ಖಂಬಾತ (ಗುಜರಾತ) ಇಲ್ಲಿ ಶ್ರೀರಾಮನವಮಿಯ ಮೆರವಣಿಗೆಯ ಮೇಲೆ ದಾಳಿ ನಡೆಸುವ ಸಂಚು ವಿದೇಶದಲ್ಲಿ ನಡೆಸಲಾಗಿರುವುದಾಗಿ ಬಹಿರಂಗ !

  • ಹಿಂದೂಗಳಿಗೆ ಪಾಠ ಕಲಿಸಲು ದಾಳಿ ನಡೆಸಲಾಯಿತು !

  • ಹೊರಗಿನಿಂದ ಖಂಬಾತಗೆ ಬಂದಿದ್ದ ಮತಾಂಧರು !

  • ಬಂಧನವಾದರೆ ಕಾನೂನು ಬದ್ಧ ಸಹಾಯ ಮಾಡುವುದಾಗಿ ಆಶ್ವಾಸನೆ !

ಮತಾಂಧರು ಇಷ್ಟು ತಯಾರಿ ನಡೆಸುತ್ತಿರುವಾಗ ಪೊಲೀಸರು ಹಾಗೂ ಗುಪ್ತಚರ ವ್ಯವಸ್ಥೆಗಳಿಗೆ ಈ ಮಾಹಿತಿ ಮೊದಲೇ ಏಕೆ ಸಿಗಲಿಲ್ಲ ? ಗುಜರಾತ್‌ನಲ್ಲಿ ಭಾಜಪದ ಸರಕಾರವಿರುವಾಗ ಇಂತಹ ಅಜಾಗುರಕತೆ ನಡೆಯಬಾರದು, ಎಂದು ಹಿಂದೂಗಳಿಗೆ ಅನಿಸುತ್ತದೆ !

ಈ ವಿಷಯದಲ್ಲಿ ಪ್ರಗತಿ(ಅಧೋ)ಪರರು, ಕಾಂಗ್ರೆಸ್ಸಿಗರು, ಎಡಪಂಥುಯವರು, ಹಿಂದುದ್ವೇಷೀ ಪ್ರಸಾರ ಮಾಧ್ಯಮಗಳು ಮೌನವೇಕೆ ?

ಕರ್ಣಾವತಿ (ಗುಜರಾತ) – ಶ್ರೀರಾಮನವಮಿಯ ದಿನದಂದು ನಡೆದ ಮೆರವಣಿಗೆಯ ಮೇಲೆ ರಾಜ್ಯದಲ್ಲಿನ ಆನಂದ ಜಿಲ್ಲೆಯ ಖಂಬಾತನಲ್ಲಿ ಮುಸಲ್ಮಾನಬಹುಸಂಖ್ಯಾತ ಪ್ರದೇಶದಲ್ಲಿ ದಾಳಿ ನಡೆಸಲಾಗಿತ್ತು. ಈ ಕುರಿತು ನಡೆಯಲಾದ ತನಿಖೆಯಲ್ಲಿ ಈ ಹಿಂಸಾಚಾರದ ಒಳ ಸಂಚು ವಿದೇಶದಲ್ಲಿ ರಚಿಸಲಾಗಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಸಾಕ್ಷಗಳೂ ಪೊಲೀಸರಿಗೆ ಸಿಕ್ಕಿದೆ. ಈ ಹಿಂಸಾಚಾರದಲ್ಲಿ ಒಬ್ಬ ಹಿಂದು ಮೃತ ಪಟ್ಟಿದ್ದಾನೆ. ಈ ಪ್ರಕರಣದಲ್ಲಿ ಇಲ್ಲಿಯವರೆಗೆ ೯ ಜನರನ್ನು ಬಂಧಿಸಲಾಗಿದೆ.

