ಕರ್ನಾಟಕದಲ್ಲಿ ಮಸೀದಿಗಳ ಮೇಲಿನ ಭೋಂಗಾಗಳ ವಿರುದ್ಧ ಶ್ರೀರಾಮ ಸೇನೆಯಿಂದ ಹನುಮಾನ ಚಾಲಿಸಾ ಪಠಣ

೧ ಸಾವಿರ ದೇವಸ್ಥಾನಗಳ ಮೇಲಿನ ಭೋಂಗಾಗಳಿಂದ ಬೆಳಗ್ಗಿನ ಜಾವ ೫ ಗಂಟೆಗೆ ಹನುಮಾನ ಚಾಲಿಸಾ ಹಚ್ಚಲಾಯಿತು !

ಬೆಂಗಳೂರು (ಕರ್ನಾಟಕ) – ಕರ್ನಾಟಕದಲ್ಲಿನ ಮಸೀದಿಗಳ ಮೇಲಿನ ಭೋಂಗಾಗಳ ವಿರುದ್ಧ ಶ್ರೀರಾಮ ಸೇನೆಯು ಮೇ ೯ ರಿಂದ ಆಂದೋಲನವನ್ನು ಆರಂಭಿಸಿದೆ. ರಾಜ್ಯದಲ್ಲಿನ ಸುಮಾರು ೧ ಸಾವಿರ ದೇವಸ್ಥಾನಗಳಲ್ಲಿ ಬೆಳಗ್ಗಿನ ಜಾವ ೫ ಗಂಟೆಯಿಂದ ಭೋಂಗಾಗಳಿಂದ ಹನುಮಾನ ಚಾಲಿಸಾ ಹಚ್ಚಲಾಗಿತ್ತು. ರಾಜ್ಯದಲ್ಲಿನ ವಿಶೇಷವಾಗಿ ವಿಜಯಪುರ, ಮೈಸೂರು, ಬೆಳಗಾವಿ ಇತ್ಯಾದಿ ಜಿಲ್ಲೆಗಳಲ್ಲಿ ಈ ಆಂದೋಲನವನ್ನು ಆರಂಭಿಸಲಾಗಿದೆ. ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ. ಪ್ರಮೋದ ಮುತಾಲಿಕರವರು ರಾಜ್ಯದಲ್ಲಿನ ೧ ಸಾವಿರಕ್ಕಿಂತಲೂ ಹೆಚ್ಚಿನ ದೇವಸ್ಥಾನಗಳ ಭೋಂಗಾಗಳಿಂದ ಹನುಮಾನ ಚಾಲಿಸಾ ಹಚ್ಚುವುದಾಗಿ ಕರೆ ನೀಡಿದ್ದರು. ಅವರು ರಾಜ್ಯ ಸರಕಾರಕ್ಕೆ ಮೇ ೮ ರ ವರೆಗೆ ಮಸೀದಿಗಳ ಮೇಲಿನ ಭೋಂಗಾಗಳ ತೆರವಿಗೆ ಸಮಯ ಮಿತಿಯನ್ನು ಹಾಕಿತ್ತು; ಆದರೆ ಅದರಂತೆ ಸರಕಾರವು ಕೃತಿ ಮಾಡದಿರುವುದರಿಂದ ಅವರು ಆಂದೋಲನವನ್ನು ಆರಂಭಿಸಿದ್ದಾರೆ. ಭೋಂಗಾಗಳಿಂದ ರಾಜ್ಯದಲ್ಲಿ ಒತ್ತಡ ನಿರ್ಮಾಣವಾಗುವ ಸಾಧ್ಯತೆಯನ್ನು ಗಮನದಲ್ಲಿಟ್ಟು ಭೋಂಗಾಗಳನ್ನು ಹಚ್ಚಲಾದ ೧ ಸಾವಿರ ದೇವಸ್ಥಾನಗಳ ಹೊರಗೆ ಹೆಚ್ಚುವರಿ ಪೊಲೀಸ ದಳವನ್ನು ನೇಮಿಸಲಾಗಿದೆ. ಅದರೊಂದಿಗೆ ರಾಜ್ಯದಲ್ಲಿ ಪೊಲೀಸರಿಗೆ ಸತರ್ಕತೆಯಿಂದಿರಲು ಆದೇಶಿಸಲಾಗಿದೆ. ಎಲ್ಲ ಪೊಲೀಸ ಠಾಣೆಗಳಿಗೂ ಹೀಗೆಯೇ ಸೂಚನೆ ನೀಡಲಾಗಿದೆ.

ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರವರಂತಹ ಧೈರ್ಯ ತೋರಿಸಿ ! – ಪ್ರಮೋದ ಮುತಾಲಿಕ

ಶ್ರೀ. ಪ್ರಮೋದ ಮುತಾಲಿಕರವರು ಪ್ರಸಾರ ಮಾಧ್ಯಮಗಳೊಂದಿಗೆ ಮಾತನಾಡುವಾಗ, ‘ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಗೃಹಮಂತ್ರಿ ಅರಗಾ ಜ್ಞಾನೇಂದ್ರರವರು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಂತಹ ಧೈರ್ಯವನ್ನು ತೋರಿಸಬೇಕು. ಅವರು ರಾಜ್ಯದಲ್ಲಿನ ಧಾರ್ಮಿಕ ಸ್ಥಳಗಳಿಂದ ಕಾನೂನು ಬಾಹಿರವಾಗಿ ಹಚ್ಚಲಾದ ಭೋಂಗಾಗಳನ್ನು ತೆಗೆಯುವಂತೆ ಮಾಡಿದ್ದರು. ಹಾಗೆಯೇ ಅನುಮತಿಯ ಅನುಸಾರ ಶಬ್ದದ ಮಿತಿಯನ್ನು ಕಾಯ್ದುಕೊಳ್ಳಲು ಹೇಳಿದ್ದಾರೆ. ನ್ಯಾಯಾಲಯದ ಆದೇಶವಿದ್ದರೂ ಕಾರ್ಯಾಚರಣೆ ಆಗದಿರುವುದರಿಂದ ಜನತೆಗೆ ಸರಕಾರದ ವಿರುದ್ಧ ರೋಷವಿದೆ. ನಮ್ಮ ಆಂದೋಲನದ ವಿರುದ್ಧ ಪೊಲೀಸ ಬಲವನ್ನು ಬಳಸುವುದಾಗಿ ಸರಕಾರವು ಎಚ್ಚರಿಕೆಯನ್ನು ನೀಡಿದೆ. ಈ ಎಚ್ಚರಿಕೆಯಿಂದ ನಮ್ಮ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ. ಸರಕಾರವು ಇಂತಹ ದಾದಾಗಿರಿಯನ್ನು ನಮ್ಮ ಮೇಲೆ ಅಲ್ಲ, ಮಸೀದಿಗಳ ಮೇಲೆ ಕಾನೂನು ಬಾಹಿರವಾಗಿ ಭೋಂಗಾಗಳನ್ನು ಹಚ್ಚಿದವರ ವಿರುದ್ಧ ತೋರಿಸಬೇಕು. ಸರಕಾರವು ‘ತಾವು ಹಿಂದೂಗಳ ಮತದಿಂದ ಅಧಿಕಾರಕ್ಕೆ ಬಂದಿದ್ದೇವೆ’ ಎಂಬುದನ್ನು ಗಮನದಲ್ಲಿಡಬೇಕು. ನಾವು ನಮಾಜ ಹಾಗೂ ಆಜಾನನ್ನು ವಿರೋಧಿಸುವುದಿಲ್ಲ’ ಎಂದು ಹೇಳಿದರು.

ಕರ್ನಾಟಕದ ೬೦೦ ಮಸೀದಿಗಳಿಗೆ ಭೋಂಗಾಗಳ ವಿಷಯದಲ್ಲಿ ನೊಟೀಸು

ಕರ್ನಾಟಕ ಸರಕಾರವು ಭೋಂಗಾಗಳ ಬಗ್ಗೆ ರಾಜ್ಯದಲ್ಲಿನ ಮಸೀದಿಗಳಿಗೆ ನೊಟೀಸು ಕಳಿಸಿದೆ. ಮಸೀದಿಗಳ ಮೇಲಿನ ಭೋಂಗಾಗಳ ಶಬ್ದದಿಂದಾಗಿ ಈ ನೊಟೀಸನ್ನು ಕಳುಹಿಸಲಾಗಿದೆ. ಸರಕಾರವು ‘ಶ್ರೀರಾಮ ಸೇನೆ ಮಾಗೂ ಬಜರಂಗದಳಗಳ ಅಭಿಯಾನಗಳ ಮೊದಲೇ ಮಸೀದಿಗಳ ಭೋಂಗಾಗಳ ಶಬ್ದವನ್ನು ನಿರ್ಧರಿಸುವ ಪ್ರಕ್ರಿಯೆಯು ನಡೆಯುತ್ತಿದೆ’ ಎಂದು ಹೇಳಿದೆ.