ಮನುಷ್ಯ ಜೀವನದ ಬೆಲೆ ಇರುವವರೆಗೆ ಅದರ ಮಹತ್ವವನ್ನು ಅರಿತು ಸಾಧನೆಯನ್ನು ಮಾಡಿರಿ ! – ಪರಾತ್ಪರ ಗುರು ಪಾಂಡೆ ಮಹಾರಾಜರು

(ಪರಾತ್ಪರ ಗುರು) ಪರಶರಾಮ ಪಾಂಡೆ ಮಹಾರಾಜರು

ಭಗವಂತನು ನೀಡಿದ ಆಯುಷ್ಯಕ್ಕೆ ಯಾರು ಮಹತ್ವವನ್ನೇ ನೀಡುವುದಿಲ್ಲ. ಭಗವಂತನು ನೀಡಿದ ಚೈತನ್ಯಶಕ್ತಿಯನ್ನು ಜೀವನದ ಉದ್ಧಾರಕ್ಕಾಗಿ ಉಪಯೋಗಿಸದೇ ಅದನ್ನು ಅನಾವಶ್ಯಕ ವೆಚ್ಚ ಮಾಡಲಾಗುತ್ತಿದೆ. ಈ ಚೈತನ್ಯಶಕ್ತಿಯ ಬೆಲೆಯನ್ನು ಯಾರು ಅರಿತುಕೊಳ್ಳುವುದೇ ಇಲ್ಲ. ಭಗವಂತನ ಚೈತನ್ಯಶಕ್ತಿಯಿಂದಲೇ ಈ ಸೃಷ್ಟಿಯ ಕಾರ್ಯವು ನಡೆದಿದೆ. ಮಾನವನು ಮಾತ್ರ ಈ ಮಾಯಾವಿ ಸೃಷ್ಟಿಯಲ್ಲಿ (ನೋಟದಲ್ಲಿ) ಸಿಲುಕಿದ್ದಾನೆ. ನಿಜವಾಗಿ ಮನುಷ್ಯನ ಶ್ವಾಸವೇ ಅವನಿಗಾಗಿ ಚಲನವಾಗಿದೆ. ‘ಈ ಶ್ವಾಸವು ಯಾರಿಂದ ನಡೆದಿದೆ ?’, ಎಂಬ ವಿಚಾರವೇ ಯಾರು ಮಾಡುವುದಿಲ್ಲ. ಈ ಚೈತನ್ಯದ ಹೊರತು ಮನುಷ್ಯನ ಶರೀರವು ಕೇವಲ ಮೃತ ಶರೀರವಾಗಿರುತ್ತದೆ, ಇದು ಯಾರ ಗಮನಕ್ಕೆ ಹೇಗೆ ಬರುವುದಿಲ್ಲ ? ಸದ್ಯದ ಮಾನವನು ಭೌತಿಕ ಸುಖದ ಹಿಂದೆ ಬಿದ್ದು ಬಹಿರ್ಮುಖನಾಗಿದ್ದಾನೆ. ಅವನು ಅಂತರ್ಮುಖನಾಗಿ ಈ ಎಲ್ಲ ವಿಷಯಗಳ ವಿಚಾರವನ್ನು ಮಾಡುವುದು ಆವಶ್ಯಕವಾಗಿದೆ. ಸಿಕ್ಕಿದ ಮಾನವ ಜೀವನವು ತನ್ನ ಉದ್ಧಾರವನ್ನು ಮಾಡಿಕೊಳ್ಳುವುದಕ್ಕಾಗಿದೆ. ಅದಕ್ಕಾಗಿ ಪ್ರತಿದಿನ ಸಾಧನೆಯನ್ನು ಮಾಡುವುದು ಆವಶ್ಯಕವಾಗಿದೆ. ಗುರುಗಳ ಕೃಪಾಶೀರ್ವಾದದಡಿಯಲ್ಲಿ ಸಾಧನೆ ಮಾಡಿ ಜೀವನ-ಮೃತ್ಯುವಿನ ಚಕ್ರಗಳಿಂದ ಮುಕ್ತರಾಗಿ ಭಗವತ್ಪ್ರಾಪ್ತಿಯನ್ನು ಮಾಡುವುದು, ಇದೇ ಮನುಷ್ಯ ಜೀವನದ ಧ್ಯೇಯವಾಗಿದೆ.’

