ಹಿಂದೂ ರಾಷ್ಟ್ರದ ಸ್ಥಾಪನೆಯಾದ ನಂತರವೇ ವಿಶ್ವಕಲ್ಯಾಣವನ್ನು ಮಾಡಲು ಭಾರತವು ಸಕ್ಷಮವಾಗುವುದು ! – ಪ. ಪೂ. ಸ್ವಾಮಿ ಗೋವಿಂದ ದೇವಗಿರಿ ಮಹಾರಾಜರು, ಕೋಶಾಧ್ಯಕ್ಷರು, ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರ ನ್ಯಾಸ, ಅಯೋಧ್ಯೆ

ಅಧಿವೇಶನದ ಉದ್ಘಾಟನಾ ಸತ್ರದಲ್ಲಿ ಪ.ಪೂ. ಸ್ವಾಮಿ ಗೋವಿಂದ ದೇವಗಿರಿ ಮಹಾರಾಜರ ಸಂದೇಶದ ವಿಡಿಯೋ ತೋರಿಸಲಾಯಿತು. ಈ ಸಂದೇಶವು ಕೆಳಗಿನಂತಿದೆ

ಪ.ಪೂ. ಸ್ವಾಮಿ ಗೋವಿಂದ ದೇವಗಿರಿ ಮಹಾರಾಜರು

ಭಾರತದಲ್ಲಿ ಅನಾದಿ ಕಾಲದಿಂದಲೂ ಹಿಂದೂ ಸಂಸ್ಕೃತಿ ಇದೆ. ಈ ಸಂಸ್ಕೃತಿಯು ಗಹನವಾದ ವಿಚಾರಧಾರೆಯನ್ನು ತಂದಿದೆ. ಪ್ರಪಂಚದ ಇತರ ಸಂಸ್ಕೃತಿಗಳು ಲಯ ಹೊಂದಿದ್ದರೂ, ಹಿಂದೂ ಸಂಸ್ಕೃತಿಯು ಇಂದು ಸ್ಥಿರವಾಗಿ ಉಳಿದಿದೆ; ಏಕೆಂದರೆ ಈ ಸಂಸ್ಕೃತಿ ವೈದಿಕ ಸಿದ್ಧಾಂತದ ಮೇಲಾಧಾರಿತವಾಗಿದೆ. ಈ ಸಂಸ್ಕೃತಿಗೆ ನಂತರ ಹಿಂದೂ ಸಂಸ್ಕೃತಿ ಎಂದು ಮಾನ್ಯತೆ ದೊರಕಿತು. ಭಾರತ ಒಂದು ಹಿಂದೂ ರಾಷ್ಟ್ರವೇ ಆಗಿದೆ. ಈ ಭೂಮಿಯಲ್ಲಿ ಅನೇಕ ತೀರ್ಥಕ್ಷೇತ್ರಗಳಿವೆ. ಹಿಂದೂ ಸಂಪ್ರದಾಯವೇ ನಮ್ಮ ಮೂಲ ಸಿದ್ಧಾಂತ. ಇದರಲ್ಲಿ ಯಾವುದೇ ಭಿನ್ನಾಭಿಪ್ರಾಯಗಳು ಇರಲು ಸಾಧ್ಯವಿಲ್ಲ. ಇಲ್ಲಿಯ ನೆಲ ಮತ್ತು ಸಮಾಜವು ಹಿಂದೂ ಸಂಪ್ರದಾಯದಿಂದ ಭರಿತವಾಗಿವೆ; ಆದರೆ ಈ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯವಿದೆ. ಇತಿಹಾಸದುದ್ದಕ್ಕೂ ಹಿಂದೂ ಸಂಸ್ಕೃತಿಯನ್ನು ನಾಶಪಡಿಸುವ ಪ್ರಯತ್ನಗಳು ನಡೆದವು. ಆ ಸಮಯದಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಮತ್ತು ಸ್ವಾಮಿ ವಿವೇಕಾನಂದರು ಹಿಂದೂ ರಾಷ್ಟ್ರವನ್ನು ಸ್ಥಾಪಿಸಲು ಅತ್ಯುತ್ತಮ ಪ್ರಯತ್ನ ಮಾಡಿದರು. ಹಿಂದೂ ರಾಷ್ಟ್ರಕ್ಕೆ ಮತ್ತೆ ಮಾನ್ಯತೆ ಪಡೆಯಲು ಯುವಕರಲ್ಲಿ ಹಿಂದೂ ಸಂಸ್ಕೃತಿಯ ಬಗ್ಗೆ ಅಭಿಮಾನ ಮೂಡುವ ಅವಶ್ಯಕತೆಯಿದೆ. ಹಿಂದೂ ರಾಷ್ಟ್ರದ ದೃಷ್ಟಿಯಿಂದ ಭಾರತವು ಅಭಿವೃದ್ಧಿ ಹೊಂದಿದಾಗಲೇ ಭಾರತವು ಜಗತ್ತಿನ ಕಲ್ಯಾಣವನ್ನು ಮಾಡಲು ಸಕ್ಷಮವಾಗಲಿದೆ.

