ಮನೆಯಲ್ಲಿ ಅಥವಾ ಸ್ಥಳೀಯ ಸ್ಥಳದಲ್ಲಿ ನಮಾಜ್ ಮಾಡಿ ! – ಅಂಜುಮನ್ ಇಂತಜಾಮಿಯಾ ಮಸೀದಿ ಸಮಿತಿಯ ಮನವಿ

ಜ್ಞಾನವಾಪಿ ಮಸೀದಿಯಲ್ಲಿ ಶುಕ್ರವಾರದ ನಮಾಜ್‌ಗೆ ಹೆಚ್ಚಿನ ಜನಸಂದಣಿ

ವಾರಣಾಸಿ (ಉತ್ತರಪ್ರದೇಶ) – ಇಲ್ಲಿನ ಜ್ಞಾನವಾಪಿ ಮಸೀದಿಯಲ್ಲಿರುವ ವಜುಖಾನ್ಯಾದಲ್ಲಿ (ನಮಾಜ್ ಮೊದಲು ಕೈಕಾಲು ತೊಳೆಯುವ ಸ್ಥಳ) ಶಿವಲಿಂಗ ಪತ್ತೆಯಾದ ನಂತರ ನ್ಯಾಯಾಲಯದ ಆದೇಶದ ಮೇರೆಗೆ ಈ ಪ್ರದೇಶವನ್ನು ಮುಚ್ಚಲಾಗಿದೆ. ಹೀಗಾಗಿ ಈ ಮಸೀದಿಯಲ್ಲಿ ನಮಾಜ್ ಗೆ ಬರುವವರಿಗೆ ಕೈಕಾಲು ತೊಳೆಯಲು ಪರ್ಯಾಯ ವ್ಯವಸ್ಥೆ ಇಲ್ಲ. ಇದಕ್ಕಾಗಿ ನ್ಯಾಯಾಲಯಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮೇ ೨೦ ರ ಶುಕ್ರವಾರದಂದು ಹೆಚ್ಚಿನ ಸಂಖ್ಯೆಯಲ್ಲಿ ಮುಸಲ್ಮಾನರು ನಮಾಜ್‌ಗಾಗಿ ಆಗಮಿಸಿದ್ದ ಸಂದರ್ಭದಲ್ಲಿ ಅಂಜುಮನ್ ಇಂತಜಾಮಿಯಾ ಮಸೀದಿ ಸಮಿತಿಯು `ವಜೂಖಾನಾ ಮತ್ತು ಶೌಚಾಲಯಗಳನ್ನು ಮುಚ್ಚಿರುವುದರಿಂದ ಮಸೀದಿಯಲ್ಲಿ ಕಿಕ್ಕಿರಿದು ತುಂಬಬೇಡಿ’, ಎಂದು ಮನವಿ ಮಾಡಿದೆ. ಸಮಿತಿಯು ಹಿಂದಿನ ದಿನ ಈ ಬಗ್ಗೆ ಪತ್ರವನ್ನು ಜಾರಿ ಮಾಡಿತ್ತು; ಆದರೂ ಜನಸಂದಣಿ ಇತ್ತು. ಮಸೀದಿಯಲ್ಲಿ ಒಂದೇ ಬಾರಿಗೆ ೧೦೦೦ ಮಂದಿ ಮಾತ್ರ ನಮಾಜ್ ಮಾಡಬಹುದು, ಎಂದು ಹೇಳಲಾಗುತ್ತಿದೆ. ಇಲ್ಲಿ ಟ್ಯಾಂಕ್‌ಗಳಲ್ಲಿ ನೀರು ತುಂಬಿಸಿ ತಾತ್ಕಾಲಿಕ ಪರ್ಯಾಯ ವ್ಯವಸ್ಥೆ ಮಾಡಲಾಗಿತ್ತು.

ಮನೆಯಲ್ಲಿ ಅಥವಾ ಸ್ಥಳೀಯ ಸ್ಥಳದಲ್ಲಿ ನಮಾಜ್ ಮಾಡಲು ಸಾಧ್ಯವಿದೆ ಎಂದಾದರೆ, ಮುಸಲ್ಮಾನರು ಮಸೀದಿಗಳಲ್ಲಿ ನಮಾಜ್ ಮಾಡಲು ಏಕೆ ಒತ್ತಾಯಿಸುತ್ತಾರೆ ? ಮತ್ತು ಅದೂ ಕೂಡ ದೇವಸ್ಥಾನವಾಗಿದೆ ಎಂದು ಬೆಳಕಿಗೆ ಬರುತ್ತಿದೆ ಎಂದಾಗ ಅದೇ ಜ್ಞಾನವಾಪಿ ಮಸೀದಿಯಲ್ಲಿ ನಮಾಜ್‌ಗಾಗಿ ಏಕೆ ಆಗ್ರಹ ಹಿಡಿಯಲಾಗುತ್ತಿದೆ ಈ ಸಮಿತಿಯು ಇದಕ್ಕೆ ಉತ್ತರವನ್ನು ನೀಡಬೇಕು !