ಕಾಬೂಲನಲ್ಲಿ ಬಾಂಬ ಸ್ಫೋಟ, ೧೬ ಜನರ ಸಾವು

ಕಾಬೂಲ (ಅಫಗಾನಿಸ್ತಾನ) – ಮೇ ೨೫ರ ಸಂಜೆ ಕಾಬೂಲನಲ್ಲಿ ೪ ಕಡೆ ಆದ ಸರಣಿ ಬಾಂಬ ಸ್ಫೋಟಗಳಲ್ಲಿ ಕನಿಷ್ಠ ೧೬ ಜನರು ಸಾವನ್ನಪ್ಪಿದ್ದಾರೆ ಮತ್ತು ೨೨ ಜನರು ಗಾಯಗೊಂಡಿದ್ದಾರೆ. ಮಜಾರ-ಎ-ಷರೀಫ ನಗರದ ಮಸೀದಿಯೊಂದರಲ್ಲಿ ಹಾಗೂ ಪ್ರಯಾಣಿಕರ ವಾಹನದಲ್ಲಿ ೩ ಬಾಂಬಗಳು ಸ್ಫೋಟಗೊಂಡಿವೆ.

ಮಸೀದಿಯ ಸ್ಫೋಟದಲ್ಲಿ ಐವರ ಸಾವು ಸಂಭವಿಸಿದೆ. ಬಾಲ್ಖ ಪ್ರಾಂತೀಯ ಪೊಲೀಸ ವಕ್ತಾರ ಮೊಹಮ್ಮದ ಅಸೀಫ ವಝೇರಿ, ಅಫಗಾನಿಸ್ತಾನದ ಶಿಯಾ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಹೇಳಿದ್ದಾರೆ. ದಾಳಿಯ ಹೊಣೆಯನ್ನು ಇಸ್ಲಾಮಿಕ ಸ್ಟೇಟ ಹೊತ್ತುಕೊಂಡಿದೆ.