ಕುತುಬಮಿನಾರ್ ಪರಿಸರದಲ್ಲಿರುವ ೨೭ ಮಂದಿರಗಳ ಅವಶೇಷಗಳನ್ನು ಯಾರು ನಿರಾಕರಿಸಲು ಸಾಧ್ಯವಿಲ್ಲ ಪೂ.(ನ್ಯಾಯವಾದಿ) ಹರಿಶಂಕರ ಜೈನ

ಕುತುಬಮಿನಾರ್ ನಲ್ಲಿ ಪೂಜೆ ಮಾಡಲು ನೀಡಬೇಕೆಂಬ ಬೇಡಿಕೆಯ ಮೇಲೆ ಇಂದು ವಿಚಾರಣೆ.

ಪೂ.(ನ್ಯಾಯವಾದಿ) ಹರಿಶಂಕರ್ ಜೈನ್

ವಾರಾಣಸಿ (ಉತ್ತರಪ್ರದೇಶ) ಕುತುಬ್ ಮಿನಾರ ಪರಿಸರದಲ್ಲಿ ೨೭ ಹಿಂದೂ ಮತ್ತು ಜೈನ ಮಂದಿರಗಳ ಅವಶೇಷ ಹರಡಿದೆ. ನಮ್ಮ ಹತ್ತಿರ ಎಷ್ಟೊಂದು ಸಾಕ್ಷಿಗಳಿವೆ ಎಂದರೆ ಅದನ್ನು ಯಾರೂ ನಿರಾಕರಿಸಲು ಸಾಧ್ಯವಿಲ್ಲ, ಎಂದು ಈ ಪ್ರಕರಣದಲ್ಲಿನ ಮನವಿ ಕರ್ತೃರಾದ ಪೂ.(ನ್ಯಾಯವಾದಿ) ಹರಿಶಂಕರ್ ಜೈನ್ ಇವರು ಆಜ್ ತಕ್ ಸಮಾಚಾರ ವಾಹಿನಿಯ ಜೊತೆ ಮಾತನಾಡುವಾಗ ಪ್ರತಿಪಾದಿಸಿದರು. ಮೇ ೨೪ ರಂದು ಇಲ್ಲಿ ಹಿಂದುಗಳಿಗೆ ಪೂಜೆ ಮಾಡುವ ಅನುಮತಿ ನೀಡಬೇಕೆಂಬ ಬೇಡಿಕೆಯ ಮನವಿಯ ಮೇಲೆ ವಿಚಾರಣೆ ನಡೆಯಲಿದೆ ಈ ಸಂದರ್ಭದಲ್ಲಿ ಪೂ.(ನ್ಯಾಯವಾದಿ) ಹರಿಶಂಕರ ಜೈನ್ ಇವರಿಗೆ ಪ್ರಶ್ನೆ ಕೇಳಲಾಗಿತ್ತು.

ಪೂ.(ನ್ಯಾಯವಾದಿ) ಹರಿಶಂಕರ್ ಜೈನ್ ಇವರು ಮಂಡಿಸಿದ ಅಂಶಗಳು

೧. ಕುತುಬಮಿನಾರಿನ ದಕ್ಷಿಣಕ್ಕೆ ಇರುವ ಲೋಕಸ್ಥಂಭದ ಎದುರು ಕಾಣಿಸುವಂತಹ ಎಲ್ಲ ಕಲಾಕೃತಿಗಳು ಮಂದಿರದ ಅವಶೇಷಗಳಾಗಿವೆ. ಇಂತಹ ಕಲಾಕೃತಿಗಳು ಹಿಂದೂಗಳ ಮಂದಿರದಲ್ಲಿ ಸಹಜವಾಗಿ ಕಾಣುತ್ತದೆ. ಇಲ್ಲಿಯ ಪರಿಸರವನ್ನು ಮಂದಿರದ ಅವಶೇಷಗಳಿಂದ ಕಟ್ಟಲಾಗಿದೆ.

೨. ನಮ್ಮ ಹತ್ತಿರ ಎಷ್ಟು ಸಾಕ್ಷಿಗಳಿವೆ ಅದೆಲ್ಲವೂ ಪುರಾತತ್ವ ಇಲಾಖೆಯ ಪುಸ್ತಕದಲ್ಲಿನದ್ದಾಗಿವೆ. ಪುರಾತತ್ವ ಇಲಾಖೆಯ ಅಂಬೋಣ ಏನೆಂದರೆ, ಈ ಅವಶೇಷಗಳು ಮಂದಿರದ್ದಾಗಿದೆ. ಇಲ್ಲಿಯ ಮಂದಿರದಲ್ಲಿ ಹಿಂದು ಮತ್ತು ಜೈನ ಈ ಎರಡು ಧರ್ಮದ ಜನರು ಪೂಜೆ ಸಲ್ಲಿಸುತ್ತಿದ್ದರು.

೩. ಹಿಂದೂ ಮತ್ತು ಜೈನ ಇವರನ್ನು ಬೇರೆಬೇರೆ ಎಂದುಕೊಳ್ಳಬೇಡಿ. ಏಕೆಂದರೆ ಜೈನಮಂದಿರದಲ್ಲಿ ಹಿಂದೂಗಳ ದೇವತೆಗಳ ಮೂರ್ತಿಗಳು ಇದ್ದವು ಮತ್ತು ಜನರು ಅದರ ಪೂಜೆ ಸಹ ಮಾಡುತ್ತಿದ್ದರು. ಎಲ್ಲಿ ಜೈನಮಂದಿರ ಗಳು ಇದ್ದವು ಅದರ ಹತ್ತಿರ ಹಿಂದೂಗಳ ಮಂದಿರಗಳು ಸಹ ಕಟ್ಟಲಾಗುತ್ತಿತ್ತು. ಕುತುಬಮಿನಾರ್ ಇದು ಅದರ ಒಂದು ಉತ್ತಮ ಉದಾಹರಣೆಯಾಗಿದೆ.

೪. ಈ ಸಾಕ್ಷಿಗಳ ಆಧಾರದಲ್ಲಿ ನ್ಯಾಯಾಲಯದಲ್ಲಿ ನನ್ನ ಒಂದೇ ಮನವಿ ಏನೆಂದರೆ, ಇಲ್ಲಿ ಪೂಜೆ ಮಾಡಲು ಅನುಮತಿ ನೀಡಿ. ಅಲ್ಲಿ ಮೊದಲೆಲ್ಲಾ ಏನೆಲ್ಲಾ ನಡೆದಿದೆ ಅದು ಈಗ ಬದಲಾಯಿಸಲು ಆಗುವುದಿಲ್ಲ, ಆದರೆ ಪೂಜೆ ಮಾಡುವ ಅಧಿಕಾರ ದೊರೆಯಬೇಕು.