ನೇಪಾಳವಿಲ್ಲದೆ ನಮ್ಮ ಶ್ರೀರಾಮನೂ ಅಪೂರ್ಣ ! – ಪ್ರಧಾನಿ ನರೇಂದ್ರ ಮೋದಿ

ನೇಪಾಳ ಪ್ರವಾಸದಲ್ಲಿರುವ ಪ್ರಧಾನಿ ಮೋದಿ

ಕಾಠಮಂಡು (ನೇಪಾಳ) – ಪ್ರಧಾನಿ ನರೇಂದ್ರ ಮೋದಿ ನೇಪಾಳ ಪ್ರವಾಸಕ್ಕೆ ತೆರಳಿದ್ದಾರೆ. ಮೇ ೧೬ ರಂದು ಬುದ್ಧ ಪೂರ್ಣಿಮೆಯ ಸಂದರ್ಭದಲ್ಲಿ ಅವರು ನೇಪಾಳದ ಭಗವಾನ ಬುದ್ಧನ ಜನ್ನಸ್ಥಳವಾದ ಲುಂಬಿನಿಗೆ ಹೋಗಿ ಅಲ್ಲಿನ ಮಾಯಾದೇವಿಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಈ ವೇಳೆ ಮಾತನಾಡಿದ ಪ್ರಧಾನಿ ಮೋದಿಯವರು, ‘ಭಗವಾನ ಬುದ್ಧನ ಜನ್ಮಸ್ಥಳಕ್ಕೆ ಭೇಟಿ ನೀಡುವ ಸೌಭಾಗ್ಯ ಇಂದು ನನಗೆ ಸಿಕ್ಕಿದೆ. ಇಲ್ಲಿನ ಶಕ್ತಿ ನನಗೆ ವಿಭಿನ್ನ ಅನುಭವ ನೀಡುತ್ತಿದೆ. ನಾನು ನೇಪಾಳಕ್ಕೆ ಬಂದಾಗ ಪಶುಪತಿನಾಥ, ಜನಕಪುರ ಧಾಮ ಅಥವಾ ಲುಂಬಿನಿಯಲ್ಲಿ ತನ್ನ ಆಧ್ಯಾತ್ಮಿಕ ಆಶಿರ್ವಾದವನ್ನು ನೀಡುತ್ತಿರುತ್ತದೆ. ನೇಪಾಳವಿಲ್ಲದೆ ನಮ್ಮ ಭಗವಾನ ಶ್ರೀ ರಾಮನೂ ಕೂಡಾ ಅಪೂರ್ಣ. ಭಾರತದಲ್ಲಿ ಶ್ರೀರಾಮಮಂದಿರ ನಿರ್ಮಿಸುತ್ತಿರುವಾಗ ನೇಪಾಳದಲ್ಲಿಯೂ ಅಷ್ಟೇ ಆನಂದ ಆಗುತ್ತಿದೆ ಎಂದು ಹೇಳಿದರು.