`ಮೌಂಟ ಎವರೆಸ್ಟ’ ಮೇಲೆ ೩೩ ಟನ್‌ಗಿಂತಲೂ ಹೆಚ್ಚು ಕಸ !


ಕಾಠಮಾಂಡು – ಜಗತ್ತಿನಲ್ಲಿರುವ ಎಲ್ಲಕ್ಕಿಂತ ಎತ್ತರದ ಪರ್ವತವಾಗಿರುವ `ಮೌಂಟ ಎವರೆಸ್ಟ’ ಸಹಿತ ೪ ಪರ್ವತಗಳ ಮೇಲೆ ನಡೆಸಲಾದ ಸ್ವಚ್ಛತಾ ಆಂದೋಲನದ ಸಮಯದಲ್ಲಿ ಸ್ವಚ್ಛತೆಯನ್ನು ಮಾಡಿದ ಸಮೂಹಕ್ಕೆ ಒಟ್ಟ್ಟು ೩೩ ಟನ್‌ಗಳಷ್ಟು ಕಸ ದೊರೆತಿದೆ. ಏಪ್ರಿಲ್ ೫ ರಿಂದ ಜೂನ ೫ರ ವರೆಗಿನ ಈ ೨ ತಿಂಗಳಲ್ಲಿ ನೇಪಾಳಿ ಸೈನ್ಯದ ನೇತೃತ್ವದಲ್ಲಿ `ಸಫಾ ಅಭಿಯಾನ ೨೦೨೨’ ಮೌಂಟ ಎವರೆಸ್ಟ, ಲ್ಹೊತ್ಸೆ, ಕಾಂಗಚೆನಜಂಗಾ ಹಾಗೂ ಮನಾಸ್ಲೂದಿಂದ ೩೩,೮೭೭ ಕಿಲೋ ಕಸ ಸಂಗ್ರಹಿಸಲಾಯಿತು.

ಈ ಆಂದೋಲನದಲ್ಲಿ ಸೈನ್ಯದ ೩೦ ಸೈನಿಕರು, ೪೭ ಶೇರ್ಪಾಗಳು ಹಾಗೂ ೪ ಡಾಕ್ಟರರು ಸಹಭಾಗಿಯಾಗಿದ್ದರು. ನೇಪಾಳದ ಸೈನ್ಯಪ್ರಮುಖರಾದ ಪ್ರಭು ರಾಮ ಶರ್ಮಾರವರು ಮಾತನಾಡುತ್ತ, ಸತತವಾಗಿ ಪರಿಸರದ ಹಾನಿಯಾಗುತ್ತದೆ. ಇಂತಹ ಪರಿಸ್ಥಿತಿಗಳಲ್ಲಿ ಪರಿಸರದ ಸಮತೋಲನವನ್ನು ರಕ್ಷಿಸಲು ಇಂತಹ ಆಂದೋಲನಗಳು ಆವಶ್ಯಕವಾಗಿದೆ ಎಂದರು.

ಸಂಪಾದಕೀಯ ನಿಲುವು

* ಇದರಿಂದ ನಿಸರ್ಗದ ಬಗ್ಗೆ ಮಾನವನಲ್ಲಿರುವ ಅಸಂವೇದನಾಶೀಲತೆಯು ಕಂಡುಬರುತ್ತದೆ. ಇಂತಹ ಮನೋವೃತ್ತಿಯಿಂದಾಗಿಯೇ ನಿಸರ್ಗವೂ ತನ್ನ ರೌದ್ರರೂಪವನ್ನು ತೋರಿಸದೇ ಇರುವುದಿಲ್ಲ, ಎಂಬುದನ್ನು ಗಮನದಲ್ಲಿಡಿ !