ನಿಮಚ(ಮಧ್ಯ ಪ್ರದೇಶ) ಇಲ್ಲಿಯ ದರ್ಗಾದ ಹತ್ತಿರ ಶ್ರೀ ಹನುಮಾನ ಮೂರ್ತಿಯ ಪ್ರತಿಷ್ಠಾಪನೆ ಮಾಡಿರುವುದರಿಂದ ಮುಸಲ್ಮಾನರಿಂದ ಕಲ್ಲುತೂರಾಟ

ನೀಮಚ (ಮಧ್ಯ ಪ್ರದೇಶ) : ಇಲ್ಲಿಯ ಹಳೇ ಕಚೇರಿ ಆವರಣದಲ್ಲಿ ಮೇ ೧೬ ರಾತ್ರಿ ಮತಾಂಧರಿಂದ ಹಿಂದೂಗಳ ಮೇಲೆ ದಾಳಿ ನಡೆದಿದೆ. ಇಲ್ಲಿಯ ದರ್ಗಾದ ಹತ್ತಿರ ಶ್ರೀ ಹನುಮಾನ ಮೂರ್ತಿ ಪ್ರತಿಷ್ಠಾಪನೆ ಮಾಡಿರುವುದರಿಂದ ಅವರು ದಾಳಿ ನಡೆಸಿದ್ದಾರೆ. ಹಿಂದೂಗಳಿಂದ ಕೂಡ ಪ್ರತೀಕಾರ ನೀಡಲಾಯಿತು. ಇದರಿಂದ ಅಲ್ಲಿ ಹಿಂಸಾಚಾರ ಭುಗಿಲೆದ್ದು ಉದ್ವಿಗ್ನತೆ ನಿರ್ಮಾಣವಾಗಿದೆ. ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದು ಬಿಗಿ ಬಂದೋಬಸ್ತು ಮಾಡಲಾಗಿದೆ. ಈಗ ಅಲ್ಲಿ ಕರ್ಫ್ಯೂ ಜಾರಿಯಲ್ಲಿದೆ. ಹಿಂಸಾಚಾರದ ಸಮಯದಲ್ಲಿ ಅನೇಕ ವಾಹನಗಳು ಹಾನಿಗೊಳಗಾಗಿದ್ದು ಅಗ್ನಿಗೆ ಆಹುತಿ ಆಗಿರುವ ಘಟನೆ ಬೆಳಕಿಗೆ ಬಂದಿದೆ. ಪೊಲೀಸ್ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ ಎರಡು ಸಮೂಹಗಳ ಜನರು ಇಲ್ಲಿ ನೆರೆದಿದ್ದರು. ಅವರಲ್ಲಿ ವಾದ-ವಿವಾದ ನಡೆಯಿತು, ಆದ್ದರಿಂದ ಎರಡು ಸಮಾಜದ ಜನರನ್ನು ನಿಯಂತ್ರಣ ಕೋಣೆಗೆ ಕರೆಸಲಾಯಿತು. ಆದರೆ ಅದರ ನಂತರ ಕೆಲವು ಜನರು ಕಲ್ಲು ತೂರಾಟ ನಡೆಸಿದರು, ಆದರೆ ಇದರಲ್ಲಿ ಯಾರು ಗಾಯಗೊಂಡಿಲ್ಲ.

ಸಂಪಾದಕೀಯ ನಿಲುವು

ಮಧ್ಯಪ್ರದೇಶದಲ್ಲಿ ಭಾಜಪ ಸರಕಾರ ಇರುವಾಗ ಒಂದು ವಿಶಿಷ್ಟ ಸಮಾಜವು ಹಿಂದೂಗಳ ಮೇಲೆ ದಾಳಿ ನಡೆಸುವ ಧೈರ್ಯ ಹೇಗೆ ಮಾಡುತ್ತದೆ ಎಂಬ ಪ್ರಶ್ನೆ ಹಿಂದೂಗಳ ಮನಸ್ಸಿನಲ್ಲಿ ನಿರ್ಮಾಣವಾಗಿದೆ!