ಹಿಂದೂ ಜನಜಾಗೃತಿ ಸಮಿತಿಯ ಹಿಂದೂ ರಾಷ್ಟ್ರ ಸ್ಥಾಪನೆಯ ಸಂಕಲ್ಪವು ಕೆಲವೇ ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ !

ಹಿಂದೂಗಳಲ್ಲಿ ಹಿಂದೂ ರಾಷ್ಟ್ರದ ವಿಚಾರಗಳನ್ನು ಬಿಂಬಿಸಲು, ಜಾಗೃತಿ ಮೂಡಿಸುವುದು ಅವಶ್ಯಕ. ಈ ಮಹತ್ಕಾರ್ಯವನ್ನು ಹಿಂದೂ ಜನಜಾಗೃತಿ ಸಮಿತಿ ಮಾಡುತ್ತಿದೆ. ಇದಕ್ಕಾಗಿ ಪ್ರತಿ ವರ್ಷ ಆಯೋಜಿಸಲಾಗುತ್ತಿರುವ ಅಖಿಲ ಭಾರತ ಹಿಂದೂ ರಾಷ್ಟ್ರ ಅಧಿವೇಶನವು ಅಭಿನಂದನೀಯವಾಗಿದೆ. ಹಿಂದೂ ರಾಷ್ಟ್ರ ಸ್ಥಾಪನೆಗೆ ಹಿಂದೂಗಳನ್ನು ಸಂಘಟಿಸಿ ಅದಕ್ಕಾಗಿ ಹಿಂದೂಗಳಲ್ಲಿ ಜಾಗೃತಿ ಮೂಡಿಸಬೇಕು. ೨,೦೦೦ ವರ್ಷಗಳ ಕಾಲ ಗುಲಾಮಿಯಲ್ಲಿದ್ದ ‘ಯಹೂದಿ’ಗಳು ತಮ್ಮ ಸ್ವಂತ ರಾಷ್ಟ್ರವಾದ ಇಸ್ರೇಲ್ ಅನ್ನು ರಚಿಸಿದರು. ಅದಕ್ಕಾಗಿ ಹೋರಾಡಿದರು. ಹಿಂದೂ ಜನಜಾಗೃತಿ ಸಮಿತಿ ಕೂಡ ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಹೋರಾಟ ನಡೆಸುತ್ತಿದೆ. ಸಮಿತಿಯ ಈ ಸಂಕಲ್ಪವು ಕೆಲವೇ ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ. ಇದಕ್ಕಾಗಿ ಭಗವಂತನು ಎಲ್ಲರಿಗೂ ಶಕ್ತಿಯನ್ನು ನೀಡುತ್ತಾನೆ, ಎಂದು ಸ್ವಾಮಿ ಗೋವಿಂದ ದೇವಗಿರಿ ಮಹಾರಾಜರು ಆಶೀರ್ವಚನ ನೀಡಿದರು.