ಹಿಂದೂ ಧರ್ಮ ಸ್ವೀಕರಿಸಿದ ಮಂದಸೌರಿನ ಶಿವಭಕ್ತ ಮುಸ್ಲಿಮ ವ್ಯಕ್ತಿ!


ಮಂದಸೌರ (ಮಧ್ಯಪ್ರದೇಶ) ಎಂಬಲ್ಲಿ ಶೇಖ ಝಾಫರ ಶೇಖ (ವಯಸ್ಸು ೪೬ ವರ್ಷ) ಎಂಬವನು ಇಸ್ಲಾಮಿನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾನೆ. ಅವನನ್ನು ಈಗ ಚೇತನಸಿಂಗ ರಜಪೂತ ಎಂದು ಕರೆಯಲಾಗುತ್ತದೆ. ಅವನ ಪತ್ನಿ ಹಿಂದೂ. ಸ್ಥಳೀಯ ಪಶುಪತಿನಾಥ ದೇವಾಲಯದ ಆವರಣದಲ್ಲಿ ಹಿಂದೂ ಧರ್ಮ ಸ್ವೀಕರಿಸುವ ವಿಧಿವಿಧಾನ ನೆರವೇರಿತು. ಮಹಾಮಂಡಲೇಶ್ವರ ಸ್ವಾಮಿ ಚಿದಂಬರಾನಂದ ಸರಸ್ವತಿಯವರು ಧಾರ್ಮಿಕ ಪೂಜೆಯನ್ನು ಮಾಡುವ ಮೂಲಕ ಶೇಖಗೆ ಹಿಂದೂ ಧರ್ಮದ ದೀಕ್ಷೆ ನೀಡಲಾಯಿತು. ಈ ವೇಳೆ ಸಗಣಿ ಮತ್ತು ಗೋಮೂತ್ರದಿಂದ ಸ್ನಾನ ಮಾಡಿಸಲಾಯಿತು. ಸಂಸದ ಸುಧೀರ ಗುಪ್ತಾ ಮತ್ತು ಶಾಸಕ ಯಶಪಾಲ ಸಿಂಗ ಸಿಸೋಡಿಯಾ ಕೂಡಾ ದೇವಾಲಯಕ್ಕೆ ಭೇಟಿ ನೀಡಿ ಚೇತನಸಿಂಗ ರಜಪೂತಗೆ ಶುಭ ಹಾರೈಸಿದರು. ಇಡೀ ಪ್ರಕ್ರಿಯೆಯಲ್ಲಿ ಶಾಸಕ ಸಿಸೋಡಿಯಾ ದೇವಸ್ಥಾನದಲ್ಲಿ ಹಾಜರಿದ್ದರು.

ಶಾಸಕ ಯಶಪಾಲಸಿಂಗ ಸಿಸೋಡಿಯಾ ಮಾತನಾಡಿ ಚೇತನ ರಜಪೂತರು ಮೊದಲಿನಿಂದಲೂ ಶಿವಭಕ್ತರು. ನಿನ್ನೆಯವರೆಗೂ ಝಾಫರ ಶೇಖ ಆಗಿದ್ದ ಅವರು ಈಗ ‘ಚೇತನ’ ಎಂದೇ ಕರೆಯಲ್ಪಡುತ್ತಾರೆ. ಅವರು ಒಂದು ಹೋಸ ಆರಂಭವನ್ನು ಮಾಡಿದ್ದಾರೆ.

