ಜಗತ್ತಿನಲ್ಲಿ ಗಲ್ಲು ಶಿಕ್ಷೆ ನೀಡುವ ದೇಶಗಳ ಸೂಚಿಯಲ್ಲಿ ಚೀನಾವು ಮುಂಚೂಣಿಯಲ್ಲಿದೆ ! – ಅಮ್ನೆಸ್ಟಿ ಇಂಟರನ್ಯಾಶನಲ್‌

ನ್ಯೂಯಾರ್ಕ – ‘ಅಮ್ನೆಸ್ಟಿ ಇಂಟರನ್ಯಾಶನಲ್‌’ ನೀಡಿರುವ ಮಾಹಿತಿಗನುಸಾರ ಜಗತ್ತಿನಾದ್ಯಂತ ಅಪರಾಧಿಗಳಿಗೆ ಮರಣದಂಡನೆಯ ಶಿಕ್ಷೆ ನೀಡುವ ದೇಶಗಳ ಸೂಚಿಯಲ್ಲಿ ಚೀನಾವು ಮುಂಚೂಣಿಯಲ್ಲಿದೆ. ೨೦೧೯ರಲ್ಲಿ ಜಗತ್ತಿನಾದ್ಯಂತ ನೀಡಲಾಗಿರುವ ಒಟ್ಟೂ ಗಲ್ಲು ಶಿಕ್ಷೆಗಳ ಪೈಕಿ ಶೇ. ೮೦ ರಷ್ಟು ಗಲ್ಲು ಶಿಕ್ಷೆಯನ್ನು ಇರಾನ, ಈಜಿಪ್ತ ಹಾಗೂ ಸೌದಿ ಅರೇಬಿಯಾದಲ್ಲಿ ನೀಡಲಾಗಿದೆ. ೨೦೨೨ರಲ್ಲಿಯೂ ಗಲ್ಲು ಶಿಕ್ಷೆ ನೀಡುವ ಘಟನೆಗಳಲ್ಲಿ ಚೀನಾ, ಹಾಗೆಯೇ ಇರಾನ, ಈಜಿಪ್ತ ಹಾಗೂ ಸೌದಿ ಅರೇಬಿಯಾದಲ್ಲಿ ಯಾವುದೇ ಇಳಿತವಾಗಲಿಲ್ಲ. ಅಮ್ನೆಸ್ಟಿ ಇಂಟರ್‌ನ್ಯಾಶನಲ್‌ನ ಪ್ರಧಾನ ಕಾರ್ಯದರ್ಶಿಗಳಾದ ಎಗ್ನೆಸ ಕೆಲಾಮಾರ್ಡರವರು ಮಾತನಾಡುತ್ತ ‘ನಮ್ಮ ಸಂಘಟನೆಯು ಎಲ್ಲ ಪ್ರಕರಣಗಳಲ್ಲಿ ಗಲ್ಲು ಶಿಕ್ಷೆಯನ್ನು ವಿರೋಧಿಸುತ್ತದೆ. ಗಲ್ಲು ಶಿಕ್ಷೆ ನೀಡುವುದು ಪ್ರಮುಖವಾಗಿ ಅಲ್ಪಸಂಖ್ಯಾತರು ಹಾಗೂ ಉಪೇಕ್ಷಿತ ಸಮುದಾಯಗಳನ್ನು ಪ್ರಭಾವಿತಗೊಳಿಸುವ ಮಾನವಿ ಹಕ್ಕುಗಳ ಉಲ್ಲಂಘನೆಯಾಗಿದೆ, ಎಂದು ಹೇಳಿದರು.

೧. ಈ ಸಂಘಟನೆಯ ವರದಿಯಲ್ಲಿ ‘ಈ ಸೂಚಿಯಲ್ಲಿ ಚೀನಾ, ಉತ್ತರ ಕೋರಿಯಾ ಹಾಗೂ ವಿಯೆತನಾಮ ದೇಶಗಳ ಸೂಚಿಯನ್ನು ಸೇರಿಸಲಾಗಿಲ್ಲ. ಏಕೆಂದರೆ ಈ ದೇಶಗಳ ಅಪರಾಧಿಗಳಿಗೆ ಗಲ್ಲು ಹಾಗೂ ಗಲ್ಲು ಶಿಕ್ಷೆಗೆ ಸಂಬಂಧಿಸಿದ ಮಾಹಿತಿಯನ್ನು ನೀಡುವುದಿಲ್ಲ; ಆದರೆ ಸಂಘಟನೆಗೆ ಚೀನಾದಲ್ಲಿ ಗಲ್ಲಿನ ಘಟನೆಗಳ ಬಗ್ಗೆ ದೊರೆತ ಮಾಹಿತಿಯಿಂದ ಚೀನಾದ ಬಗ್ಗೆ ಅಭಿಪ್ರಾಯಗಳನ್ನು ನೋಂದಾಯಿಸಲಾಗಿದೆ.

೨. ಕಳೆದ ೨ ವರ್ಷಗಳಲ್ಲಿ ಜಗತ್ತಿನಾದ್ಯಂತ ಅಪರಾಧಿಗಳಿಗೆ ಗಲ್ಲು ಶಿಕ್ಷೆ ನೀಡುವ ಘಟನೆಗಳಲ್ಲಿ ಶೇ. ೨೦ರಷ್ಟು ಹೆಚ್ಚಳವಾಗಿದೆ, ಆದರೆ ಗಲ್ಲು ಶಿಕ್ಷೆ ದೊರೆತಿರುವ ಅಪರಾಧಿಗಳ ಸಂಖ್ಯೆಯಲ್ಲಿ ಶೇ. ೩೯ರಷ್ಟು ಹೆಚ್ಚಳವಾಗಿದೆ.

೩. ೨೦೨೦ರಲ್ಲಿ ಜಗತ್ತಿನಾದ್ಯಂತ ೪೮೩ ಅಪರಾಧಿಗಳಿಗೆ ಗಲ್ಲು ಶಿಕ್ಷೆ ನೀಡಲಾದರೆ ೧ ಸಾವಿರದ ೪೭೭ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಲಾಗಿತ್ತು.

೪. ೨೦೨೧ರಲ್ಲಿ ಜಗತ್ತಿನಾದ್ಯಂತ ೫೭೯ ಅಪರಾಧಿಗಳಿಗೆ ಗಲ್ಲು ಶಿಕ್ಷೆ ನೀಡಲಾದರೆ ೨ ಸಾವಿರದ ೫೨ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಲಾಗಿತ್ತು.

೫. ವಿವಿಧ ದೇಶಗಳಿಂದ ದೊರೆತ ಮಾಹಿತಿಗನುಸಾರ ಜಗತ್ತಿನ ಶೇ. ೮೦ ರಷ್ಟು ಗಲ್ಲು ಶಿಕ್ಷೆಯು ಇರಾನ, ಈಜಿಪ್ತ ಹಾಗೂ ಸೌದಿ ಅರೇಬಿಯಾ ದೇಶಗಳಲ್ಲಿ ನೀಡಲಾಗಿದೆ. ಇರಾನಿನಲ್ಲಿ ೨೦೨೧ರಲ್ಲಿ ೩೧೪ ಜನರಿಗೆ ಗಲ್ಲು ಶಿಕ್ಷೆ ನೀಡಲಾದರೆ, ೨೦೨೦ರಲ್ಲಿ ೨೪೬ ಜನರಿಗೆ ಗಲ್ಲು ಶಿಕ್ಷೆ ನೀಡಲಾಗಿದೆ.