ಉಚ್ಚ ನ್ಯಾಯಾಲಯದಿಂದ ಕೇಂದ್ರ ಸರಕಾರ ಸಹಿತ ೮ ಜನರಿಗೆ ನೋಟಿಸ್ ಜಾರಿ
ಧಾರ (ಮಧ್ಯಪ್ರದೇಶ) – ಇಲ್ಲಿಯ ಭೋಜಶಾಲಾ ಇದು ಶ್ರೀ ಸರಸ್ವತೀ ದೇವಿಯ ಪ್ರಾಚೀನ ಮಂದಿರವಾಗಿದೆ. ಇಲ್ಲಿ ದೇವಿಯ ಮೂರ್ತಿ ಮತ್ತೆ ಪ್ರತಿಷ್ಠಾಪನೆ ಮಾಡಬೇಕು ಮತ್ತು ಇಲ್ಲಿ ನಡೆಯುವ ನಮಾಜ ನಿಲ್ಲಿಸಬೇಕು’ ಎಂದು ಇಂದೂರ್ ಉಚ್ಚನ್ಯಾಯಾಲಯದಲ್ಲಿ ಅರ್ಜಿಯ ಮೂಲಕ ಒತ್ತಾಯಿಸಲಾಗಿದೆ. ಜೊತೆಗೆ ಈ ಅರ್ಜಿಯಲ್ಲಿ ಭೋಜಶಾಲಾದ ಚಿತ್ರೀಕರಣ ಮತ್ತು ಛಾಯಾಚಿತ್ರ ತೆಗೆಯಲು ಅವಕಾಶವನ್ನೂ ಕೋರಲಾಗಿದೆ. ಈ ಬಗ್ಗೆ ಉಚ್ಚ ನ್ಯಾಯಾಲಯವು ಕೇಂದ್ರ ಸರಕಾರ, ಪುರಾತತ್ವ ಇಲಾಖೆ, ಕಮಲ ಮೌಲಾ ವೆಲ್ಫೇರ್ ಸೊಸೈಟಿ, ಭೋಜಶಾಲಾ ಕಮಿಟಿ, ಜಿಲ್ಲಾಧಿಕಾರಿ ಮುಂತಾದ ೮ ಜನರಿಗೆ ನೋಟಿಸ್ ಜಾರಿ ಮಾಡಿದೆ.
೧. ಅರ್ಜಿದಾರರು ‘ಹಿಂದೂ ಫ್ರಂಟ್ ಫಾರ್ ಜಸ್ಟೀಸ್’ ಈ ಸಂಘಟನೆಯ ಅಧ್ಯಕ್ಷ ರಂಜನಾ ಅಗ್ನಿಹೊತ್ರಿ, ಕುಲದೀಪ ತಿವಾರಿ, ಮೋಹಿತ ಗರ್ಗ, ಆಶಿಷ ಗೋಯೆಲ, ಸುನಿಲ್ ಶಾಶ್ವತ ಮತ್ತು ರೋಹಿತ ಖಂಡೆಲವಾಲ ಇರುವರು. ಅವರು ಪೂ. (ನ್ಯಾಯವಾದಿ) ಹರಿಶಂಕರ ಜೈನ, ನ್ಯಾಯವಾದಿ ವಿಷ್ಣುಶಂಕರ್ ಜೈನ ಮತ್ತು ನ್ಯಾಯವಾದಿ ಪಾರ್ಥ ಇವರ ಮೂಲಕ ಈ ಅರ್ಜಿ ದಾಖಲಿಸಿದ್ದಾರೆ. ಈ ಸಮಯದಲ್ಲಿ ಭೋಜಶಾಲಾದ ೩೩ ಛಾಯಾಚಿತ್ರಗಳನ್ನು ಸಲ್ಲಿಸಲಾಯಿತು. ಇದರಲ್ಲಿ ಭೋಜಶಾಲೆಯಲ್ಲಿ ದೇವತೆಗಳ ಚಿತ್ರಗಳು ಮತ್ತು ಸಂಸ್ಕೃತದ ಶ್ಲೋಕಗಳು ಇರುವುದು ಕಾಣುತ್ತಿದೆ.
