ಮುಂಬರುವ ೨೭ ವರ್ಷಗಳಲ್ಲಿ ಪೃಥ್ವಿಯ ಅನ್ನಧಾನ್ಯ ನಾಶವಾಗುವುದು ! – ಶಾಸ್ತ್ರಜ್ಞರ ಎಚ್ಚರಿಕೆ

ಮುಂಬಯಿ – ಮುಂಬರುವ ೨೭ ವರ್ಷಗಳಲ್ಲಿ ಜಗತ್ತಿನ ಎಲ್ಲಾ ಅನ್ನಧಾನ್ಯ ಮುಗಿಯುವುದು ಎಂಬ ಎಚ್ಚರಿಕೆಯನ್ನು ಶಾಸ್ತ್ರಜ್ಞರು ನೀಡಿದ್ದಾರೆ.

೧. ಏಪ್ರಿಲ್ ೨೪, ೨೦೨೨ ರಿಂದ ವಿಜ್ಞಾನಿಗಳು ಜೀವ ಸೃಷ್ಟಿಯ ಮೃತ್ಯುವಿನ ದಿನದ ಎಣಿಕೆ ಶುರುಮಾಡಿದ್ದಾರೆ. ಪೃಥ್ವಿಯಲ್ಲಿ ವಾಸಿಸುವವರಿಗೆ ಈಗ ಕೇವಲ ೨೭ ವರ್ಷ ಮತ್ತು ೨೫೧ ದಿನ ಬಾಕಿ ಉಳಿದಿವೆ, ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ.

೨. ಶಾಸ್ತ್ರಜ್ಞ ಎಡ್ವರ್ಡ್ ವಿಲ್ಸನ್ ಇವರ ಪ್ರಕಾರ, ಮಾನವನ ಅನ್ನದ ಬೇಡಿಕೆ ಪೂರ್ಣಗೊಳಿಸಬೇಕಾದರೆ, ನಮಗೆ ಇನ್ನೂ ಎರಡು ಪೃಥ್ವಿಗಳ ಆವಶ್ಯಕತೆ ಅನಿಸುವುದು. ಪೃಥ್ವಿಯ ಮೇಲೆ ಧಾನ್ಯ ಬೆಳೆಯಲು ಒಂದು ಮಿತಿಯಿದೆ. ಜಗತ್ತಿನ ಪ್ರತಿಯೊಬ್ಬ ಮನುಷ್ಯ ಶಾಖಾಹಾರಿ ಆದರೂ, ಹಾಗೂ ಮನುಷ್ಯನ ಆವಶ್ಯಕತೆ ಪೂರೈಸುವುದಕ್ಕಾಗಿ ಜಗತ್ತಿನ ರೈತರು ಮತ್ತು ಅವರ ಭೂಮಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಧಾನ್ಯ ಬೆಳೆಯಲು ಸಾಧ್ಯವಿಲ್ಲ. ಮುಂಬರುವ ಕಾಲದಲ್ಲಿ ಜಗತ್ತಿನ ಜನಸಂಖ್ಯೆ ಪ್ರಚಂಡವಾಗಿ ಹೆಚ್ಚುವುದು. ಆದ್ದರಿಂದ ಪ್ರತಿಯೊಬ್ಬ ಮನುಷ್ಯನ ಆಹಾರದ ಬೇಡಿಕೆ ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ. ಮುಂಬರುವ ೨೭ ವರ್ಷಗಳಲ್ಲಿ ಜಗತ್ತಿನ ಜನಸಂಖ್ಯೆ ೧೦ ಬಿಲಿಯನ್ ಅಂದರೆ ೧ ಸಾವಿರ ಕೋಟಿ ಮುಟ್ಟುವುದು. ಅನ್ನಧಾನ್ಯದ ಬೇಡಿಕೆಯ ವಿಷಯವಾಗಿ ಹೇಳಬೇಕೆಂದರೆ ಈ ಸಂಖ್ಯೆ ೨೦೧೭ ಇಸ್ವಿಯ ತುಲನೆಯಲ್ಲಿ ಶೇಕಡ ೭೦ ರಷ್ಟು ಹೆಚ್ಚುವ ಸಾಧ್ಯತೆ ಇದೆ.

೩. ತಜ್ಞರು ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಅನ್ನ ಧಾನ್ಯದ ಉತ್ಪಾದನೆಯ ಅಂಕಿಸಂಖ್ಯೆಗಳ ಪ್ರಕಾರ ಮೇಲಿನ ನಿಷ್ಕರ್ಷ ತೆಗೆದಿದ್ದಾರೆ. ಅದರ ಪ್ರಕಾರ ಕಳೆದ ೮ ಸಾವಿರ ವರ್ಷದಲ್ಲಿ ಮನುಷ್ಯನ ಎಂದೂ ಮಾಡಿರದ ಅಷ್ಟು ಧಾನ್ಯದ ಉತ್ಪಾದನೆ ಮುಂಬರುವ ೪೦ ವರ್ಷದಲ್ಲಿ ಮನುಷ್ಯನಿಗೆ ಮಾಡಬೇಕಾಗುತ್ತದೆ. ಪೃಥ್ವಿ ೧ ಸಾವಿರ ಕೋಟಿ ಜನರಿಗೆ ಅನ್ನ ನೀಡಬಹುದು. ಆದರೆ ಅದರ ನಂತರ ಪೃಥ್ವಿಯ ಮೇಲಿನ ಭಾರ ಹೆಚ್ಚಲು ಪ್ರಾರಂಭವಾಗುವುದು. ಮನುಷ್ಯರು ಆವಶ್ಯಕತೆಗಿಂತಲೂ ಹೆಚ್ಚಿನ ಅನ್ನ ಗ್ರಹಿಸುತ್ತಿದ್ದಾರೆ ಮತ್ತು ನಂತರ ಅನ್ನವನ್ನು ಹಾಳು ಮಾಡುತ್ತಿದ್ದಾರೆ. ಆದ್ದರಿಂದ ಧಾನ್ಯ ನಿರ್ಮಿತಿ ಮಾಡುವುದಕ್ಕಾಗಿ ಪೃಥ್ವಿಯ ಮೇಲೆ ಒತ್ತಡ ಹೆಚ್ಚುತ್ತಾ ಹೋಗುತ್ತದೆ. ಪೃಥ್ವಿಯ ಮೇಲಿನ ಎಲ್ಲಾ ಜನರು ಶಾಕಾಹಾರಿ ಆದರೆ ಆಗ ಹೆಚ್ಚಿನ ಜನಸಂಖ್ಯೆಯಲ್ಲಿ ಅನ್ನ ಪೂರೈಸಲು ಸಾಧ್ಯವಾಗುತ್ತದೆ. ಉದಾಹರಣೆ, ಮುಸುಕಿನ ಜೋಳದ ತುಲನೆಯಲ್ಲಿ ಮಾಂಸ ಉತ್ಪಾದನೆ ಮಾಡಲು ೭೫ ಎಂತಲೂ ಹೆಚ್ಚು ಪಟ್ಟು ಊರ್ಜೆಯ ಉಪಯೋಗ ಮಾಡಲಾಗುತ್ತದೆ. ೨೦೫೦ ನೇ ಇಸವಿಯವರೆಗೆ ಜಗತ್ತಿನ ಎಲ್ಲಾ ದೇಶಗಳಲ್ಲಿ ಅನ್ನಧಾನ್ಯದ ಕೊರತೆ ಕಾಣುವುದು.