ರಾಜಗಡ (ಮಧ್ಯಪ್ರದೇಶ)ದಲ್ಲಿ ದಲಿತ ಹಿಂದೂ ಯುವಕನ ದಿಬ್ಬಣದ ಮೇಲೆ ಮಸೀದಿಯಿಂದ ಕಲ್ಲು ತೂರಾಟ

ಆರೋಪಿಗಳ ಅಕ್ರಮ ಮನೆಗಳನ್ನು ನೆಲಸಮಗೊಳಿಸಿದ ಆಡಳಿತ !

(ಸೌಜನ್ಯ Oneindia English)

ರಾಜಗಡ (ಮಧ್ಯಪ್ರದೇಶ) – ದಲಿತ ಹಿಂದೂ ಯುವಕನ ದಿಬ್ಬಣದ ಮೇಲೆ ಮಸೀದಿಯೊಂದರಿಂದ ಮುಸಲ್ಮಾನರು ಕಲ್ಲು ತೂರಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ೮ ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಅದೇ ರೀತಿ ಆರೋಪಿಗಳ ಅನಧಿಕೃತ ಮನೆಗಳ ಮೇಲೆ ಕಾರ್ಯಾಚರಣೆ ನಡೆಸಿ ಅದನ್ನು ಕೆಡವಲಾಗಿದೆ.

ಮೇ ೧೮ ರ ರಾತ್ರಿ ಈ ದಲಿತ ಯುವಕನ ಮದುವೆಯ ಮೆರವಣಿಗೆಯು ಮಸೀದಿಯಿಂದ ಹಾದು ಹೋಗುತ್ತಿದ್ದಾಗ ಮುಸಲ್ಮಾನರು ದಿಬ್ಬಣದಲ್ಲಿ ವಾದ್ಯ ಬಾರಿಸುವುದನ್ನು ವಿರೋಧಿಸಿದರು. ಅವರು ವಾದ್ಯಗಳ ಧ್ವನಿಯನ್ನು ಕಡಿಮೆ ಮಾಡಲು ಹೇಳಿದರು. ಅದು ವಾಗ್ವಾದಕ್ಕೆ ಕಾರಣವಾಯಿತು. ಆಗ ಮಸೀದಿಯಲ್ಲಿದ್ದವರು ಕಲ್ಲು ತೂರಾಟ ಆರಂಭಿಸಿದರು. ಹಾಗೂ ದಿಬ್ಬಣದಲ್ಲಿದ್ದ ಕೆಲವು ಮಹಿಳೆಯರಿಗೂ ಕಿರುಕುಳ ನೀಡಿದರು. ಈ ಕಲ್ಲು ತೂರಾಟದಲ್ಲಿ ಐವರು ಮಕ್ಕಳು ಗಾಯಗೊಂಡಿದ್ದಾರೆ. ಈ ಪ್ರಕರಣದಲ್ಲಿ ಒಟ್ಟು ೨೧ ಜನರನ್ನು ಗುರುತಿಸಲಾಗಿದೆ. ಅವರಲ್ಲಿ ಎಂಟು ಮಂದಿಯನ್ನು ಬಂಧಿಸಲಾಗಿದೆ. ಆರೋಪಿಗಳು ಜಿರಾಪುರದ ವಾರ್ಡ್ ನಂ.೪ರ ಸರಕಾರಿ ಜಾಗದಲ್ಲಿ ಅಕ್ರಮವಾಗಿ ಮನೆ ಕಟ್ಟಿಕೊಂಡಿದ್ದರು. ಅಂತಹ ೪೮ ಮನೆಗಳನ್ನು ಕೆಡವಲಾಯಿತು. (ಈ ಘಟನೆ ನಡೆಯದೇ ಇದ್ದಿದ್ದರೆ ಆಡಳಿತವು ಈ ಅಕ್ರಮ ಮನೆಗಳನ್ನು ನೆಲಸಮ ಮಾಡುತ್ತಿರಲಿಲ್ಲ ಎಂದು ತಿಳಿದುಕೊಳ್ಳಬೇಕೇನು? ಸರಕಾರಿ ಜಾಗದಲ್ಲಿ ಇಂತಹ ಮನೆಗಳನ್ನು ಕಟ್ಟುವವರೆಗೂ ಆಡಳಿತವು ನಿದ್ದೆ ಮಾಡುತ್ತಿತ್ತೇನು ? ಅದೇ ರೀತಿ ರಾಜ್ಯದ ಬೇರೆಡೆ ಸರಕಾರಿ ಜಾಗದಲ್ಲಿ ಅಕ್ರಮ ಕಟ್ಟಡಗಳು ನಿರ್ಮಿಸಿದ್ದಲ್ಲಿ, ಆ ಅತಿಕ್ರಮಣಕಾರರು ಬೇರೆ ಕಡೆ ಕಲ್ಲು ತೂರಾಟ ಮಾಡಿದನಂತರವೇ ಕ್ರಮ ಕೈಗೊಳ್ಳುವರೇ ? – ಸಂಪಾದಕರು)

`ದಲಿತ-ಮುಸ್ಲಿಂ ಭಾಯಿ ಭಾಯಿ’ ಎನ್ನುವವರು ಇದರ ಬಗ್ಗೆ ಮಾತನಾಡುತ್ತಾರೆಯೇ ?- ಸಂಪಾದಕರು 

ಮಸೀದಿಗಳ ಜಾಗದಲ್ಲಿ ಕೇವಲ ಹಿಂದೂ ಧಾರ್ಮಿಕ ಮಾತ್ರವಲ್ಲ, ಸಾಮಾಜಿಕ ಕಾರ್ಯಕ್ರಮಗಳ ಸಂದರ್ಭದಲ್ಲೂ ಕಲ್ಲು ತೂರಾಟ ಮತ್ತು ದಾಳಿಗಳು ನಡೆಯುತ್ತವೆ. ಈ ಬಗ್ಗೆ ಜಾತ್ಯತೀತವಾದಿಗಳು ಮತ್ತು ಪ್ರಗತಿ(ಅಧೋಗತಿ)ಪರರು ಏಕೆ ಬಾಯಿ ಬಿಡುತ್ತಿಲ್ಲ ?- ಸಂಪಾದಕರು 

ಯಾವಾಗಲೂ ಮಸೀದಿಗಳಲ್ಲಿ ಆಯುಧಗಳು ಮತ್ತು ಕಲ್ಲುಗಳನ್ನು ಸಂಗ್ರಹಿಸಿಡಲಾಗುತ್ತದೆಯೇ ? -ಸಂಪಾದಕರು