ಆನ್‌ಲೈನ್ ವಿಶೇಷ ಸಂವಾದ : ‘ಕರ್ನಾಟಕದಲ್ಲಿ ‘ಹಲಾಲ್’ಗೆ ವಿರೋಧ ಹೇಗೆ ಯಶಸ್ವಿಯಾಯಿತು ?’
ಯಾವ ರೀತಿ ಮುಸಲ್ಮಾನರಿಗೆ ‘ಹಲಾಲ್’ ಆಹಾರವನ್ನು ತಿನ್ನುವ ಹಕ್ಕಿದೆಯೋ ಹಾಗೆಯೇ ‘ಹಲಾಲ್’ ಆಹಾರವನ್ನು ತಿನ್ನಲು ನಿರಾಕರಿಸುವ ಹಕ್ಕು ನಮಗೂ ಇದೆ, ಎಂಬುದನ್ನು ಗಮನದಲ್ಲಿಡಬೇಕು. ‘ಹಲಾಲ್’ ದೇಶದ ವಿರುದ್ಧ ನಿಯೋಜಿತ ಪಿತೂರಿಯಾಗಿದೆ. ‘ಹಲಾಲ್’ ಅನಧಿಕೃತವಾಗಿದ್ದು, ಅದರ ವಿರುದ್ಧ ಅಲ್ಲಲ್ಲಿ ದೂರುಗಳು ದಾಖಲಾಗುತ್ತಿವೆ. ‘ಹಲಾಲ್’ನ್ನು ದೊಡ್ಡ ಮಟ್ಟದಲ್ಲಿ ವಿರೋಧಿಸುವ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ, ಎಂದು ‘ಭಾರತ ಪುನರುತ್ಥಾನ ಟ್ರಸ್ಟ್’ನ ಸಂಸ್ಥಾಪಕ ಮತ್ತು ಅಧ್ಯಕ್ಷರಾದ ಶ್ರೀ. ಗಿರೀಶ ಭಾರದ್ವಾಜ ಪ್ರತಿಪಾದಿಸಿದರು. ಅವರು ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ ‘ಕರ್ನಾಟಕದಲ್ಲಿ ‘ಹಲಾಲ್’ಗೆ ವಿರೋಧ ಹೇಗೆ ಯಶಸ್ವಿಯಾಯಿತು ?’ ಈ ವಿಶೇಷ ‘ಆನ್‌ಲೈನ್’ ಸಂವಾದದಲ್ಲಿ ಮಾತನಾಡುತ್ತಿದ್ದರು.
ಕರ್ನಾಟಕದ ಉದ್ಯಮಿ ಶ್ರೀ. ಪ್ರಶಾಂತ ಸಂಬರಗಿಯವರು ಮಾತನಾಡುತ್ತಾ, ‘ಹಲಾಲ್’ ಈಗ ಎಲ್ಲ ಜೀವನಾವಶ್ಯಕ ವಸ್ತುಗಳಲ್ಲಿ ನುಸುಳಿದೆ. ‘ಹಲಾಲ್’ ಎಂದರೆ ಹಿಂದೂಗಳು ಮುಸಲ್ಮಾನರಿಗೆ ತೆರಿಗೆ ನೀಡಿದಂತಿದ್ದು ಅದು ಕೇಂದ್ರ, ರಾಜ್ಯ ಸರಕಾರ ಮತ್ತು ಸರಕಾರದ ‘ಆಹಾರ ಭದ್ರತೆ ಮತ್ತು ಗುಣಮಟ್ಟ ಪ್ರಾಧಿಕಾರ’ದಿಂದ ಅಂದರೆ (FSSAI) ಯಿಂದ ಯಾವುದೇ ಮಾನ್ಯತೆಯನ್ನು ಹೊಂದಿಲ್ಲ. ‘ಹಲಾಲ್’ನ ಮೂಲಕ ಸಮನಾಂತರ ಆರ್ಥಿಕತೆಯನ್ನು ನಿರ್ಮಿಸಲಾಗುತ್ತಿದೆ, ಎಂದರು.
ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯವಾದಿ ಶುಭಾ ನಾಯ್ಕ್ ಅವರು ಮಾತನಾಡುತ್ತಾ, ‘ಹಲಾಲ್’ ಪ್ರಮಾಣಪತ್ರವು ಸರಕಾರದಿಂದ ಅನುಮೋದನೆ ಪಡೆಯದ ಕಾರಣ ಅದು ಅನಧಿಕೃತವಾಗಿದೆ. ಕರ್ನಾಟಕದಲ್ಲಿ ‘ಹಲಾಲ್’ ವಿರೋಧಿಸಲು ಹಿಂದೂ ಬಾಂಧವರು ಮುಂದೆ ಬಂದರು ಮತ್ತು ಹಿಂದೂ ಸಂಘಟನೆಗಳು ಸಹ ‘ಹಲಾಲ್’ ಅನ್ನು ವಿರೋಧಿಸಿದರು. ಅದೇ ರೀತಿ ಅವರು ‘ಹಲಾಲ್’ ಮಾಂಸ ಮತ್ತು ಉತ್ಪನ್ನಗಳನ್ನು ಖರೀದಿಸದಿರಲು ನಿರ್ಧರಿಸಿದರು ಎಂದು ಹೇಳಿದರು.
ಹಿಂದೂ ಜನಜಾಗೃತಿ ಸಮಿತಿಯ ವಕ್ತಾರ ಶ್ರೀ. ಮೋಹನ ಗೌಡ ಇವರು ಮಾತನಾಡುತ್ತಾ, ಕರ್ನಾಟಕದಲ್ಲಿ ಮಾಂಸಾಹಾರ ಸೇವಿಸುವ ಹಿಂದೂ ಸಮುದಾಯವು ‘ಹಲಾಲ್’ಅನ್ನು ವಿರೋಧಿಸಿ ಕೇವಲ ‘ಝಟ್ಕಾ’ ಮಾಂಸವನ್ನೇ ಆಹಾರದಲ್ಲಿ ಬಳಸುತ್ತಿದ್ದಾರೆ. ಕರ್ನಾಟಕದಲ್ಲಿ ಹಿಂದೂಗಳು ಈ ವರ್ಷ ಹಿಂದೂ ಹೊಸ ವರ್ಷದ ಅಂದರೆ ಯುಗಾದಿಯ ಮರುದಿನದ ರೂಢಿಗನುಸಾರ ಹೊಸತಡಕುದಂದು ಸೇವಿಸುವ ಮಾಂಸಾಹಾರಿ ಆಹಾರವನ್ನು ‘ಝಟ್ಕಾ’ ಮಾಂಸದ ಮಾರಾಟಗಾರರಿಂದ ಖರೀದಿಸಿದರು ಮತ್ತು ‘ಹಲಾಲ್’ ಮಾಂಸದ ಮಾರಾಟಗಾರರನ್ನು ಬಹಿಷ್ಕರಿಸಿದರು. ಹಿಂದೂಗಳು ಒಟ್ಟಾದರೆ ಏನಾಗಬಹುದು, ಎಂಬುದು ‘ಹಲಾಲ್’ ಬಹಿಷ್ಕಾರ ಅಭಿಯಾನವು ತೋರಿಸಿದೆ, ಎಂದರು.