಕರಣೆ
ಲಂಡನ್ (ಬ್ರಿಟನ) – ಬ್ರಿಟನ್‌ನಲ್ಲಿ ಬಿಡುಗಡೆಯಾದ ‘ದಿ ಲೇಡಿ ಆಫ್ ಹೆವನ್’ ಈ ಚಲನಚಿತ್ರದ ಕುರಿತು ವಿವಾದ ನಿರ್ಮಾಣವಾಗಿದೆ. ಈ ಚಲನಚಿತ್ರವು ಇಸ್ಲಾಂ ಧರ್ಮವನ್ನು ಅವಮಾನಿಸುತ್ತದೆ ಎಂದು ಆರೋಪಿಸಿ ಮುಸಲ್ಮಾನರು ಅದನ್ನು ನಿಷೇಧಿಸುವಂತೆ ಬೇಡಿಕೆಯನ್ನಿಡುತ್ತಿದ್ದಾರೆ; ಆದರೆ ಸರಕಾರ ನಿಷೇಧ ಹೇರಲು ನಿರಾಕರಿಸಿದೆ. ವಿರೋಧಿಸುವವರಲ್ಲಿ ಬ್ರಿಟಿಷ್ ಸರಕಾರದ ಸಲಹೆಗಾರ ಮತ್ತು ಲೀಡ್ಸ್‌ನಲ್ಲಿರುವ ಮಕ್ಕಾ ಮಸೀದಿಯ ಮುಖ್ಯ ಇಮಾಮ್(ಮಸೀದಿಯಲ್ಲಿ ಪ್ರಾರ್ಥನೆಯನ್ನು ಮಾಡಿಸಿಕೊಳ್ಳುವ ಪ್ರಮುಖ) ಕಾರಿ ಮೊಹಮ್ಮದ ಅಸೀಮ ಒಳಗೊಂಡಿದ್ದಾರೆ. ಅವರ ವಿರೋಧದ ಹಿನ್ನೆಲೆಯಲ್ಲಿ ಅವರನ್ನು ಸಲಹೆಗಾರ ಹುದ್ದೆಯಿಂದ ತೆಗೆದುಹಾಕಲಾಗಿದೆ.
Qari Asim: Imam removed as government adviser over film protests https://t.co/C74mBGCkZt
— BBC Yorkshire (@BBCLookNorth) June 12, 2022
೧. ಈ ಚಲನಚಿತ್ರದಲ್ಲಿ ಪೈಗಂಬರರ ಮಗಳು ಫಾತಿಮಾಳ ಕಥೆಯನ್ನು ತೋರಿಸಲಾಗಿದೆ. ಪೈಗಂಬರ ಅಥವಾ ಅವರ ಕುಟುಂಬದ ಯಾವುದೇ ವ್ಯಕ್ತಿಯ ಬಗ್ಗೆ ಚಲನಚಿತ್ರ ನಿರ್ಮಿಸುವುದರಿಂದ ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂದು ವಿರೋಧಿಸುತ್ತಿರುವ ಮುಸಲ್ಮಾನರ ಅಭಿಪ್ರಾಯವಾಗಿದೆ. ನಾವು ಅದನ್ನು ಸಹಿಸುವುದಿಲ್ಲ ಎಂದು ಹೇಳಿದ್ದಾರೆ.
೨. ಈ ಚಲನಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕ ಮಲಿಕ ಶಿಬಾಕ ಅವರಿಗೆ ಸಾಮಾಜಿಕ ಮಾಧ್ಯಮದಲ್ಲಿ ಕೊಲೆ ಬೆದರಿಕೆಗಳು ಬರುತ್ತಿವೆ; ಆದರೆ ‘ಇಂತಹ ಬೆದರಿಕೆಗಳಿಗೆ ನಾನು ಹೆದರುವುದಿಲ್ಲ’, ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಮೌಲ್ವಿ (ಇಸ್ಲಾಮಿಕ್ ಧಾರ್ಮಿಕ ನಾಯಕ) ಯಾಸರ ಅಲ-ಹಬೀಬ ಇವರು ಈ ಚಲನಚಿತ್ರದ ಇನ್ನೋರ್ವ ನಿರ್ಮಾಪಕರು ಆಗಿದ್ದಾರೆ. ಅವರು ಶಿಯಾ ಮುಸಲ್ಮಾನರಾಗಿದ್ದಾರೆ.
೩. ನಿರ್ದೇಶಕ ಮಲಿಕ ಶಿಬಾಕ ಅವರು ಸುದ್ದಿ ವಾಹಿನಿಯೊಂದಕ್ಕೆ, ಈ ಚಲನಚಿತ್ರವು ಫಾತಿಮಾ ಅವರ ಜೀವನ ಮತ್ತು ಅವರ ಹೋರಾಟದ ಬಗ್ಗೆ ಇದೆ. ಫಾತಿಮಾ ನಮ್ಮ ಇತಿಹಾಸದಲ್ಲಿನ ಅತ್ಯುತ್ತಮ ವ್ಯಕ್ತಿ ಎಂದು ನಾನು ಭಾವಿಸುತ್ತೇನೆ. ಕಟ್ಟರವಾದಿಗಳು, ಭ್ರಷ್ಟರು ಮೊದಲಾದವರ ವಿರುದ್ಧ ಹೇಗೆ ಹೋರಾಡಬೇಕೆಂದು ಅವಳಿಂದ ಕಲಿಯಬಹುದು. ಆದ್ದರಿಂದಲೇ ಅವಳ ಕಥೆಯನ್ನು ಬೆಳಕಿಗೆ ತರುವುದು ಮುಖ್ಯ ಎಂದು ನಾವು ಭಾವಿಸಿದ್ದೇವೆ ಎಂದು ಹೇಳಿದ್ದಾರೆ.