ರಷ್ಯಾದ ಸೇನೆಯು ಕಪ್ಪು ಸಮುದ್ರದಲ್ಲಿ ಡಾಲ್ಫಿನಗಳ ಬೆಟಾಲಿಯನನ್ನು ನಿಯೋಜಿಸಿದೆ

ಮಾಸ್ಕೋ (ರಷ್ಯಾ) – ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧಕ್ಕೆ ಎರಡು ತಿಂಗಳುಗಳು ಕಳೆದಿವೆ. ಕೆಲವು ದಿನಗಳ ಹಿಂದೆ ಕಪ್ಪು ಸಮುದ್ರದಲ್ಲಿ ರಷ್ಯಾದ ಯುದ್ಧನೌಕೆ `ಮಾಸ್ಕವಾ’ ಮುಳುಗಿದ ನಂತರ ರಷ್ಯಾದ ಸೇನಾ ಪಡೆಯು ಕ್ರಿಮಿಯಾದಲ್ಲಿ ಕಪ್ಪು ಸಮುದ್ರದ ಕರಾವಳಿಯಲ್ಲಿ ಡಾಲ್ಫಿನಗಳ ಎರಡು ಬಟಾಲಿಯನಗಳನ್ನು ನಿಯೋಜಿಸಿದೆ. ಈ ಡಾಲ್ಫಿನಗಳು ಸಾಗರದಲ್ಲಿ ಯಾವುದೇ ಕ್ಷಿಪಣಿಯನ್ನು ಟ್ರ್ಯಾಕ ಮಾಡಬಲ್ಲವು. ರಷ್ಯಾ 2014ರಲ್ಲಿ ಸ್ವಾಸ್ತೊಪೋಲ ಯೋಜನೆಯನ್ನು ಪ್ರಾರಂಭಿಸಿತು. ಡಾಲ್ಫಿನಗಳ ಜೊತೆಗೆ ಬ್ಲೂಗಾ ತಿಮಿಂಗಳಗಳಿಗೂ ತರಬೇತಿ ನೀಡಲಾಗಿದೆ. 2019ರಲ್ಲಿ ನಾರ್ವೆ ಕರಾವಳಿಯ ಬ್ಲೂಗಾ ತಿಮಿಂಗಲಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು.