ಹಲಾಲ್ ಮಾಂಸ ಇಸ್ಲಾಮರೆತರಿಗಾಗಿ ಅಲ್ಲ !

ಜನಪ್ರಿಯ ಗಾಯಕ ಲಕಿ ಅಲಿ ಇವರ ಹೇಳಿಕೆ !

ಈ ಬಗ್ಗೆ ಜಾತ್ಯತೀತರು ಮಾತನಾಡುವರೇ ? – ಸಂಪಾದಕರು

ಜನಪ್ರಿಯ ಗಾಯಕ ಲಕಿ ಅಲಿ

ಮುಂಬಯಿ – ಹಲಾಲ್ ಮಾಂಸ ಇಸ್ಲಾಮರೇತರಿಗಾಗಿ ಅಲ್ಲ; ಎಂದರೆ ಯಾರು ಇಸ್ಲಾಂನ ಅನುಯಾಯಿಗಳಲ್ಲ ಅವರಿಗಾಗಿ ಇದು ಅಲ್ಲ, ಇಂದು ಜನಪ್ರಿಯ ಗಾಯಕ ಲಕಿ ಅಲಿ ಇವರು ಫೇಸ್ ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

ಲಕಿ ಅಲಿ ಇವರು ಈ ಪೋಸ್ಟ್‍ನಲ್ಲಿ, `ಈಗ ಹೆಚ್ಚಿನ ಕಂಪನಿಗಳು ಹಲಾಲ್ ಪ್ರಮಾಣಪತ್ರ ಪಡೆದು ವಸ್ತುಗಳನ್ನು ಮಾರಲು ಯೋಚಿಸುತ್ತಿದ್ದಾರೆ. ಆದ್ದರಿಂದ ಜನರಿಗೆ ತೊಂದರೆ ಆಗುತ್ತಿದ್ದರೆ, ಮಾರಾಟಗಾರರು ಅದನ್ನು ಮಾರಾಟದಿಂದ ಬೇರ್ಪಡಿಸಬೇಕು. `ಹಲಾಲ್’ ಇದು ಅರಬಿ ಶಬ್ದವಾಗಿದೆ. ಇದರ ಅರ್ಥ `ಯೋಗ್ಯ’ ಎಂದಾಗುತ್ತದೆ.’ ಎಂದು ಹೇಳಿದರು.