ಭೂಮಾಲೀಕತ್ವದ ವಿಷಯದಲ್ಲಿ ಹಿಂದೂಗಳನ್ನು ಥಳಿಸಿದ ಮುಸಲ್ಮಾನರು

ರಿವಾ (ಮಧ್ಯಪ್ರದೇಶ) ಸರ್ಕಾರಿ ಭೂಮಿಯಲ್ಲಿ ದೇವಸ್ಥಾನ ಮತ್ತು ಮಸೀದಿ

ರಿವಾ (ಮಧ್ಯಪ್ರದೇಶ) – ಇಲ್ಲಿನ ಮನಗವಾಂ ಗ್ರಾಮದಲ್ಲಿ ಸರಕಾರಿ ಭೂಮಿಯಲ್ಲಿ ದೇವಸ್ಥಾನ ಮತ್ತು ಮಸೀದಿ ಎರಡೂ ಇದೆ, ಆದ್ದರಿಂದ ಎರಡೂ ಧರ್ಮದವರು ಈ ಭೂಮಿಯ ಮೇಲೆ ದಾವೆ ಮಾಡುತ್ತಿದ್ದಾರೆ. ಇದರಿಂದ ನಡೆದ ವಾಗ್ವಾದವು ಹಿಂಸಾಚಾರಕ್ಕೆ ತಿರುಗಿತು. ಇದರಲ್ಲಿ ಮುಸಲ್ಮಾನರು ಲವಕುಶ ಗುಪ್ತಾ ಅವರ ಕುಟುಂಬದವರನ್ನು ಥಳಿಸಿದರು. ಈ ಮಾಹಿತಿ ಪಡೆದ ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿಗೆ ತಲುಪಿದರು. ಆಗ ಪುನಃ ಹೊಡೆದಾಟವಾಯಿತು. ಎರಡೂ ಕಡೆಯವರು ಪರಸ್ಪರರ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಗಲಾಟೆಯಲ್ಲಿ ಗಾಯಗೊಂಡಿದ್ದವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಲ್ಲಿ ಭಾಜಪದ ಮಾಜಿ ನಗರ ಸೇವಕ ಕೂಡ ಸೇರಿದ್ದಾರೆ.

ಸಂಪಾದಕೀಯ ನಿಲುವು

ಮಧ್ಯಪ್ರದೇಶದಲ್ಲಿ ಭಾಜಪ ಸರಕಾರ ಇರುವಾಗ ಹಿಂದೂಗಳ ಮೇಲೆ ದಾಳಿಯಾಗಬಾರದು ಎಂದು ಹಿಂದೂಗಳಿಗೆ ಅನಿಸುತ್ತದೆ !

ಸರಕಾರಿ ಭೂಮಿಯಲ್ಲಿ ಇಂತಹ ಕಟ್ಟಡ ನಿರ್ಮಾಣ ಆಗುವವರೆಗೆ ಆಡಳಿತ ಏನು ಮಾಡುತ್ತಿತ್ತು ?