ಮನೆಗೆ ಹಿಂದಿರುಗಿದ ನಂತರ ಚೇತನಸಿಂಗ ರಜಪೂತ ಅವರನ್ನು ‘ದೈನಿಕ ಭಾಸ್ಕರ’ ಪ್ರತಿನಿಧಿ ಸಂದರ್ಶನ ಮಾಡಿದರು. ಆಗ ರಜಪೂತ ಮುಂದಿಟ್ಟ ಸೂತ್ರಗಳು-

೧. ಇಡೀ ವಿಶ್ವದಲ್ಲಿರುವ ಎಲ್ಲ ಜನರು ಸನಾತನ ಧರ್ಮದವರೇ. ಮತಾಂತರಗೊಂಡು ಅಲ್ಲೊಂದು ಇಲ್ಲೊಂದು ವಲಸೆ ಹೋಗಿದ್ದಾರೆ. ಅವರು ತಾಳ್ಮೆಯನ್ನು ತೋರಿಸಬೇಕು ಮತ್ತು ಅವರ ಮೂಲ ಶಾಶ್ವತ ಜೀವನಕ್ಕೆ ಮರಳಬೇಕು; ಏಕೆಂದರೆ ಇಲ್ಲಿಯೇ ಶಾಂತಿ ಸಿಗುತ್ತದೆ.

೨. ನಾನು ಬಾಲ್ಯದಿಂದಲೂ ಸನಾತನ ಧರ್ಮವನ್ನು ಅನುಸರಿಸುತ್ತಿದ್ದೇನೆ. ನನ್ನ ಮನೆಯಲ್ಲಿ ಚಿಕ್ಕ ದೇವರ ಕೋಣೆಯಿದೆ. ಮನೆಯಲ್ಲಿ ಯಾರೂ ನನ್ನನ್ನು ವಿರೋಧಿಸಿಲ್ಲ. ಎಲ್ಲರು ಮುಗ್ಧರೇ. ಯಾರೂ ಮತಾಂಧರಲ್ಲ.

೩. ನಾನು ಶಾರದಾ ಎಂಬ ಹುಡುಗಿಯನ್ನು ಪ್ರೀತಿಸಿ ಮದುವೆಯಾದೆ; ಏಕೆಂದರೆ ನಾನು ಸನಾತನ ಧರ್ಮವನ್ನು ಅನುಸರಿಸುತ್ತೇನೆ. ನಾನು ಮುಸ್ಲಿಂ ಹುಡುಗಿಯನ್ನು ಮದುವೆಯಾಗಿದ್ದರೆ ಅವಳು ನನಗೆ ಪೂಜೆ ಮಾಡಲು ಬಿಡುತ್ತಿರಲಿಲ್ಲ. ಹೀಗಿರುವಾಗ ನನಗೂ ಅವಳಿಗೂ ತೊಂದರೆಯಾಗುತ್ತಿತ್ತು. ಅದಕ್ಕಾಗಿಯೇ ಎಲ್ಲವನ್ನೂ ವಿಚಾರಪೂರ್ವಕವಾಗಿ ಮಾಡಿದ್ದೇನೆ.

೪. ದೇಶದ ಸಂವಿಧಾನದ ಪ್ರಕಾರ ಪ್ರತಿಯೊಬ್ಬರೂ ಸ್ವಯಂ ಪ್ರೇರಣೆಯಿಂದ ಯಾವುದೇ ಧರ್ಮವನ್ನು ನಂಬಬಹುದು. ಇದರಿಂದ ಯಾರಿಗೂ ತೊಂದರೆಯಾಗಬಾರದು, ಸಮಸ್ಯೆ ಇದ್ದರೆ ಅದು ಅವರ ಮತಾಂಧತೆ. ಮತಾಂಧರು ವಿರೋಧಿಸುತ್ತಾರೆ. ಬುದ್ಧಿವಂತರು ವಿರೋಧಿಸುವದಿಲ್ಲ.

೫. ಎಲ್ಲೋ ನಾನು ಅಪೂರ್ಣನಾಗಿದ್ದೇನೆ ಎಂಬ ಭಾವನೆಯಿತ್ತು. ಇಂದು ನಾನು ಪೂರ್ಣನಾಗಿದ್ದೇನೆ. ಈಗ ಮತಾಂತರದ ನಂತರ ನಾನು ಸಂಪೂರ್ಣ ಹಿಂದೂವಾಗಿದ್ದೇನೆ ಮತ್ತು ನಾನು ಶಿವನ ಪರಮ ಭಕ್ತನಾಗಿದ್ದೇನೆ.