ಆನಂದ ಜಿಲ್ಲೆಯ ಪೊಲೀಸ್ ಮೇಲ್ವಿಚಾರಕರಾದ ಅಜಿತ ರಾಜಿಯಾರವರು,

೧. ಹಿಂಸಾಚಾರ ನಡೆಯುವ ಮುನ್ನ ಖಂಬಾತಗೆ ಹೊರಗಿನಿಂದ ಮನುಷ್ಯರನ್ನು ಕರೆಸಲಾಗಿತ್ತು. ಶ್ರೀರಾಮನವಮಿಯ ನಿಮಿತ್ತ ನಡೆಯುವ ಮೆರವಣಿಗೆಯ ಮೊದಲ ದಿನ ಹಿಂಸಾಚಾರ ನಡೆಸಲು ಎಲ್ಲಾ ರೀತಿಯ ತಯಾರಿ ನಡೆಸಲಯಿತು. ಕಲ್ಲು ಹಾಗೂ ಹರಿತವಾದ ವಸ್ತುಗಳನ್ನು ದಾಳಿ ನಡೆಸುವವರಿಗೆ ಪೂರೈಕೆ ಮಾಡಲಾಗಿತ್ತು.

೨. ಪ್ರತ್ಯಕ್ಷ ಹಿಂಸಾಚಾರ ಪ್ರಾರಂಭವಾದ ಬಳಿಕ ಗಲಭೆಕೋರರು ಕಲ್ಲುತೂರಾಟ ಹಾಗೂ ಸುಡಲು ಬೇರೆಯವರಿಗೂ ಪ್ರಚೋಧಿಸಲಾಯಿತು.

೩. ಈ ದಾಳಿಗಾಗಿ ದೊಡ್ಡ ಪ್ರಮಾಣದಲ್ಲಿ ಹಣ ಪೂರೈಸಲಾಗಿತ್ತು. ವಿದೇಶದಲ್ಲಿ ಈ ಸಂಚನ್ನು ರೂಪಿಸಲಾಗಿತ್ತು.

೪. ಮೌಲ್ವಿ ಮುಸ್ತಕೀಮ ಹಾಗೂ ಅವರ ಇಬ್ಬರು ಸಹಚರರಾದ ಮತಿನ ಹಾಗೂ ಮೊಹಸೀನ ಹಾಗೂ ರಝಾಕ ಅಯೂಬ, ಹುಸೇನ ಹಶಮಶಾ ದೀವಾಣ ಇವರೂ ಕೂಡ ಈ ಸಂಚಿನಲ್ಲಿ ಭಾಗವಹಿಸಿದ್ದರು, ಎಂಬ ಸಾಕ್ಷವು ಪೊಲೀಸರ ಕೈ ಸೇರಿದೆ.

೫. ‘ಮೆರವಣಿಗೆಯು ಮಸೀದಿಯ ಬಳಿಯಿಂದ ಹೋಗುತ್ತಿರುವಾಗ ಕಲ್ಲುತೂರಾಟ ಮಾಡಿ ಸುಟ್ಟು ಹಾಕಿ’, ಎಂದು ಆರೋಪಿಗಳಿಗೆ ಸೂಚನೆ ನೀಡಲಾಯಿತು. ಅದರಂತೆ ಅವರು ಈ ಕೃತ್ಯವನ್ನು ಮಾಡಿರುವುದಾಗಿ ತನಿಖೆಯ ಮೂಲಕ ಬಹಿರಂಗವಾಗಿದೆ.

೬. ‘ಹಿಂಸಾಚರದ ಆರೋಪದಡಿಯಲ್ಲಿ ಸಿಲುಕಿಕೊಂಡರೆ, ಅವರು ನಿಮ್ಮ ಬೆಂಬಲವಾಗಿ ನಿಲ್ಲುವೆವು. ನಿಮಗೆ ಕಾನೂನಿನ ನೆರವು ನೀಡಲಾಗುವುದು’, ದಾಳಿ ನಡೆಸುವವರಿಗೆ ಆಶ್ವಾಸನೆ ನೀಡಲಾಗಿತ್ತು.

೭. ಆರೋಪಿಗಳ ಸಂಚಾರವಾಣಿಯನ್ನು ಪರಿಶೀಲಿಸಿದಾಗ ಆ ದಾಳಿಗಳನ್ನು ಸುಯೋಜಿತವಾಗಿ ಇರುವುದಾಗಿ ಸ್ಪಷ್ಟವಾಗಿದೆ. ಹಿಂದು ಸಮಾಜಕ್ಕೆ ಪಾಠ ಕಲಿಸುವ ಉದ್ದೇಶದಿಂದ ಈ ದಾಳಿಯ ಸಂಚನ್ನು ರೂಪಿಸಲಾಗಿತ್ತು. ಎಂದು ಹೇಳಿದರು.