ಸಾಧನೆಯ ಮಹತ್ವ

‘ಮಾನವನ ಶರೀರವು ಭಗವಂತನೇ ನಿರ್ಮಾಣ ಮಾಡಿದ್ದಾನೆ. ಅವನೇ ಅದರಲ್ಲಿ ಕಾರ್ಯನಿರತನಾಗಿದ್ದಾನೆ’. ಮಾನವನ ಅಸ್ತಿತ್ವವೇ ಇಲ್ಲ. ಇದು ಕೇವಲ ‘ಮಾನವನ ಕಲ್ಯಾಣವಾಗಬೇಕು’, ಅವನಿಗೆ ಈಶ್ವರಪ್ರಾಪ್ತಿಯಾಗಬೇಕು ಮತ್ತು ಆನಂದ ಸಿಗಬೇಕು’, ಎಂದು ಅವನೇ ಮನುಷ್ಯನಿಗಾಗಿ ಮಾಡುತ್ತಿದ್ದಾನೆ. ಮನುಷ್ಯನು ಮಾತ್ರ ಅವನು ನೀಡಿದ ಶರೀರದ ಪೋಷಣೆಗಾಗಿ ಅವನ ಸೇವೆಯನ್ನೇ ಮಾಡಿ ಮುಕ್ತನಾಗಿ ಜೀವನದಲ್ಲಿ ಆನಂದ ಪಡೆಯುವುದಾಗಿದೆ ಮತ್ತು ಮಾಡಿದ ಕರ್ಮದ ಫಲವನ್ನು ಅವನಿಗೇ ಅರ್ಪಣೆ ಮಾಡುವುದಿದೆ. ‘ನಾನು’, ‘ನನ್ನದು’ ಇವುಗಳಿಂದ ಭಗವಂತನ ಸೃಷ್ಟಿಯಲ್ಲಿ ಅಡ್ಡಿ ಬರುತ್ತದೆಯೋ, ಅವುಗಳಿಂದ ಅವನು ಮುಕ್ತನಾಗುತ್ತಾನೆ ಮತ್ತು ಈ ಸೃಷ್ಟಿಯಿಂದ ಹೊರಟು ಹೋಗುವಾಗ ಅವನು ಮುಕ್ತನಾಗಿ ಆನಂದದಿಂದ ಹೋಗುತ್ತಾನೆ. ಹೋಗುವಾಗ ಯಾವುದೇ ವಿಷಯದಲ್ಲಿ ಅವನಿಗೆ ಆಸಕ್ತಿ ಇರಬಾರದು, ಇದಕ್ಕಾಗಿ ಈ ಪ್ರಯತ್ನವಾಗಿದೆ; ಏಕೆಂದರೆ ಹೋಗುವವನು ಉಳಿದ ಎಲ್ಲವನ್ನು ಇಲ್ಲಿಯೇ ಬಿಟ್ಟು ಹೋಗುವವನಿದ್ದಾನೆ; ಆದುದರಿಂದ ಜನ್ಮ-ಮರಣದ ಚಕ್ರಗಳಿಂದ ಮುಕ್ತನಾಗಲು ಈ ಮಾರ್ಗವಾಗಿದೆ. ಇದರ ಅಧ್ಯಯನವೇ ಸಾಧನೆ !’

– (ಪರಾತ್ಪರ ಗುರು) ಪರಶರಾಮ ಪಾಂಡೆ ಮಹಾರಾಜರು