
ಬೆಂಗಳೂರು – ಏಪ್ರಿಲ್ ೧೩ ರಂದು ಇಲ್ಲಿನ ಬಸವೇಶ್ವರ ನಗರದಲ್ಲಿ ನಡೆದ ಹಿಂದೂ ರಾಷ್ಟ್ರ-ಜಾಗೃತಿ ಸಭೆಯಲ್ಲಿ ಮಾತನಾಡಿದ ಶ್ರೀ. ವಾಮನ ಆಚಾರ್ಯ ಇವರು ‘ಹಿಂದೂಗಳಲ್ಲಿ ಹಿಂದುತ್ವವನ್ನು ಜಾಗೃತಗೊಳಿಸಬೇಕು’, ಎಂದರು. ಈ ವೇಳೆ ಹಿಂದೂ ಜನಜಾಗೃತಿ ಸಮಿತಿಯ ಸೌ. ಭವ್ಯಾ ಗೌಡ ಉಪಸ್ಥಿತರಿಗೆ ಮಾರ್ಗದರ್ಶನ ಮಾಡಿದರು.
ತುಮಕೂರು – ಇಲ್ಲಿನ ಕುದೂರಿನ ಶ್ರೀ ರಾಮ ಮಂದಿರದಲ್ಲಿ ಏಪ್ರಿಲ್ ೧೫ ನೆರವೇರಿದ ಹಿಂದೂ ರಾಷ್ಟ್ರಜಾಗೃತಿ ಸಭೆಯಲ್ಲಿ ವರದಿಗಾರರು ಮತ್ತು ಉಪನ್ಯಾಸಕರಾದ ಗಂ.ದಯಾನಂದರವರು ಮಾತನಾಡುತ್ತಾ, ‘ಹಿಂದೂ ಸಂಘಟನೆಗಳು ಒಂದಾಗಬೇಕು’ ಎಂದು ಕರೆ ನೀಡಿದರು. ಹಿಂದೂ ಜನಜಾಗೃತಿ ಸಮಿತಿಯ ಸೌ. ಸುಮಾ ಮಂಜೇಶ ಇವರೂ ಮಾರ್ಗದರ್ಶನ ಮಾಡಿದರು.
ಉತ್ತರ ಕನ್ನಡ – ಇತ್ತೀಚೆಗೆ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಲಂಬಾಪುರದಲ್ಲಿ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ನಡೆದ ಹಿಂದೂ ರಾಷ್ಟ್ರಜಾಗೃತಿ ಸಭೆಯಲ್ಲಿ ದೇವಸ್ಥಾನದ ಅಧ್ಯಕ್ಷರಾದ ಶ್ರೀ. ಸುಬ್ರಾಯ ಹೆಗಡೆಯವರು ಧರ್ಮಪಾಲನೆಯ ಮಹತ್ವವನ್ನು ತಿಳಿಸಿದರು. ಈ ವೇಳೆ ಧರ್ಮಪ್ರೇಮಿ ಶ್ರೀ. ಶ್ರೀಧರ ಹೆಗಡೆ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ಸೌ. ರೇವತಿ ಹರಗಿಯವರೂ ಮಾತನಾಡಿದರು.
ಅದೇ ರೀತಿ ಜಿಲ್ಲೆಯ ಕಡವಾಡದ ಏಪ್ರಿಲ್ ೧೭ ರಂದು ಶ್ರೀ ಮಹಾದೇವ ದೇವಸ್ಥಾನದಲ್ಲಿ ಹಿಂದೂ ರಾಷ್ಟ್ರಜಾಗೃತಿ ಸಭೆಯು ನೆರವೇರಿತು. ಈ ವೇಳೆ ಭಾಜಪದ ಮುಖಂಡರಾದ ಶ್ರೀ. ಸುಭಾವ ಗುನಗಿ ಇವರು ಹಾಗೂ ಸಮಿತಿಯ ಶ್ರೀ. ಶರತಕುಮಾರ ಇವರು ಮಾರ್ಗದರ್ಶನ ಮಾಡಿದರು.
ಮುಂಬಯಿ ಲೋಕಲ್ ನಲ್ಲಿನ ಮತಾಂತರ ಮತ್ತು ಢೋಂಗಿತನದ ಹಿಂದೆ ಅಡಗಿರುವ ಗಂಡಾಂತರವನ್ನು ನಿಯಂತ್ರಿಸಲು ವಿಶೇಷ ನಿಯಮಾವಳಿ ಸಿದ್ಧಪಡಿಸಲಾಗುವುದು !
ಜೂನ್ ೧೯ ರಂದು ‘ರಾಷ್ಟ್ರೀಯ ಘರ್ ವಾಪ್ಸಿ ದಿನ’ ಎಂದು ಆಚರಿಸಿ!
ಗೋಮಾಂಸ ಭಕ್ಷಣೆಯನ್ನು ಪ್ರಚಾರ ಮಾಡುವ ಸಂಸ್ಥೆ ಮತ್ತು ಅದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಿ!
ಭಾರತದ ಮಹಾನ್ ಗಣಿತಜ್ಞ ‘ಆರ್ಯಭಟ’ ಅವರ ವಿಡಂಬನೆ; ಹಿಂದೂ ಜನಜಾಗೃತಿ ಸಮಿತಿಯಿಂದ ‘ಅಮೆಜಾನ್ ಇಂಡಿಯಾ’ಗೆ ಕಾನೂನು ನೋಟಿಸ್ !
ವಿವಾದಾತ್ಮಕ ‘ಈಠ್ಠಲಾ’ ನಾಟಕದಲ್ಲಿರುವ ಸಂತರ ಹೆಸರುಗಳು ಮತ್ತು ಆಕ್ಷೇಪಾರ್ಹ ಭಾಗಗಳನ್ನು ಕೈಬಿಡಿ!
‘ಹಲಾಲ್ ತೆರಿಗೆ’ ಎನ್ನುವುದು ಹಿಂದೂಗಳ ಜೇಬಿನಿಂದ ವಸೂಲಿ ಮಾಡಲಾಗುತ್ತಿರುವ ‘ಜಿಜಿಯಾ ತೆರಿಗೆಯೇ’ ಆಗಿದೆ! – ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