ಪ್ರಧಾನಿ ನರೇಂದ್ರ ಮೋದಿ ನಾಯಿಯಂತೆ ಸಾಯುತ್ತಾರೆ ಎಂದು ನಾಗಪುರದಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿದ ಕಾಂಗ್ರೆಸ್ ನಾಯಕ ಶೇಖ್ ಹುಸೇನ್!

ಭಾಜಪವು ಪೊಲೀಸರಿಗೆ ದೂರು ನೀಡಿ ಬಂಧನಕ್ಕೆ ಒತ್ತಾಯಿಸಿದೆ

ಎಡದಿಂದ ಪ್ರಧಾನಿ ನರೇಂದ್ರ ಮೋದಿ ಹಾಗೂ ಶೇಖ್ ಹುಸೇನ್

ನಾಗಪುರ – ನ್ಯಾಶನಲ್ ಹೆರಾಲ್ಡ್ ಪತ್ರಿಕೆಯಲ್ಲಾದ ಅವ್ಯವಹಾರದ ಆರೋಪದ ಮೇಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ದೆಹಲಿಯಲ್ಲಿ ಜಾರಿ ನಿರ್ದೇಶನಾಲಯ (ಈಡಿ) ಸತತವಾಗಿ ಮೂರನೇ ದಿನವೂ ವಿಚಾರಣೆಗೊಳಪಡಿಸಿದೆ. ಈ ವೇಳೆಗೆ ಕಾಂಗ್ರೆಸ್ ಕಾರ್ಯಕರ್ತರು ಮೂರು ದಿನಗಳ ಕಾಲ ನಿರ್ದೇಶನಾಲಯದ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ದೇಶದ ಇತರ ಭಾಗಗಳಲ್ಲಿಯೂ ಪ್ರತಿಭಟನೆಗಳು ನಡೆದವು. ಇದೇ ವೇಳೆ ನಾಗಪುರದ ಈಡಿ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಮಾಜಿ ನಗರಾಧ್ಯಕ್ಷ ಶೇಖ್ ಹುಸೇನ್‌ರು, ‘ನರೇಂದ್ರ ಮೋದಿಯವರೇ, ನಾಯಿ ಸತ್ತಾಗ ಬರುವ ಸ್ಥಿತಿಯೇ ನಿಮಗೂ ಬರಲಿದೆ. ಈ ಹೇಳಿಕೆಯಿಂದ ನನಗೆ ೧೦೦ ನೋಟಿಸುಗಳು ಬರಬಹುದು; ಆದರೂ ನನಗೆ ಅದರ ಚಿಂತೆ ಇಲ್ಲ. ನಾವು ಹೋರಾಡುತ್ತಿದ್ದೇವೆ ಮತ್ತು ಹೋರಾಟವನ್ನು ಮುಂದುವರಿಸುತ್ತೇವೆ !’ ಎಂದರು.

ಈ ಸಂಬಂಧದಲ್ಲಿ ಭಾಜಪದಿಂದ ಪೊಲೀಸರಿಗೆ ದೂರು ನೀಡಲಾಗಿದೆ. ಹುಸೇನ್ ಅವರನ್ನು ಬಂಧಿಸುವಂತೆ ಭಾಜಪವು ಒತ್ತಾಯಿಸಿದೆ. ಬಂಧಿಸದಿದ್ದರೆ ಹೋರಾಟ ನಡೆಸಲಾಗುವುದು ಎಂದು ಸಹ ಎಚ್ಚರಿಕೆ ನೀಡಲಾಗಿದೆ.

ಸಂಪಾದಕೀಯ ನಿಲುವು

ಮಹಮದ ಪೈಗಂಬರ ಇವರ ಬಗ್ಗೆ ನೂಪುರ ಶರ್ಮಾ ಅವರ ಕಥಿತ ಅವಹೇಳನಕಾರಿ ಹೇಳಿಕೆಯ ಬಗ್ಗೆ ಕಿರುಚಾಡುವವರು ಶೇಖ ಇವರ ಹೇಳಿಕೆಯ ಬಗ್ಗೆ ಏಕೆ ಮೌನವಾಗಿದ್ದಾರೆ ?