೨. ಪೂ. (ನ್ಯಾಯವಾದಿ) ಹರಿಶಂಕರ ಜೈನ ಇವರು ಮಾತನಾಡುತ್ತಾ, ಇದು ಶ್ರೀ ಸರಸ್ವತೀ ದೇವಿಯ ಮಂದಿರವಾಗಿದೆ; ಆದರೆ ಇಲ್ಲಿ ನಂತರ ಕಮಾಲ ಮೌಲ ಮಸೀದಿ ಕಟ್ಟಲಾಯಿತು. ಭೋಜಶಾಲಾದ ನಿರ್ಮಿತಿ ರಾಜ ಭೋಜನ ಕಾಲದಲ್ಲಿ ನಡೆದಿತ್ತು. ಭೋಜಶಾಲಾ ಆ ಸಮಯದ ಶಿಕ್ಷಣದ ದೊಡ್ಡ ಕೇಂದ್ರವಾಗಿತ್ತು ಎಂದು ಹೇಳಿದರು.
೩. ಪ್ರಸ್ತುತ ಭೋಜಶಾಲಾದಲ್ಲಿ ಹಿಂದುಗಳಿಗೆ ಮಂಗಳವಾರ ಪೂಜೆ ಮಾಡುವುದು ಹಾಗೂ ಮುಸಲ್ಮಾನರಿಗೆ ಶುಕ್ರವಾರ ನಮಾಜ ಮಾಡಲು ಸರಕಾರದಿಂದ ಅನುಮತಿ ನೀಡಲಾಗಿದೆ.
धार भोजशाला को लेकर इंदौर हाईकोर्ट में याचिका स्वीकार, संबंधित पक्षों को नोटिस जारीhttps://t.co/ZDqt3a8ay1
— Zee MP-Chhattisgarh (@ZeeMPCG) May 11, 2022
ಲಂಡನ್‌ನಲ್ಲಿನ ವಾಗ್ದೇವಿ ಮೂರ್ತಿ ಮರಳಿ ಪಡೆಯಲು ಒತ್ತಾಯ
ಈ ಅರ್ಜಿಯಲ್ಲಿ ಲಂಡನ್‌ನಲ್ಲಿನ ಸಂಗ್ರಹಾಲಯದಲ್ಲಿರುವ ಭೋಜಶಾಲಾದ ಪ್ರಾಚೀನ ಶ್ರೀ ವಾಗ್ದೇವಿಯ (ಶ್ರೀ ಸರಸ್ವತೀ ದೇವಿಯ) ಮೂರ್ತಿ ಮರಳಿ ತರುವುದಕ್ಕಾಗಿ ಒತ್ತಾಯಿಸಲಾಗಿದೆ. ಈ ವಿಷಯವಾಗಿ ರಂಜನಾ ಅಗ್ನಿಹೋತ್ರಿ ಇವರು, ನಮ್ಮ ಅರ್ಜಿ ಸ್ವೀಕರಿಸಿ ನ್ಯಾಯಾಲಯವು ಸಂಬಂಧಿಕರಿಗೆ ನೋಟಿಸ್ ಜಾರಿ ಮಾಡಿದೆ ಎಂದು ಹೇಳಿದರು.
ಸಂಪಾದಕೀಯ ನಿಲುವುಮೊಘಲ್ ಆಕ್ರಮಣಕಾರರಿಂದ ಹಿಂದೂಗಳ ಯಾವ ಕೆಲವು ಪ್ರಾಚೀನ ವಾಸ್ತುಗಳನ್ನು ವಶಕ್ಕೆ ಪಡೆದು ಅದರ ಇಸ್ಲಾಮೀಕರಣ ಮಾಡಿದ್ದಾರೆ, ಅವುಗಳನ್ನು ಕೇಂದ್ರ ಸರಕಾರದಿಂದಲೇ ಒಂದು ಯೋಜನೆ ರೂಪಿಸಿ ಬೆಳಕಿಗೆ ತರಬೇಕು ಮತ್ತು ಆ ವಾಸ್ತುಗಳ ಮೂಲ ಸ್ವರೂಪ ಜಗತ್ತಿನ ಮುಂದೆ ತರಬೇಕು ! ಮೊಘಲರು, ಬ್ರಿಟಿಷರು ಮತ್ತು ಕಾಂಗ್ರೆಸ್ ಇವರು ನಿರ್ಮಿಸಿರುವ ಮತ್ತು ನಂತರ ಶಾಶ್ವತವಾಗಿ ಇರಿಸಿರುವ ಈ ಗುಲಾಮಿ ಇತಿಹಾಸ ಅಳಿಸುವ ಜವಾಬ್ದಾರಿ ಕೇಂದ್ರ ಸರಕಾರ ನಿಭಾಯಿಸಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ ! |