ಕುತುಬ್ ಮಿನಾರ ಇಲ್ಲಿಯ ಮಸೀದಿಯ ಕಂಬದ ಮೇಲೆ ಭಗವಂತ ನರಸಿಂಹನ ಅಪರೂಪದ ಮೂರ್ತಿ

ನವದೆಹಲಿ – ಕುತುಬ್ ಮಿನಾರ ನಲ್ಲಿರುವ ಹಿಂದೂ ಮತ್ತು ಜೈನ ಇವರ ದೇವಸ್ಥಾನಗಳನ್ನು ನಾಶಗೊಳಿಸಿ ಅಲ್ಲಿ ಕಟ್ಟಲಾಗಿರುವ ಕುವತ್ ಉಲ್ ಇಸ್ಲಾಂ ಮಸೀದಿಯ ಕಂಬದ ಮೇಲೆ ದೇವತೆಯ ಒಂದು ಮೂರ್ತಿ ಕಂಡುಬಂದಿದೆ. ಇದು ಭಗವಂತ ನರಸಿಂಹನ ಮತ್ತು ಭಕ್ತಪ್ರಹ್ಲಾದನ ಮೂರ್ತಿಯಾಗಿದೆ ಎಂಬ ಮಾಹಿತಿ ಪುರಾತತ್ವ ತಜ್ಞ ಧರ್ಮವೀರ ಶರ್ಮ ಇವರು ನೀಡಿದ್ದಾರೆ. ಶರ್ಮಾ ಅವರು ಭಾರತೀಯ ಪುರಾತತ್ವ ಇಲಾಖೆಯ ಮಾಜಿ ಕ್ಷೇತ್ರೀಯ ಸಂಚಾಲಕರಾಗಿದ್ದಾರೆ.

೧. ಧರ್ಮವೀರ ಶರ್ಮಾ ಇವರು ಮುಂದಿನಂತೆ ಹೇಳಿದ್ದಾರೆ. ಈ ಮೂರ್ತಿಯು ೮ ನೇ ಶತಮಾನದಲ್ಲಿನ ಪ್ರತಿಹಾರ ರಾಜರ ಪೈಕಿ ಒಬ್ಬರಾದ ರಾಜ ಅನಂಗಪಾಲ ಇವರ ಕಾಲದ್ದಾಗಿದೆ. ಈ ರೀತಿಯ ಮೂರ್ತಿ ಬೇರೆ ಎಲ್ಲಿಯೂ ಸಿಗುವುದಿಲ್ಲ. ಆದ್ದರಿಂದ ಇದು ಅಪರೂಪದ ಮೂರ್ತಿ ಆಗಿದೆ. ಇಲ್ಲಿಯವರೆಗೆ ನಾನು ಭಗವಂತ ನರಸಿಂಹನ ಮೂರ್ತಿ ನೋಡಿದ್ದೇವೆ. ಅದರಲ್ಲಿ ನರಸಿಂಹ ಹಿರಣ್ಯಕಶ್ಯಪುವಿನ ವಧೆ ಮಾಡುತ್ತಿರುವ ಪ್ರಸಂಗ ಇರುತ್ತದೆ. ಆದರೆ ಈ ಮೂರ್ತಿಯಲ್ಲಿ ಭಕ್ತ ಪ್ರಹ್ಲಾದ ಭಗವಂತ ನರಸಿಂಹನ ಕ್ರೋಧ ಶಾಂತ ಮಾಡುವುದಕ್ಕಾಗಿ ಅವನಿಗೆ ಪ್ರಾರ್ಥನೆ ಮಾಡುತ್ತಿರುವುದು, ಕಾಣಿಸುತ್ತದೆ.

೩. ಈ ಮೂರ್ತಿಯ ಸಂದರ್ಭದಲ್ಲಿ ರಾಷ್ಟ್ರೀಯ ಸ್ಮಾರಕ ಪ್ರಾಧಿಕಾರದ ಅಧ್ಯಕ್ಷ  ತರುಣ್ ವಿಜಯ ಇವರು, ಈ ಮೂರ್ತಿಯ ಛಾಯಾಚಿತ್ರಗಳನ್ನು ದೇಶದ ಪುರಾತತ್ವ ತಜ್ಞರ ಅಭ್ಯಾಸಕ್ಕಾಗಿ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.