(ಇಸ್ಲಾಂನ ಪವಿತ್ರ ಸಂಖ್ಯೆ. ಈ ಸಂಖ್ಯೆಯನ್ನು ಸ್ಮರಿಸಿದರೆ ಕಾರ್ಯದಲ್ಲಿ ಯಶಸ್ವಿಯಾಗುತ್ತದೆ, ಎಂಬುದು ಮುಸಲ್ಮಾನರ ಶ್ರದ್ಧೆಯಾಗಿದೆ)
ಕೊಟಾ (ರಾಜಸ್ಥಾನ) – ಕೊಟಾ ಜಿಲ್ಲೆಯ ಅಯಾನಾ ಎಂಬ ಗ್ರಾಮದಲ್ಲಿರುವ ರಾಧೇಶ್ಯಾಮ ವೈಷ್ಣವ ದೇವಾಲಯದಲ್ಲಿನ ಶ್ರೀ ಹನುಮಂತನ ಮೂರ್ತಿಯ ಮೇಲೆ ಉರ್ದೂ ಭಾಷೆಯಲ್ಲಿ ಬರೆದಿರುವ ಒಂದು ಪತ್ರಕವನ್ನು ಅಂಟಿಸಲಾಗಿದೆ. ಅದರಲ್ಲಿ ‘೭೮೬’ ಎಂದು ಬರೆಯಲಾಗಿದೆ. ಈ ಸಂಖ್ಯೆಯನ್ನು ಮುಸಲ್ಮಾನರು ಪವಿತ್ರವೆಂದು ತಿಳಿಯುತ್ತಾರೆ. ಈ ಘಟನೆಯ ಬಗ್ಗೆ ಸ್ಥಳೀಯ ಭಕ್ತರು ಆಕ್ರೋಶ ವ್ಯಕ್ತ ಪಡಿಸಿ ಪೊಲೀಸರಲ್ಲಿ ದೂರು ನೀಡಿದ್ದಾರೆ. ಪೊಲೀಸರು ಅಪರಿಚಿತರ ವಿರುದ್ಧ ಅಪರಾಧ ನೋಂದಿಸಿಕೊಂಡಿದ್ದು ವಿಚಾರಣೆಯನ್ನು ಪ್ರಾರಂಭಿಸಿದ್ದಾರೆ. ‘ಸಂಬಂಧಪಟ್ಟ ಪ್ರಕರಣದಲ್ಲಿ ೨೪ ಗಂಟೆಯೊಳಗೆ ಆರೋಪಿಗಳನ್ನು ಬಂಧಿಸದೇ ಇದ್ದರೆ, ಆಂದೋಲನ ಮಾಡಲಾಗುವುದು’, ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ. ಆದ್ದರಿಂದ ಅಲ್ಲಿ ಹೆಚ್ಚುವರಿ ಪೊಲೀಸ್ ಬಂದೋಬಸ್ತನ್ನು ಮಾಡಲಾಗಿದೆ.
ಸಂಪಾದಕೀಯ ನಿಲುವುರಾಜಸ್ಥಾನದಲ್ಲಿ ಕಾಂಗ್ರೆಸ್‌ನ ಸರಕಾರವಿರುವುದರಿಂದ ಕಳೆದ ಕೆಲವು ದಿನಗಳಿಂದ ಹಿಂದೂಗಳ ಮೇಲೆ ಹಾಗೂ ಅವರ ಧಾರ್ಮಿಕ ಸ್ಥಳಗಳು ಮತ್ತು ಧಾರ್ಮಿಕ ಮೆರವಣಿಗೆಯ ಮೇಲೆ ಆಘಾತವಾಗುತ್ತಿದೆ. ಅದರ ವಿರುದ್ಧ ಹಿಂದೂಗಳು ಒಗ್ಗಟ್ಟಾಗಿ ಧ್ವನಿಯೆತ್ತಿ ಕಾಂಗ್ರೆಸ ಸರಕಾರವು ಸಂಬಂಧಪಟ್ಟವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಮಾಡಬೇಕು ! ಮೇಲೆ ತೋರಿಸಿರುವ ಚಿತ್ರ ಯಾರ ಭಾವನೆಗಳಿಗೆ ನೋವನ್ನು ಉಂಟುಮಾಡುವುದಾಗಿರದೆ ನಿಜ ಸ್ಥಿತಿ ತಿಳಿಸುವ ಉದ್ದೇಶವಾಗಿದೆ. |